ದೇಶಕ್ಕೆ ಸಮರ್ಥ ನಾಯಕತ್ವ ಅಗತ್ಯ: ಮಂಜುನಾಥ್
ಸಾಗರ: ದೇಶಕ್ಕೆ ನಾಮ್ ಕೇ ವಾಸ್ತೆ ಪ್ರಧಾನಿಯ ಬದಲಾಗಿ ಸಮರ್ಥ ನಾಯಕತ್ವ ನೀಡುವ ಮೋದಿಯಂತಹ ನಾಯಕನ ಅಗತ್ಯವಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಆಯನೂರು ಮಂಜುನಾಥ್ ಹೇಳಿದರು.
ಪಟ್ಟಣದಲ್ಲಿ ಗುರುವಾರ ಬಿಜೆಪಿ ಘಟಕದ ನೂತನ ಕಚೇರಿ ಉದ್ಘಾಟಿಸಿ, ಸರ್ದಾರ್ ವಲ್ಲಭ ಭಾಯ್ ಪಟೇಲ್ ಏಕತಾ ಲೋಹ ಸಂಗ್ರಹ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಶ್ವದ ದೃಷ್ಟಿಯಲ್ಲಿ ಭಾರತದ ಸಾರ್ವಭೌಮತ್ವ ಪ್ರಶ್ನಿಸುವಂತಹ ಸ್ಥಿತಿಯನ್ನು ಯುಪಿಎ ಸರ್ಕಾರ ಮಾಡಿದೆ. ಭಾರತ ಬಲಿಷ್ಟ ರಾಷ್ಟ್ರ ಎಂಬ ಕಲ್ಪನೆ ದೇಶವಾಸಿಗಳಿಂದ ದೂರವಾಗುತ್ತಿದೆ. ರಾಜತಾಂತ್ರಿಕ ಸಂಬಂಧಗಳ ಕೊರತೆಯಿದಾಗಿ ಚೀನಾ, ಪಾಕಿಸ್ತಾನ, ಬಾಂಗ್ಲಾ ದೇಶಗಳು ನಮ್ಮ ಗಡಿ ಪ್ರವೇಶಿಸುತ್ತಿದ್ದು, ಅಮೇರಿಕಾದಲ್ಲಿ ಭಾರತದ ಮಹಿಳಾ ರಾಯಭಾರಿಯನ್ನು ಅಮಾನಿಸುವ ಕೆಲಸ ಮಾಡುತ್ತಿದ್ದರೂ ನಮ್ಮ ಪ್ರಧಾನಿ ಈ ಬಗ್ಗೆ ಚಕಾರ ಎತ್ತದ ಸ್ಥಿತಿಗೆ ದೇಶ ತಲುಪಿದೆ ಎಂದರು.
ಜಿಪಂ ಮಾಜಿ ಸದಸ್ಯ ಬಿ.ಆರ್. ಜಯಂತ್ ಮಾತನಾಡಿದರು.
ಸ್ವಾತಂತ್ರ್ಯ ಹೋರಾಟಗಾರ ಹಾಲಪ್ಪಗೌಡ ಆವಿನಹಳ್ಳಿ ಸರ್ದಾರ್ ವಲ್ಲಭಾ ಬಾಯ್ ಪಟೇಲ್ ಏಕತಾ ಪ್ರತಿಮೆಯ ಲೋಹ ಸಂಗ್ರಹಣಾ ಅಭಿಯಾನದ ಕಿಟ್ ವಿತರಿಸಿದರು.
ಲೋಹ ಸಂಗ್ರಹಣಾ ಅಭಿಯಾನ ಕುರಿತು ಜಿಲ್ಲಾ ಸಂಚಾಲಕ ಅರವಿಂದ್ ಮಾತನಾಡಿದರು. ಪಕ್ಷದ ಅಧ್ಯಕ್ಷ ಚೇತನರಾಜ್ ಅಧ್ಯಕ್ಷತೆ ವಹಿಸಿದ್ದರು. ಯು.ಎಚ್. ರಾಮಪ್ಪ, ಸತೀಶಬಾಬು, ಲೋಹ ಸಂಗ್ರಹಣಾ ಅಭಿಯಾನದ ತಾಲೂಕು ಸಂಚಾಲಕ ಉಲ್ಲಾಸ್ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

