ಶಿವಮೊಗ್ಗ

ಭೂಸ್ವಾಧೀನಕ್ಕೆ ಗ್ರಾಮಸ್ಥರ ವಿರೋಧ

Published On :

ಸಾಗರ: ತಾಲೂಕಿನ ಆನಂದಪುರಂ ಹೋಬಳಿ ಇರುವಕ್ಕಿ ಗ್ರಾಮದಲ್ಲಿ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾನಿಲಯ ಸ್ಥಾಪನೆಗೆ ಭೂಸ್ವಾಧೀನ ಮಾಡಿಕೊಳ್ಳಲು ಮುಂದಾಗಿರುವ ಕ್ರಮ ವಿರೋಧಿಸಿ, ರೈತರ ಜಮೀನುಗಳನ್ನು ಖುಲ್ಲಾಪಡಿಸುತ್ತಿರುವುದನ್ನು ಖಂಡಿಸಿ ಇರುವಕ್ಕಿ, ಹೆಬ್ಬೋಡಿ ಗ್ರಾಮಸ್ಥರು ಸೋಮವಾರ ಉಪವಿಭಾಗಾಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಗ್ರಾಮದ ಸ.ನಂ.11, 12, 13, 30, 31, 45, ಹೆಬ್ಬೋಡಿ ಗ್ರಾಮದ ಸ.ನಂ. 13, 14, 48, ಸರಗುಂದ ಗ್ರಾಮದ ಸ.ನಂ. 35, ಯಡೇಹಳ್ಳಿಯ ಸ.ನಂ. 88ರಲ್ಲಿ 800ಕ್ಕೂ ಹೆಚ್ಚು ಎಕರೆ ಜಮೀನನ್ನು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯ ಸ್ಥಾಪಿಸುವ ಉದ್ದೇಶಕ್ಕೆ ಕಾಯ್ದಿರಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಈ ಸರ್ವೆ ನಂಬರ್‌ಗಳಲ್ಲಿ ಬರುವ ಜಮೀನು ಅರಣ್ಯಭೂಮಿ ಮತ್ತು ಗೋಮಾಳವಾಗಿದ್ದು, ಗ್ರಾಮಸ್ಥರು ಹಿಂದಿನಿಂದಲೂ ಕಾಪಾಡಿಕೊಂಡು ಬಂದಿರುತ್ತಾರೆ ಎಂದು ಮನವಿಯಲ್ಲಿಹೇಳಲಾಗಿದೆ.
ಗ್ರಾಮಸ್ಥರ ಸ್ವಾಧೀನದಲ್ಲಿರುವ ಜಮೀನನ್ನು ಕೃಷಿ ವಿವಿಗೆ ಪಡೆಯುವ ನೆಪದಲ್ಲಿ ಇಲ್ಲಿನ ರೈತರನ್ನು ಒಕ್ಕಲೆಬ್ಬಿಸುವ ಕೆಲಸವನ್ನು ಕಂದಾಯ ಇಲಾಖೆ ಮಾಡುತ್ತಿದೆ. ಇದರಿಂದ ಗ್ರಾಮಸ್ಥರು ಹಾಗೂ ಜಾನುವಾರುಗಳ ಜೀವನಕ್ಕೆ ಕಷ್ಟವಾಗುತ್ತದೆ. ಇಲ್ಲಿ ಕೃಷಿ ವಿವಿ ಸ್ಥಾಪಿಸುವುದರಿಂದ ಸುತ್ತಮುತ್ತಲಿನ ಪರಿಸರ ಹಾಳಾಗುವ ಸಾಧ್ಯತೆ ಇದೆ ಎಂದು ಮನವಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.
ಅಸಮರ್ಪಕ: ಕೃಷಿ ವಿವಿ ಸ್ಥಾಪಿಸಲು ಸಲ್ಲಿಸಿರುವ ಪ್ರಸ್ತಾವನೆ ಅಸಮರ್ಪಕವಾಗಿದ್ದು, ಅಧಿಕಾರಿಗಳು ನೈಜ ವರದಿ ಸಲ್ಲಿಸಿರುವುದಿಲ್ಲ. ವರದಿಯಲ್ಲಿ ಜಮೀನು ಖುಲ್ಲಾ ಇರುತ್ತದೆ ಎಂದು ಸುಳ್ಳು ಹೇಳಲಾಗಿದೆ. ಎಂದು ಮನವಿಯಲ್ಲಿ ಹೇಳಲಾಗಿದೆ.
ಬೇಲಿ ತೆರವು: ಜೂನ್ 5ರಂದು ಕಂದಾಯ ಇಲಾಖೆ ಅಧಿಕಾರಿಗಳು ಇರುವಕ್ಕಿ ಗ್ರಾಮಕ್ಕೆ ಆಗಮಿಸಿ ರೈತರ ಕೃಷಿ ಜಮೀನಿಗೆ ಹಾಕಿರುವ ಜಮೀನಿನಲ್ಲಿ ಬೆಳೆದ ಬೆಳೆಗಳನ್ನು ನಾಶಪಡಿಸುವ ಮೂಲಕ ರೈತರನ್ನು ಭಯಭೀತರನ್ನಾಗಿ ಮಾಡಿದ್ದಾರೆ. ಕೂಡಲೆ ಜಮೀನು ಸ್ವಾಧೀನ ಪ್ರಕ್ರಿಯೆ ಕೈಬಿಡಬೇಕು. ಇಲ್ಲವಾದರೆ ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದು ಗ್ರಾಮಸ್ಥರು ಮನವಿಯಲ್ಲಿ ಎಚ್ಚರಿಸಿದ್ದಾರೆ. ನ್ಯಾಯವಾದಿ ಪ್ರವೀಣಕುಮಾರ್, ಸೋಮಶೇಖರ್, ಮಂಜಪ್ಪ, ಉಮೇಶ್‌ಗೌಡ, ಯೋಗೀಶ್, ಗುರುರಾಜ, ಜಟ್ಟಪ್ಪ, ಭೋಜಪ್ಪ, ಅಣ್ಣಪ್ಪ, ಚೌಡಪ್ಪ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.