ಶಿವಮೊಗ್ಗ

ಶೆಮ್‌ರಾಕ್ ಶಾಲೆಯಲ್ಲಿ ಭಗವದ್ಗೀತೆ ಕಲಿಕೆ

Published On :

ಶಿವಮೊಗ್ಗ: ಭಗವದ್ಗೀತೆ ಜೀವನದ ವಿಶ್ವಕೋಶ. ಇದರಿಂದ ನಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಸಂಪನ್ಮೂಲ ವ್ಯಕ್ತಿ ಲಕ್ಷ್ಮಿ ಅಜಿತ್ ದಂತಿ ಹೇಳಿದರು. ಇಲ್ಲಿನ ವೆಂಕಟೇಶ್ ನಗರ ಬಡಾವಣೆ ಶೆಮ್ ರಾಕ್ ಶಾಲೆಯಲ್ಲಿ ಭಗವದ್ಗೀತೆ ತರಗತಿ ಪ್ರಾರಂಭಿಸಿ ಅವರು ಮಾತನಾಡಿದರು. ಸಂಪತ್ತು ನಮ್ಮ ದೇಹಕ್ಕೆ ಮಾತ್ರ ಸುಖ ನೀಡುತ್ತದೆ. ಆದರೆ ಆಧ್ಯಾತ್ಮಿಕ ವಿಚಾರಗಳು ನಮಗೆ ದೈಹಿಕ ಮತ್ತು ಮಾನಸಿಕವಾಗಿ ಲಾಭ ನೀಡುತ್ತದೆ. ಭಗವದ್ಗೀತೆಯ ಪ್ರತಿ ಶ್ಲೋಕ ಅರ್ಥಗರ್ಭಿತವಾಗಿದೆ ಎಂದರು. ಶಾಲೆಯ ಅಸೋಸಿಯೇಟ್ ಡೈರೆಕ್ಟರ್ ಜಗದೀಶ್‌ಗೌಡ ಅವರು ಭಗವದ್ಗೀತೆ ತರಗತಿ ಉದ್ಘಾಟಿಸಿ, ಕತ್ತಲೆ ಓಡಿಸಲು ದೀಪದ ಬೆಳಕು ಬೇಕು ಹಾಗೆಯೇ ಅಜ್ಞಾನ ಓಡಿಸಲು ಜ್ಞಾನದ ಬೆಳಕು ಬೇಕು. ಈ ಬೆಳಕು ಭಗವದ್ಗೀತೆಯಲ್ಲಿ ಸಿಗುತ್ತದೆ. ಇದರಲ್ಲಿರುವ ತತ್ವವನ್ನು ಜೀವನದಲ್ಲಿ ಅಳವಡಿಸಿ ಕೊಳ್ಳಬೇಕೆಂದರು. ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ಭಗವದ್ಗೀತೆಯ ಸಾರ ತಿಳಿಸಿಕೊಟ್ಟರೆ ಮಕ್ಕಳ ಓದಿನಲ್ಲಿ ಏಕಾಗ್ರತೆ ಹಾಗೂ ಉಚ್ಛಾರಣೆ, ಜ್ಞಾನ ವೃದ್ಧಿಯಾಗುತ್ತದೆ ಎಂದು ಹೇಳಿದರು. ಮುಖ್ಯೋಪಾಧ್ಯಾಯನಿ ಸುಷ್ಮಾ ನಾಡಿಗ್ ಹಾಗೂ ಸಿಬ್ಬಂದಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.