ಪ್ರಾದೇಶಿಕ ಭಾಷೆ ಅರಿವು ಇಂದಿನ ಅಗತ್ಯ
ಚಳ್ಳಕೆರೆ: ಸಾಹಿತ್ಯ, ಜಾನಪದ, ಸಂಪ್ರದಾಯ ಈ ಭಾಗದಲ್ಲಿ ತನ್ನದೆ ಆದ ಶ್ರೀಮಂತಿಕೆ ಹೊಂದಿದ್ದು ಅವುಗಳನ್ನು ಬಳಸುವ ಮನಸುಗಳ ಅಗತ್ಯವಿದೆ. ಇಂಥ ಸಾಹಿತ್ಯ, ಸಂಸ್ಕೃತಿ, ಸಂಪ್ರದಾಯಗಳ ಮಹತ್ವದ ಗುಣ ಅರಿತು ಅವುಗಳನ್ನು ಆಸ್ವಾದಿಸುವ ಗುಣವನ್ನು ಇಂದಿನ ಯುವ ಪೀಳಿಗೆ ಮೈಗೂಡಿಸಿಕೊಳ್ಳಬೇಕೆಂದು ಹಿರಿಯೂರು ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಸಿ.ಶಿವಲಿಂಗಪ್ಪ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಕೊರಲಕುಂಟೆ ಕನ್ನಡ ರಕ್ಷಣಾ ಮತ್ತು ಸಾಂಸ್ಕೃತಿಕ ವೇದಿಕೆ ಹಾಗೂ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಸಂಯುಕ್ತಾಶ್ರದಲ್ಲಿ ಏರ್ಪಡಿಸಿದ್ದ ಮೋದೂರುತೇಜ್‌ರವರ ಕಥೆ ಕಾದಂಬರಿ ಕುರಿತಾದ ವಿಚಾರ ಸಂಕಿರಣ ಹಾಗೂ ಜಿಲ್ಲಾ ಮಟ್ಟದ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.
ಗ್ರಾಮಾಂತರ ಪ್ರದೇಶದ ಜನರಿಂದಲೂ ಪ್ರಾದೇಶಿಕ ಭಾಷೆಗಳ ಬಗ್ಗೆ ಅರಿವು ಉಂಟು ಮಾಡುವ ಕಾರ್ಯ ಇಂದು ಆಗಬೇಕಿದೆ. ಪ್ರಾದೇಶಿಕ ಭಾಷೆಗೆ ಇರುವ ಮಹತ್ವ ಹಾಗೂ ಅದರಿಂದ ಆಗುವ ಅನುಕೂಲಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯತೆ ಇದೆ ಎಂದರು.
ಚಿತ್ರದುರ್ಗದ ಎಸ್‌ಜೆಎಂ ಕಾಲೇಜಿನ ಕನ್ನಡ ಉಪನ್ಯಾಸಕಿ ಪಿ.ಯಶೋದಾ ಮಾತನಾಡಿ, ಯುವ ಲೇಖಕರು ಸಮಾಜದಲ್ಲಿ ಉತ್ತಮ ಸಾಹಿತ್ಯ ಚಟುವಟಿಕೆಗಳನ್ನು ಹುಟ್ಟುಹಾಕುವ ಲೇಖನ ಬರೆಯುವ ಅಗತ್ಯವಿದೆ. ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಕೊಡುಗೆ ನೀಡಿದ ಜಿಲ್ಲೆಯ ಲೇಖಕ ತಿಪ್ಪಣ್ಣ ಮರಿಕುಂಟೆ, ಡಾ.ಮೀರಾಸಾಬಿಹಳ್ಳಿ ಶಿವಣ್ಣ ಮೋದೂರುತೇಜರವರು ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆ ಗಮನಿಸಬೇಕು ಎಂದರು.
ಮೋದೂರುತೇಜ ಅವರ ಕಥೆಗಳಲ್ಲಿನ ನೆನಪುಗಳು ಕುರಿತು ಉಪನ್ಯಾಸಕ ಆರೂಡಿ ಮಲ್ಲಯ್ಯ ವಿಷಯ ಮಂಡಿಸಿದರು. ಇದೇ ಸಂದರ್ಭದಲ್ಲಿ ಏಕೀಕರಣ ಪ್ರಶಸ್ತಿ ಪುರಸ್ಕೃತ ಕೆ.ಟಿ. ಸ್ವಾಮಿ, ನಾಟಕ ಅಕಾಡೆಮಿ ಸದಸ್ಯ ಪಿ. ತಿಪ್ಪೇಸ್ವಾಮಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ವಡ್ಡಗೆರೆ ನಾಗರಾಜಯ್ಯ ಅವರನ್ನು ಸನ್ಮಾನಿಸಲಾಯಿತು.
ಪುರಸಭಾ ಸದಸ್ಯ ವಿ.ವೈ ಪ್ರಮೋದ್, ಚಿನ್ಮೂಲಾದ್ರಿ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಜಿಲ್ಲಾಧ್ಯಕ್ಷೆ ದಯಾವತಿ ಪೂತ್ತೂರ್ಕರ್, ಸಾಹಿತಿ ಬಿ. ತಿಪ್ಪಣ್ಣಮರಿಕುಂಟೆ, ಕಥೆಗಾರ ಮೋದೂರುತೇಜ, ಡಾ. ಲಿಂಗಣ್ಣಜಂಗಮರಹಳ್ಳಿ, ಸಂಜೀವಿನಿ ಮೃತ್ಯುಂಜಯ, ಎಸ್. ಆರ್. ರಂಗಸ್ವಾಮಿ, ಕೋಡಿಹಳ್ಳಿ ಸೋಮಶೇಖರ್, ಯಲಗಟ್ಟೆ ಯೋಗೇಶ್, ಎಚ್. ಲಂಕಪ್ಪ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

