ಬ್ರಾಹ್ಮಣರಲ್ಲಿ ಸಂಘಟನೆಯ ಸವಾಲು: ನಂಜುಂಡಸ್ವಾಮಿ
ಶಿಕಾರಿಪುರ: ಸಮಾಜದಲ್ಲಿನ ಅನ್ಯಾಯ ಅಕ್ರಮ ವಿರೋಧಿಸುವ ಮನಸ್ಥಿತಿಯಿಂದ ವಿಪ್ರ ಸಮಾಜ ವಿಮುಖವಾಗುತ್ತಿದ್ದು ಸಂಘಟನೆ ಸವಾಲಾಗಿ ಪರಿಣಮಿಸಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಸಂಘಟನಾ ಕಾರ್ಯದರ್ಶಿ ಮ.ಸ. ನಂಜುಂಡಸ್ವಾಮಿ ಅಭಿಪ್ರಾಯಪಟ್ಟರು.
ಭಾನುವಾರ ಪಟ್ಟಣದ ಶ್ರೀದತ್ತಕೇವಲಾನಂದ ಆಶ್ರಮದಲ್ಲಿ ತಾಲೂಕು ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸಮಾಜದ ಪ್ರತಿಭಾನ್ವಿತರಿಗೆ ಪ್ರತಿಭಾ ಪುರಸ್ಕಾರ, ಸತ್ಯನಾರಾಯಣ ಪೂಜೆ ಹಾಗೂ ಸರ್ವ ಸದಸ್ಯರ ಸಭೆ ಉದ್ಘಾಟಿಸಿ ಮಾತನಾಡಿದರು.
ತಾಲೂಕಿನಲ್ಲಿ 2005 ರಲ್ಲಿ ಆರಂಭಗೊಂಡ ವಿಪ್ರ ಸಮಾಜ ಕೇವಲ ವಿಪ್ರರ ಹಿತ ಬಯಸದೆ ಸಮಸ್ತ ಸಮಾಜದ ಜತೆಗೆ ವಿಪ್ರರ ಅಭಿವೃದ್ಧಿಯ ಗುರಿಯನ್ನು ಉದ್ದೇಶವಾಗಿರಿಸಿಕೊಂಡಿದೆ ಎಂದ ಅವರು ವೈವಾಹಿಕ ಸಮಸ್ಯೆ ಸಮಾಜವನ್ನು ಹೆಚ್ಚಿನ ರೀತಿಯಲ್ಲಿ ಬಾದಿಸುತ್ತಿದ್ದು ಪರಿಹಾರಕ್ಕಾಗಿ ಈಗಾಗಲೇ 13 ಮಠಾಧೀಶರ ನೇತೃತ್ವದಲ್ಲಿ ಉತ್ತರಭಾರತದ ವಿಪ್ರ ಕನ್ಯೆಯರ ಪೋಷಕರನ್ನು ಸಂಪರ್ಕಿಸಲಾಗಿದೆ. ಶೀಘ್ರದಲ್ಲಿಯೇ ಉತ್ತಮ ಸಂದೇಶ ನಿರೀಕ್ಷಿಸಲಾಗುತ್ತಿದೆ ಎಂದು ತಿಳಿಸಿದರು.
ಮಠಾಧೀಶರನ್ನು ಉಪಪಂಗಡಗಳ ಮೂಲಕ ಗುರುತಿಸುವ ಸಂಕುಚಿತ ಭಾವನೆ ವಿರೋಧಿಸಿ ಇದರಿಂದಾಗಿ ಸಮಾಜದ ಸಂಘಟನೆ ಬಹು ದೊಡ್ಡ ಅಪಾಯ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಂಘಟನೆಯಲ್ಲಿ ಸಮಸ್ಯೆ, ಭಿನ್ನಾಭಿಪ್ರಾಯ ಉದ್ಭವಿಸಿದಲ್ಲಿ ಪದಾಧಿಕಾರಿಗಳು ಪರಸ್ಪರ ಚರ್ಚಿಸಿ ಬಗೆಹರಿಸಿಕೊಳ್ಳಬೇಕು ಎಂದರು.
ಶಿವಮೊಗ್ಗ ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಕನ್ನಡ ಸಹ ಪ್ರಾದ್ಯಾಪಕಿ ಡಾ. ಶುಭ ಮರವಂತೆ ಕೌಟುಂಬಿಕ ಸಾಮರಸ್ಯ ಹಾಗೂ ಸಂಸ್ಕಾರದ ಬಗ್ಗೆ ವಿಶೇಷ ಉಪನ್ಯಾಸದರು.
ಕಾರ್ಯಕ್ರಮದಲ್ಲಿ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪೋಷಕರ ಜತೆ ಅಭಿನಂದಿಸಲಾಯಿತು. ಎಸ್ಎಸ್ಎಲ್ಸಿಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನಗಳಿಸಿದ ಅಭಯ್ ಹೆಗಡೆ ಮಾತನಾಡಿದರು.
ತಾಲೂಕು ಸಂಘದ ಅಧ್ಯಕ್ಷ ಜೀವವಿಮಾ ನಿಗಮದ ಅಭಿವೃದ್ಧಿ ಅಧಿಕಾರಿ ಸತ್ಯನಾರಾಯಣರಾವ್ ಅದ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಂಘದ ಅಧ್ಯಕ್ಷ ಅಚ್ಯುತರಾವ್,ಎಸ್ಬಿಎಂ ಶಾಖಾ ವ್ಯವಸ್ಥಾಪಕ ಉದಯಶಂಕರ್, ತಾ.ವಿಪ್ರ ಸಮಾಜದ ಅಧ್ಯಕ್ಷ ಗಣಪತಿಭಟ್,ಶ್ರೀಧರಜೋಯ್ಸ್, ಉಪಾಧ್ಯಕ್ಷ ಜಿ.ಟಿ ಹೆಗಡೆ, ಸೋಮಶೇಖರ್, ರಾಘವೇಂದ್ರ ಕುಲಕರ್ಣಿ, ಜಿ.ಆರ್ ಜೋಶಿ, ರಾಘವೇಂದ್ರ ಎನ್.ಬಿ, ಸುಧಾ ಜೋಶಿ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

