ಶಿಕಾರಿಪುರ ತಾಪಂ ಅಧ್ಯಕ್ಷೆ ಸವಿತಾ
ಶಿಕಾರಿಪುರ: ಇಲ್ಲಿನ ತಾ.ಪಂ ನೂತನ ಅಧ್ಯಕ್ಷ, ಉಪಾಧ್ಯಕ್ಷರಾಗಿ ಬಿಜೆಪಿಯ ಸವಿತಾ ಬಾಯಿ ಹಾಗೂ ಅನಸೂಯಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
17 ಸದಸ್ಯರ ಶಿಕಾರಿಪುರ ತಾ.ಪಂ ಯಲ್ಲಿ ಬಿಜೆಪಿ 12 ಸ್ಥಾನವನ್ನು ಹೊಂದಿದ್ದು, ಅಂತಿಮ ಹಾಗೂ 3 ನೇ ಅವಧಿಯ ಅಧ್ಯಕ್ಷ ಸ್ಥಾನ ಪರಿಶಿಷ್ಟ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು ಈ ದಿಸೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಸವಿತಾಬಾಯಿ ಹಾಗೂ ಕಾಂಗ್ರೆಸ್ನ ಸುಜಾತಾ ನಾಮಪತ್ರ ಸಲ್ಲಿಸಿದ್ದರು. ಅಂತಿಮ ಕ್ಷಣದಲ್ಲಿ ಸುಜಾತಾ ಸಲ್ಲಿಸಿದ ನಾಮಪತ್ರ ಹಿಂಪಡೆದ ಕಾರಣ ಸುಣ್ಣದಕೊಪ್ಪ ಕ್ಷೇತ್ರದ ಸದಸ್ಯೆ ಸವಿತಾಬಾಯಿ ಶಿವಕುಮಾರ ನಾಯ್ಕ ಅವರ ಆಯ್ಕೆಯನ್ನು ಹಾಗೂ ಸಾಮಾನ್ಯ ಮಹಿಳೆಗೆ ನಿಗದಿಯಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಕೇವಲ ಬಿಜೆಪಿ ಹಾಗೂ ತೊಗರ್ಸಿ ಕ್ಷೇತ್ರದ ಸದಸ್ಯೆ ಅನಸೂಯಮ್ಮ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಡಾ.ಉದಯಕುಮಾರ ಶೆಟ್ಟಿ ಅವಿರೋಧ ಆಯ್ಕೆಯನ್ನು ಘೋಷಿಸಿದರು.
ಆಯ್ಕೆಯಾದವರನ್ನು ಅಭಿನಂದಿಸಿದ ಮಾಜಿ ಸಂಸದ ರಾಘವೇಂದ್ರ ಮಾತನಾಡಿ, ರಾಜ್ಯ ದೇಶದಲ್ಲಿ ಬರಗಾಲದ ಛಾಯೆ ಆವರಿಸಿದ್ದು ಇಂಥ ಸಂದಿಗ್ಧ ಸ್ಥಿತಿಯಲ್ಲಿ ತಾ.ಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಮಹಿಳೆಯರು ಆಯ್ಕೆಯಾಗಿ ಸವಾಲನ್ನು ಸಮರ್ಥವಾಗಿ ನಿಭಾಯಿಸಿ ಜಾಣ್ಮೆಯನ್ನು ತೋರಬೇಕಾಗಿದೆ ಎಂದರು.
ಪಕ್ಷದ ಸಂಘಟನೆ ಅತ್ಯಂತ ಪ್ರಮುಖವಾಗಿದ್ದು ಇದೇ ಪ್ರಥಮ ಬಾರಿಗೆ ಯಡಿಯೂರಪ್ಪನವರು ಪಕ್ಷದ ಅಭ್ಯರ್ಥಿಯಾಗದ ವಿಧಾನಸಭಾ ಚುನಾವಣೆಯನ್ನು ಎದುರಿಸಬೇಕಾಗಿದ್ದು ಪಕ್ಷದ ಸಂಘಟನೆಗೆ ಸೀಮಿತವಾದ ವ್ಯಕ್ತಿಯನ್ನು ಆಯ್ಕೆಗೊಳಿಸಬೇಕಾದ ಬಹು ದೊಡ್ಡ ಜವಾಬ್ದಾರಿ ಹಾಗೂ ಪರೀಕ್ಷೆ ಕಾರ್ಯಕರ್ತರು ಹಾಗೂ ಮುಖಂಡರಿಗೆ ಎದುರಾಗಿದೆ. ಸಂಘಟನೆ ಸದೃಡವಾಗಿದ್ದಲ್ಲಿ ಮಾತ್ರ ಆಯ್ಕೆ ಸುಲಭ ಎಂದ ಅವರು ಪಕ್ಷದ ಕಚೇರಿ ಹಾಗೂ ಮನೆಯ ಬಾಗಿಲು ಸದಾಕಾಲ ಮುಕ್ತವಾಗಿದ್ದು ಎಲ್ಲರ ವಿಶ್ವಾಸಗಳಿಸುವಂತೆ ಮನವಿ ಮಾಡಿದರು.
ಬಿಜೆಪಿ ಸಂಘಟನಾ ಕಾರ್ಯದರ್ಶಿ ಕೆ.ಎಸ್ ಗುರುಮೂರ್ತಿ, ನೂತನ ಅಧ್ಯಕ್ಷೆ ಸವಿತಾಬಾಯಿ ಶಿವಕುಮಾರ್ ನಾಯ್ಕ ಮಾತನಾಡಿದರು.
ಸದಸ್ಯ ಲಕ್ಷ್ಮಣ ನಾಯ್ಕ್, ಹನುಮಂತ ನಾಯ್ಕ್, ಲೀಲಾವತಿ, ವೀರನಗೌಡ,ತಿಮ್ಮಣ್ಣ, ತಾ.ಪಂ ಇಒ ಡಾ.ಪ್ರಭಾಕರ್, ಜಿ.ಪಂ ಸದಸ್ಯ ಈಶ್ವರಪ್ಪ, ಬಂಗಾರಿ ನಾಯ್ಕ್, ಶಾಂತಮ್ಮ, ಮುಖಂಡ ಕೊಳಗಿ ರೇವಣಪ್ಪ, ಕವಲಿ ಸುಬ್ರಹ್ಮಣ್ಯ, ಹಾಲಪ್ಪ, ಶೇಖರಪ್ಪ, ಭೂಕಾಂತ್, ಚನ್ನವೀರಪ್ಪ, ನಿಂಗಪ್ಪಗೌಡ, ಒಂಕಾರಿ, ಸುರೇಶ್ ನಾಯ್ಕ್, ದೇವೇಂದ್ರನಾಯ್ಕ್ ಮತ್ತಿತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

