ಶಿವಮೊಗ್ಗ

ರಾತ್ರೋ ರಾತ್ರಿ ಮೇಲೆದ್ದ ಆಧಾರ್ ಕೇಂದ್ರ

Published On :

ಕ.ಪ್ರ.ವಾರ್ತೆ, ಸೊರಬ, ಜ.29
ಯಾವುದೇ ಆಧಾರವಿಲ್ಲದ ಆಧಾರ ಕಾರ್ಡ್ ನೋಂದಣಿ ಕೇಂದ್ರಕ್ಕೆ ರಾತ್ರಿ ವೇಳೆ ಆಗಮಿಸಿ, ತಲಾ ರು. 30 ಶುಲ್ಕ ಕೇಳಿದ್ದು, ಹಲವಾರು ಊಹಾಪೋಹಗಳಿಗೆ ಕಾರಣವಾಗಿದೆ.
ಮಂಗಳವಾರ ರಾತ್ರಿ ಚಂದ್ರಗುತ್ತಿ ಸಮೀಪದ ಜೋಳದಗುಡ್ಡೆ ಗ್ರಾಮಕ್ಕೆ ಏಕಾಏಕಿ ಬಂದಿಳಿದ ಕೆಲವರು ತಾವು ಆಧಾರ ಕಾರ್ಡ್ ನೋಂದಣಿ ಮಾಡುತ್ತೇವೆ ಎಂದು ಠಿಕಾಣಿ ಹೂಡಿದ್ದಾರೆ. ನೋಂದಣಿಗೆ ತಲಾ ರು. 30 ಶುಲ್ಕ ನೀಡಬೇಕು ಎಂದಿದ್ದಾರೆ. ಶುಲ್ಕಕ್ಕೆ ರಸೀತಿ ನೀಡುತ್ತೀರಾ ಎಂದು ಕೇಳಿದ್ದಕ್ಕೆ ಇಲ್ಲ ಎಂದಿದ್ದಾರೆ.
ನಂತರ ರು. 30 ವಿಚಾರದಲ್ಲಿ 15, 10 ಹೀಗೆ ಚೌಕಾಶಿ ನಡೆದಿದೆ, ಅದಕ್ಕೊಪ್ಪದ ಅವರು ಆಧಾರ ನೋಂದಣಿಗಾರರು ರು. 30 ಕೊಟ್ಟರೆ ಮಾತ್ರ ಆಧಾರ್ ಕಾರ್ಡ್ ಇಲ್ಲದಿದ್ದರೆ ಇಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.
ಅತ್ತ ನೋಂದಣಿಗೆ ಶಾಲೆ ಕೊಠಡಿಯೊಂದರಲ್ಲಿ ಅಗತ್ಯವಿರುವ ಉಪಕರಣಗಳನ್ನು ಜೋಡಿಸಿಕೊಂಡು, ಮಾಹಿತಿ ಸಂಗ್ರಹಣೆ ನಡೆಸುತ್ತಿದ್ದಾರೆ.
ಸದ್ದಿಲ್ಲದೆ ನೋಂದಣಿ: ಕೇಂದ್ರದಿಂದ ಹೊರಗೆ ಇಷ್ಟೆಲ್ಲ ಚರ್ಚೆ ನಡೆಯುತ್ತಿರುವುದರ ಮಧ್ಯೆಯೇ ರಾತ್ರಿ ವೇಳೆ ಸದ್ದುಗದ್ದಲವಿಲ್ಲದೆ ಒಂದಿಷ್ಟು ಜನ ರು. 30 ನೀಡಿ ಆಧಾರ್ ಕಾರ್ಡ್ ನೋಂದಣಿ ಮಾಡಿಸಿಕೊಂಡಿದ್ದಾರೆ.
ಈ ದಿಡೀರ್ ಕೇಂದ್ರದ ಕುರಿತು ಕೆಲವರು ಗ್ರಾಪಂ ಸದಸ್ಯರ ಗಮನಕ್ಕೆ ತಂದಿದ್ದಾರೆ. ಸದಸ್ಯರು ಹೌದು ನಾವೇ ಕರೆಸಿದ್ದು, ರು. 30 ಕೊಟ್ಟು ಸಹಕರಿಸಿ, ಆಧಾರ್ ಕಾರ್ಡ್ ಮಾಡಿಸಿಕೊಳ್ಳಿ, ಇಲ್ಲದಿದ್ದರೆ, ಆಧಾರ್ ಕಾರ್ಡ್ ನೋಂದಣಿ ಬೇಡ ಎಂದು ಬರೆದುಕೊಡಿ ಎಂದಿದ್ದಾರೆ.
ಆಧಾರ್ ಕಾರ್ಡ್‌ಗೆ ನಯಾಪೈಸೆಯೂ ಖರ್ಚಿಲ್ಲದೆ ನೋಂದಾಯಿಸಿಕೊಳ್ಳಬೇಕು ಎಂದು ಈಗಾಗಲೇ ಹಲವು ಬಾರಿ ಅಧಿಕೃತ ಸೂಚನೆ ನೀಡಲಾಗಿದೆ. ಅಧಿಕೃತ ಕೇಂದ್ರಗಳ ಕುರಿತು ಸಹ ಪ್ರಚಾರಪಡಿಸಲಾಗಿದೆ. ಹೀಗೆ ಎಲ್ಲೂ ಗ್ರಾಮಾಂತರ ಪ್ರದೇಶದಲ್ಲಿ ನೋಂದಣಿ ಕೇಂದ್ರ ಸ್ಥಾಪನೆ ಆಗಿಲ್ಲ. ಅದರಲ್ಲೂ ಹೀಗೆ ಗ್ರಾಮಾಂತರ ಪ್ರದೇಶಕ್ಕೆ ಬರುವವರು ರಾತ್ರಿ ವೇಳೆಯೇ ದಿಢೀರ್ ಬಂದು ತರಾತುರಿ ನೋಂದಣಿ ಮಾಡುವ ಹಿನ್ನೆಲೆ ಏನು, ಇವರು ನಿಜವಾಗಿಯೂ ನೋಂದಣಿ ಮಾಡುತ್ತಾರಾ ಅಥವಾ ನೋಂದಣಿ ಹೆಸರಲ್ಲಿ ಒಂದಿಷ್ಟು ದುಡ್‌ಡು ಮಾಡಿಕೊಳ್ಳಲು ಬಂದಿದ್ದಾರಾ ಇತ್ಯಾದಿ ಸಂದೇಹ ಮೂಡಿದೆ. ಬುಧವಾರ ಮತ್ತೆ  ಬರುತ್ತೇವೆ ಎಂದವರು ಬಂದಿಲ್ಲ. ಎಂದು ಗ್ರಾಮಸ್ಥರು ಪತ್ರಿಕೆ ಎದುರು ದೂರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.