ಶಿವಮೊಗ್ಗ

ಖರೀದಿ ಕೇಂದ್ರ ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ

Published On :

ಶಿರಾಳಕೊಪ್ಪ: ಶಿರಾಳಕೊಪ್ಪ ಖರೀದಿ ಕೇಂದ್ರ ಗೊಂದಲದ ಗೂಡಾಗಿದ್ದು, ಅವ್ಯವಸ್ಥೆ ಖಂಡಿಸಿ ರೈತರು, ಹಮಾಲರು ಮಂಗಳವಾರ ಪ್ರತಿಭಟನೆ ನಡೆಸಿದರು.
ಹಮಾಲರ ಸಮಸ್ಯೆ: ಖರೀದಿ ಕೇಂದ್ರದಲ್ಲಿ ಸಾಕಷ್ಟು ರೈತರ ಬತ್ತವಿದ್ದರೂ ಲಾರಿಗಳು ಬರುತ್ತಿಲ್ಲ. ಕಳೆದ ಮೂರು ದಿನಗಳಿಂದ ಕೆಲಸವಿಲ್ಲದೆ ಉಪವಾಸ ಬೀಳುವಂತಾಗಿದೆ ಎಂದು ಬಂದ ಲಾರಿ ಲೋಡ್ ಮಾಡದೆ ಹಮಾಲರು ಪ್ರತಿಭಟನೆ ನಡೆಸಿದರು.
ರೈತರ ಸಮಸ್ಯೆ: ಉಡಗಣಿ- ತಾಳಗುಂದ ಹೋಬಳಿ ರೈತ ಹೋರಾಟ ಸಮಿತಿ ಆಶ್ರಯದಲ್ಲಿ ಪ್ರತಿಭಟನೆ ಮಾಡಿ ಖರೀದಿ ಕೇಂದ್ರದ ಬಾಗಿಲು ಹಾಕಿದ ರೈತರು, ಬತ್ತವನ್ನು ಸರಿಯಾದ ಸಮಯಕ್ಕೆ ಸಾಗಿಸದೆ ಬಯಲಲ್ಲಿ ಬಿಡಲಾಗಿದೆ.
ಕಳೆದ ವಾರ ಶಿರಾಳಕೊಪ್ಪ ಸುತ್ತಮುತ್ತ ಮಳೆ ಆಗಿದೆ. ಬಿಸಿಲಲ್ಲಿ ಬಿದ್ದಿರುವ ಬತ್ತ ಕಾಯುವವರಿಲ್ಲದೆ ಕುರಿ, ದನ, ಹಂದಿ ಪಾಲಾಗುತ್ತಿವೆ. ಜತೆಗೆ ಕಳ್ಳರ ಕಾಟ ಇದೆ. ಇದರಿಂದ ರೈತರಿಗೆ ಮುಕ್ತಿ ಕೊಡಿ ಎಂದು ರೈತ ಹೋರಾಟ ಸಮಿತಿ ಅಧ್ಯಕ್ಷ ಮುಗಳಿಕೊಪ್ಪದ ರಾಜಣ್ಣ ಅವರು ಒತ್ತಾಯಿಸಿದರು.
ಹಣ ಬಂದಿಲ್ಲ: ಬತ್ತ ಖರೀದಿ ಮಾಡುವ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಒಂದು ವಾರದಲ್ಲಿ ಹಣ ಕೊಡುತ್ತೇವೆ ಎಂದಿದ್ದರು. ಬತ್ತ ಖರೀದಿಸಿ 25 ದಿನಗಳಾದರೂ ಹಣ ನೀಡಿಲ್ಲ. ಹೀಗಾದರೆ ರೈತರ ಗತಿ ಏನು ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಲಾರಿ ಸಮಸ್ಯೆ: ಶಿರಾಳಕೊಪ್ಪದಿಂದ ಖರೀದಿ ಕೇಂದ್ರದ ಬತ್ತ ಸಾಗಿಸಲು ಈ ಭಾಗದ ಲಾರಿಗಳು ಸಿದ್ಧವಿದ್ದರೂ ಇಲ್ಲಿಂದ ಲಾರಿ ಲೋಡ್ ಮಾಡಿಕೊಂಡು ಹೋದರೆ ಎರಡು ದಿನ ಕಾಯಬೇಕು. ಇದರಿಂದ ಲಾರಿ ಮಾಲೀಕರ ಗತಿ ಏನು ಎಂದು ಲಾರಿ ಚಾಲಕ ಪ್ರಶ್ನಿಸಿದರು.
ಖರೀದಿ ಕೇಂದ್ರದ ಮ್ಯಾನೇಜರ್ ಮಾತನಾಡಿ, ಲಾರಿಗಾಗಿ ನಿರಂತರ ಪ್ರಯತ್ನ ನಡೆಸಿದ್ದೇವೆ. ಲಾರಿ ಬಂದರೆ ತಕ್ಷಣ ಲೋಡ್ ಮಾಡಿಸುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.