ಶಿವಮೊಗ್ಗ

ಕಾಂಕ್ರಿಟ್ ರಸ್ತೆ ಕಾಮಗಾರಿ ಪರಿಶೀಲನೆ

Published On :

ಹೊನ್ನಾಳಿ: ತಮ್ಮ ಆಡಳಿತದ ಅವಧಿಯಲ್ಲಿ ಮಂಜೂರಾಗಿ 131 ಕೋಟಿ ಹಣ ಬಿಡುಗಡೆಯಾಗಿರುವ ಸೌಳಂಗ-ಬಸವಪಟ್ಟಣ ಕಾಂಕ್ರಿಟ್ ರಸ್ತೆ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸರ್ಕಾರವನ್ನು ಒತ್ತಾಯಿಸಿದರು.
  ಪಟ್ಟಣದಲ್ಲಿ ರಸ್ತೆ ಕಡಿಮೆ ಅಳತೆ ಅಗಲೀಕರಣ ಮಾಡಿ ಕಾಂಕ್ರಿಟ್ ರಸ್ತೆ ಕಾಮಗಾರಿ ಮಾಡುತ್ತಿದ್ದಾರೆ ಎನ್ನುವ ಸಾರ್ವಜನಿಕರ ಅಹವಾಲಿನ ಮೇರೆಗೆ ಶುಕ್ರವಾರ ಗುತ್ತಿಗೆದಾರರಿಂದ ರಸ್ತೆ ಎರಡೂ ಬದಿ ಅಳತೆ ಮಾಡಿಸಿ ಪರಿಶೀಲಿಸಿದ ನಂತರ ಮಾತನಾಡಿದರು.
  ಗುತ್ತಿಗೆದಾರರು ಒಂದು ಡ್ರೈನೇಜಿನಿಂದ ಇನ್ನೊಂದು ಡ್ರೈನೇಜಿಗೆ 19.20 ಮೀ.ನ ನಿಯಮದ ಅಳತೆಯಂತೆ ರಸ್ತೆ ಕಾಮಗಾರಿ ಮಾಡುತ್ತಿದ್ದಾರೆ. ಇದು ಅಳತೆ ಮಾಡಿದ ನಂತರ ತಿಳಿದು ಬಂದಿದೆ, ಫುಟ್‌ಪಾತ್‌ನ್ನು ಚರಂಡಿ ಹೊರ ಭಾಗ ಮಾಡಬೇಕೆನ್ನುವುದು ತಮ್ಮ ಒತ್ತಾಯ ಎಂದು ಹೇಳಿದರು.
ಕಟ್ಟಡ ತೆರವಿಗೆ ಮೀನಮೇಷ; ಕಾಮಗಾರಿ ಪ್ರಾರಂಭವಾಗಿ  ಆರು ತಿಂಗಳಾಗಿದೆ. ಪಟ್ಟಣದಲ್ಲಿ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಕಟ್ಟಡಗಳನ್ನು ತೆರವುಗೊಳಿಸಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು, ಕಾಮಗಾರಿ ನಿಧಾನವಾಗಿ ಸಾಗುತ್ತಿರುವುದರಿಂದ ಪ್ರಯಾಣಿಕರಿಗೆ ಹಾಗೂ ಸಾರ್ವಜನಿಕರಿಗೆ ಇದರಿಂದ ತೊಂದರೆಯಾಗಿದೆ ಎಂದ ಅವರು, ಗುತ್ತಿಗೆದಾರರು ಮತ್ತು ಕಟ್ಟಡ ಮಾಲೀಕರ ಸಹಕಾರವಿದ್ದರೂ ಎಂಜಿನಿಯರಗಳು ಮಾತ್ರ ಕಟ್ಟಡಗಳ ತೆರವು ಕಾರ್ಯಕ್ರಮಕ್ಕೆ ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಆರೋಪಿಸಿದರು.
ಪಪಂ ಸದಸ್ಯರಾದ ಸುರೇಶ್, ಪ್ರಶಾಂತ್, ಮುಖಂಡರಾದ ಷಣ್ಮುಖಪ್ಪ, ಅರಕೆರೆ ಬಸವರಾಜಪ್ಪ, ಆರುಂಡಿ ಜಯಪ್ರಕಾಶ್, ಚಂದ್ರಕುಮಾರ್ ಮತ್ತು ಇತರರಿದ್ದರು. ಪ್ರತಿಭಾ ಪುರಸ್ಕಾರ
ದಾವಣಗೆರೆ: ಯುವ ತಾಂತ್ರಿಕ ವಿದ್ಯಾರ್ಥಿಗಳು ತಂತ್ರಜ್ಞಾನ ವಿಷಯದಲ್ಲಿ ಅತ್ಯುತ್ತಮ ಸಾಧನೆ ಮಾಡಲೆಂದು ಪ್ರೋತ್ಸಾಹಿಸುವ ಸದುದ್ದೇಶದಿಂದ ನಗರದ ಬಿಐಇಟಿ ಕಾಲೇಜಿನ ಇನ್ಫಾರ್ಮೆಷನ್ ಸೈನ್ಸ್ ವಿಭಾಗದ ಸಭಾಂಗಣದಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಜೂ. 7ರಂದು ಹಮ್ಮಿಕೊಳ್ಳಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.