ಆಕ್ಷರದಾಸೋಹ ಕಾರ್ಯಕರ್ತೆಯರ ಪ್ರತಿಭಟನೆ
ಭದ್ರಾವತಿ: ಬಿಸಿಯೂಟ ನೌಕರರಿಗೆ ತಕ್ಷಣ ರು. 3000 ಕನಿಷ್ಠ ವೇತನ ಜಾರಿ ಮಾಡಬೇಕು ಹಾಗೂ ಅಕ್ಷರ ದಾಸೋಹ ನೌಕರರಿಗೆ ಕನಿಷ್ಠ ಕೂಲಿ ನಿರ್ಧರಿಸಬೇಕು ಇವೇ ಮುಂತಾದ ಬೇಡಿಕೆ ಈಡೇರಿಸಲು ಆಗ್ರಹಿಸಿ ತಾಲೂಕು ಆಕ್ಷರದಾಸೋಹ ನೌಕರರ ಸಂಘದ ಕಾರ್ಯಕರ್ತೆಯರು ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಸಿ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಸಿದರು.
ಬಿಸಿಯೂಟ ನೌಕರರ ನೇಮಕ ಕುರಿತು ಸೇವಾ ನಿಯಮಾವಳಿ ರೂಪಿಸಬೇಕು, ಕ್ಲಸ್ಟರ್ ಮಟ್ಟದ ಸಭೆ ಪ್ರತಿ ತಿಂಗಳು ನಡೆಯಬೇಕು, ಹಾಜರಾತಿ ಆಧಾರದಲ್ಲಿ ಕಳೆದ 11 ವರ್ಷಗಳಿಂದ ಕೆಲಸ ಮಾಡುತ್ತಿರುವ ಬಿಸಿಯೂಟ ನೌಕರರನ್ನು ಕೆಲಸದಿಂದ ತೆಗೆಯುವ ಕ್ರಮ ನಿಲ್ಲಿಸಬೇಕು, ಹಾಜರಾತಿ ಆಧಾರದ ಮೇಲೆ ಶಾಲೆಗಳನ್ನು ವಿಲೀನಗೊಳಿಸುವಾಗ ಶಿಕ್ಷಕರನ್ನು ವರ್ಗಾವಣೆ ಮಾಡುವ ಹಾಗೆಯೇ ಆಡುಗೆಯವರನ್ನು ಸಹ ಹತ್ತಿರದ ಶಾಲೆಗಳಿಗೆ ವರ್ಗಾವಣೆ ಮಾಡಬೇಕು ಎಂಬ ಹಲವು ಬೇಡಿಕೆಗಳನ್ನು ಶೀಘ್ರ ಪೂರೈಸುವಂತೆ ಮನವಿಯಲ್ಲಿ ಕೋರಲಾಗಿದೆ.
ಕೊಟ್ಟ ಮಾತಿಗೆ ತಪ್ಪಿದ ಸರ್ಕಾರ: 2013ರ ಡಿಸೆಂಬರ್ 2 ರಿಂದ ಅನಿರ್ದಿಷ್ಟಾವಧಿ ಹೋರಾಟವನ್ನು ಬೆಂಗಳೂರಿನಲ್ಲಿ ನಡೆಸಿದಾಗ ಮಣಿದ ಶಿಕ್ಷಣ ಸಚಿವರು ಡಿ 5ರಂದು ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ರು. 500 ಹೆಚ್ಚಳ ಕುರಿತು ಹೇಳಿಕೆ ನೀಡಿದ್ದರು. ಏಪ್ರಿಲ್‌ನಿಂದ ಇದನ್ನು ಜಾರಿಗೊಳಿಸುವುದಾಗಿ ಹೇಳಿದ ಸರ್ಕಾರ ಈಗ ಕೊಟ್ಟ ಮಾತಿಗೆ ತಪ್ಪಿ ನಡೆದಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಆಮ್ ಆದ್ಮಿ ಭಿಮಾ ಯೋಜನೆಯಲ್ಲಿ ಜನಶ್ರೀ ಭಿಮಾ ಯೋಜನೆ ವಿಲೀನಗೊಳಿಸಲಾಗಿದ್ದು ಇದರಲ್ಲಿ ಬಿಪಿಎಲ್ ಕಾರ್ಡ್ ಇದ್ದವರಿಗೆ ಮಾತ್ರ ಎಂಬ ತಿದ್ದುಪಡಿ ಮಾಡಿದ್ದರೂ ಈವರೆಗೆ ಮಾರ್ಪಡಿಸಿದ ಸುತ್ತೋಲೆ ಬಂದಿಲ್ಲ ಎಂದು ದೂರಿದರು.
ತಾಲೂಕು ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷೆ ಆರ್.ಹನುಮಮ್ಮ, ಜಿಲ್ಲಾಧ್ಯಕ್ಷೆ ಅಕ್ಕಮ್ಮ, ಲತಾ ಮತ್ತು ಮುನಿಯಮ್ಮ, ಉಪಾಧ್ಯಕ್ಷರಾದ ವಿಮಲಾಬಾಯಿ ಮತ್ತು ಮಂಜುಳ, ಸರಸ್ವತಿ, ರೇಣುಕಾಬಾಯಿ, ಮೊಸರಳ್ಳಿ ಪಾರ್ವತಮ್ಮ, ಭೋವಿ ಕಾಲೋನಿ ಭಾಗ್ಯಮ್ಮ, ಸಿದ್ದಾಪುರ ಬಸಮ್ಮ, ಕೆಂಚೇನಹಳ್ಳಿ ಇಂದ್ರಮ್ಮ, ನಿಂಬೆಗೊಂದಿ ಮಂಜುಳ, ಹೊಳೆಹೊನ್ನೂರು ಶಾರದಮ್ಮ, ಕೂಡ್ಲಿಗೆರೆ ರಾಮದೇವಿ, ಹೊಸಮನೆ ಸುಶೀಲಮ್ಮ, ದೊಡ್ಡೇರಿ ಲಕ್ಷ್ಮಮ್ಮ, ಹಿರಿಯೂರು ಮೀರಾ, ಭಂಡಾರಹಳ್ಳಿ ಭಾಗ್ಯಮ್ಮ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

