ಶಿವಮೊಗ್ಗ

ಒತ್ತಡ, ಅತಿಯಾಸೆಯಿಂದ ರೋಗ ಹೆಚ್ಚಳ: ಸಂಸದ

Published On :

ಶಿರಾಳಕೊಪ್ಪ: ಯುವ ಜನಾಂಗ ಹಲವಾರು ರೋಗ- ರುಜಿನಗಳಿಂದ ಬಳಲುತ್ತಿರುವುದಕ್ಕೆ ಅತಿಯಾದ ಒತ್ತಡ ಹಾಗೂ ಅತಿಯಾದ ಆಸೆ ಕಾರಣ ಎಂದು ಸಂಸದ ಬಿ.ವೈ. ರಾಘವೇಂದ್ರ ವಿಷಾದ ವ್ಯಕ್ತಪಡಿಸಿದರು.
ತಡಗಣಿ ಗ್ರಾಮದಲ್ಲಿ ಆಯುಷ್ ಇಲಾಖೆಯಿಂದ ಆರೋಗ್ಯ ತಪಾಸಣೆ ಹಾಗೂ ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡಿ, ನಮಗೆ ಉಪಕಾರಿಯಾದ ಪ್ರಕೃತಿಯ ಮೇಲೆ ದೌರ್ಜ್ಯನ್ಯ ಹೆಚ್ಚಾಗುತ್ತಿವೆ. ಅದರ ವ್ಯತಿರಿಕ್ತ ಪರಿಣಾಮ ಮನುಷ್ಯರ ಮೇಲೆ ಆಗುತ್ತಿದ್ದು, ರೋಗಗಳು ಹೆಚ್ಚಾಗುತ್ತಿವೆ ಎಂದರು.
ಜಿಲ್ಲಾ ಆಯುಷ್ ಅಧಿಕಾರಿ ಮಹಮದ್ ಹುಸೇನ್ ಮಾತನಾಡಿ, ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ಎಂಬುದೆ ಸಮಸ್ಯೆ ಆಗಿದೆ. ಆಧುನಿಕ ಚಿಕಿತ್ಸಾ ಪದ್ಧತಿಯಿಂದ ಆರೋಗ್ಯ ಸರಿಪಡಿಸಲು ಆಗುವದಿಲ್ಲ ಎಂಬ ಸತ್ಯ ಅರಿತು ಇಂದು ಆಯುಷ್ ಇಲಾಖೆಗೆ ಹೆಚ್ಚು ಪ್ರಾಮುಖ್ಯತೆ ಕೊಡಲಾಗುತ್ತಿದೆ.
ಇಂದು ವಿಶ್ವಾದ್ಯಂತ ಔಷಧರಹಿತವಾಗಿ ಜೀವನ ನಡೆಸಲು ಯೋಗ, ಧ್ಯಾನ, ವ್ಯಾಯಾಮದ ಮೊರೆ ಹೋಗುತ್ತಿದ್ದಾರೆ. ಮನೆಯಲ್ಲಿ ಇರುವ ಹಾಗೂ ಸುಲಭವಾಗಿ ರೋಗನಿವಾರಣೆ ಆಗುವಂತಹ ತುಳಸಿ, ಶುಂಠಿಯಂತಹ ವಸ್ತು ಹಾಗು ನಮ್ಮ ಸುತ್ತಲಿರುವ ಗಿಡಮೂಲಿಕೆ ಬಗ್ಗೆ ಗಮನಕೊಡುತ್ತಿಲ್ಲ.ನಾವು ಉಪಯೋಗಿಸುವ ವಸ್ತುಗಳನ್ನು ಮೊದಲು ನಾವು ಸಿದ್ಧಪಡಿಸಿಕೊಳ್ಳುತ್ತಿದ್ದೆವು. ಇಂದು ಅಂಗಡಿಯಲ್ಲಿ ರೆಡಿಮೇಡ್ ಪದಾರ್ಥಗಳನ್ನು ತರುವುದರಿಂದ ದುಷ್ಪರಿಣಾಮ ಉಂಟಾಗುತ್ತಿದೆ. ಹಾಗೆಯೇ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ ಎಂದರು.
ಅಧ್ಯಕ್ಷತೆಯನ್ನು ತಡಗಣಿ ಗ್ರಾಪಂ ಅಧ್ಯಕ್ಷ ಕೆ.ಮಂಜುನಾಥ ವಹಿಸಿ ಮಾತನಾಡಿದರು. ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ದಾನಿ ರುದ್ರಪ್ಪ ರವಿ ಶಾನಭೋಗ, ಇಲಾಖೆಯ ಅಧಿಕಾರಿಗಳು ವೈದ್ಯರು ಹಾಗು ಗ್ರಾಪಂ ಸದಸ್ಯರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.