ಸ್ಕೌಟ್ ಭವನದಲ್ಲಿ ಗಣರಾಜ್ಯೋತ್ಸವ ಸಂಭ್ರಮ
ಕ.ಪ್ರ.ವಾರ್ತೆ , ಶಿವಮೊಗ್ಗ , ಜ. 26
ಭಾನುವಾರದ ಮಟ್ಟಿಗೆ ಜಿಲ್ಲಾ ಸ್ಕೌಟ್ ಭವನ ಜಗಮಗಿಸುತ್ತಿತ್ತು. ಒಂದೆಡೆ ಮಕ್ಕಳ ಶಿಸ್ತಿನ ಅನಾವರಣವಾದರೆ ಮತ್ತೊಂದೆಡೆ ಸ್ಪರ್ಧೆ, ಪ್ರದರ್ಶನದ ಮೂಲಕ ಮಕ್ಕಳ ಚಿಲಿಪಿಲಿ ಕಲರವ ಮನೆ ಮಾಡಿತ್ತು.
ಇದಕ್ಕೆಲ್ಲಾ ಕಾರಣವಾಗಿದ್ದು, ಮಲೆನಾಡು ಓಪನ್ ಗ್ರೂಪ್ ಹಮ್ಮಿಕೊಂಡ ಗಣರಾಜ್ಯೋತ್ಸವ ಕಾರ್ಯಕ್ರಮ.
ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆ ನೋಂದಾಯಿತ ಮಲೆನಾಡು ಓಪರ್ ಗ್ರೂಪ್ ತಂಡ ಸ್ಕೌಂಟಿಂಗ್ ಚಳವಳಿಯಲ್ಲಿ ಆಸಕ್ತಿಯಿರುವ ಸಮಾಜದ ವಿವಿಧ ಸ್ತರಗಳಲ್ಲಿರುವ, ಸಮಾಜ ಸೇವೆಯಲ್ಲಿ ಮುಡಿಪಾಗಿರುವ ಮಕ್ಕಳು, ಯುವಕರು ಮತ್ತು ವಯಸ್ಕ ನಾಯಕರ ತಂಡ. ಈ ತಂಡ 30 ವರ್ಷ ಪೂರೈಸಿ 31ನೇ ವರ್ಷಕ್ಕೆ ಕಾಲಿಡುತ್ತಿದೆ.
ಪ್ರತಿ ವರ್ಷ ನವದೆಹಲಿಯಲ್ಲಿ ನಡೆಯುವ ಬೀಟಿಂಗ್ರಿಟ್ರೀಟ್ ಕಾರ್ಯಕ್ರಮದ ಮಾದರಿಯಲ್ಲಿ ಕಳೆದ 14 ವರ್ಷಗಳಿಂದ ಶಿವಮೊಗ್ಗದಲ್ಲೂ ಕಾರ್ಯಕ್ರಮ ನಡೆಸಿಕೊಂಡು ಬಂದಿದೆ.
ಏನೇನಿತ್ತು...?: ಭಾನುವಾರ ಜಿಲ್ಲಾ ಸ್ಕೌಟ್ ಭವನದ ಆವರಣದಲ್ಲಿ ಚಿತ್ರಕಲಾ ಸ್ಪರ್ಧೆ, ಚರ್ಚಾಸ್ಪರ್ಧೆ, ರಂಗೋಲಿ ಸ್ಪರ್ಧೆ, ಬ್ಯಾಂಡ್ ಪ್ರದರ್ಶನ ಹಾಗೂ ರಿಟ್ರೀಟ್ ಕಾರ್ಯಕ್ರಮಗಳು ನಡೆದವು.
ಬೆಳಗ್ಗೆ 7.15ಕ್ಕೆ ನಡೆದ ಕಾರ್ಯಕ್ರಮದಲ್ಲಿ ಸ್ಕೌಟ್ಗೈಡ್ ಪಥ ಸಂಚಲನ, ಅದಕ್ಕಿಂತ ಮುಂಚಿತವಾಗಿ ಧ್ವಜಾರೋಹಣ ನೆರವೇರಿತು. ಜಿಲ್ಲಾ ಸಂಸ್ಥೆ ಹಾಗೂ ಸ್ಥಳೀಯ ಸಂಸ್ಥೆ ಪದಾಧಿಕಾರಿಗಳು ಹಾಜರಿದ್ದರು.
ಮಧ್ಯಾಹ್ನ ಎಕ್ಸ್ಪ್ರೆಸ್ ಪಬ್ಲಿಕೇಷನ್ಸ್ ಶಿವಮೊಗ್ಗ ಶಾಖಾ ವ್ಯವಸ್ಥಾಪಕ ಲಕ್ಷ್ಮೀನಾರಾಯಣ ಮೂರ್ತಿಯವರು ವಿವಿಧ ಸ್ಪರ್ಧೆಗಳಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಂದು ಮನೆಗಳಲ್ಲಿ ಮಕ್ಕಳಿಗೆ ಸಂಸ್ಕೃತಿ, ಶಿಸ್ತಿನ ಬಗ್ಗೆ ಅರಿವು ಮೂಡಿಸುತ್ತಿಲ್ಲ. ಟಿವಿ, ಕಂಪ್ಯೂಟರ್, ಮೊಬೈಲ್ಗಳು ಮಕ್ಕಳ ದಿಕ್ಕುತಪ್ಪಿಸುತ್ತಿವೆ. ಇಂತಹ ಸಂದರ್ಭದಲ್ಲಿ ಸ್ಕೌಟ್ ಮತ್ತು ಗೈಡ್ಸ್ ಅತ್ಯುತ್ತಮ ಕಾರ್ಯಮಾಡುತ್ತಿವೆ. ಪೋಷಕರೂ ಸಹ ಈ ಬಗ್ಗೆ ಯೋಚಿಸುವುದು ಅಗತ್ಯವೆಂದರು. ಭಾರತ ಸ್ಕೌಟ್ಸ್ ಮತ್ತು ಗೈಡ್ ಜಿಲ್ಲಾ ಕಾರ್ಯದರ್ಶಿ ಕೆ.ಪಿ. ಬಿಂದುಕುಮಾರ್ ಉಪಸ್ಥಿತರಿದ್ದರು.
ಮಧ್ಯಾಹ್ನ ಸಮಾರೋಪ ಹಾಗೂ ಬ್ಯಾಂಡ್ಪ್ ಪ್ರದರ್ಶನ, ರಿಟ್ರೀಟ್ ನಡೆಯಿತು. ಶಾಲಾ ಮಕ್ಕಳು ಅಚ್ಚುಕಟ್ಟಾಗಿ ಬ್ಯಾಂಡ್ ಪ್ರದರ್ಶನ ನಡೆಸಿದರು.
ಎಚ್.ಡಿ. ರಮೇಶ್ ಶಾಸ್ತ್ರಿ, ಜಿಪಂ ಮುಖ್ಯ ಕಾರ್ಯದರ್ಶಿ ಸಸಿಕಾಂತ್ ಸೆಂಥಿಲ್, ಎಸ್.ಉಮೇಶ್, ಕೆ. ರವಿ, ಎಚ್. ಪರಮೇಶ್ವರಪ್ಪ ಮೊದಲಾದವರು ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

