ಗ್ರಾಮೀಣರಲ್ಲಿ ಪ್ರತಿಭೆಗೆ ಕೊರತೆಯಿಲ್ಲ
ಸಾಗರ: ಬೆಂಗಳೂರಿನಂತಹ ಮೆಟ್ರೋ ನಗರಗಳಿಗೆ ಹೋಲಿಸಿದರೂ ಗ್ರಾಮಾಂತರ ಭಾಗದ ವಿದ್ಯಾರ್ಥಿಗಳಲ್ಲಿ ಪ್ರತಿಭೆಗೆ ಕೊರತೆಯಿಲ್ಲ. ಅವರ ಶೈಕ್ಷಣಿಕ ಪ್ರಯತ್ನಕ್ಕೆ ಹಣಕಾಸಿನ ಮುಗ್ಗಟ್ಟು ಎದುರಾಗದಿದ್ದರೆ ಅವರೂ ಉನ್ನತವಾದುದನ್ನು ಸಾಧಿಸುತ್ತಾರೆ ಎಂದು ಯೂತ್ ಫಾರ್ ಸೇವಾ ಸಂಘಟನೆಯ ಬೆಂಗಳೂರು ಘಟಕದ ಅಂಕುರ್ ಬೋಧ್ ಪುಣೆ ಅಭಿಪ್ರಾಯಪಟ್ಟರು.
ಇಲ್ಲಿನ ಸೇವಾಸಾಗರ ಪ್ರೌಢಶಾಲೆಯ ಮಕ್ಕಳಿಗೆ ತಮ್ಮ ಸಂಘಟನೆಯ ಆಶ್ರಯದಲ್ಲಿ ನಡೆಯುತ್ತಿರುವ ಸ್ಪೋಕನ್ ಇಂಗ್ಲಿಷ್ ವಿಶೇಷ ತರಗತಿಯಲ್ಲಿ ಮಾತನಾಡಿದರು.
ಕಳೆದ ಜೂ. 3ರಿಂದ 15 ದಿನಗಳ ಕಾಲ ಇಂಗ್ಲಿಷ್ ಕಲಿಕೆ ಹಾಗೂ ಪ್ರಾಯೋಗಿಕ ವಿಜ್ಞಾನದ ತರಗತಿ ನಡೆಸುತ್ತಿದ್ದೇವೆ. ಗ್ರಾಮೀಣ ಮಕ್ಕಳಿಗಿರುವ ಸಂವಹನದ ಸವಾಲು ಸುಲಭಗೊಳಿಸುವ ನಮ್ಮ ಸಂಘಟನೆಯ ಮೂಲ ಉದ್ದೇಶ ಎಂದರು.
ಎಂಜಿನಿಯರಿಂಗ್ ವಿದ್ಯಾರ್ಥಿಗಳಾಗಿದ್ದರೂ ರಜಾ ದಿನಗಳ ಸಂದರ್ಭದಲ್ಲಿ ಉಚಿತವಾಗಿ ನಮ್ಮ ಯೂತ್ ಫಾರ್ ಸೇವಾ ಸಂಘಟನೆಯ ಪರವಾಗಿ ಸಮಾಜಮುಖಿಯಾಗಿ ಇಂತಹ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತೇವೆ.
ನಮ್ಮ ಸಂಘಟನೆ ಹಿಂದೂ ಸೇವಾ ಪ್ರತಿಷ್ಠಾನದ ಒಂದು ಅಂಗ ವ್ಯವಸ್ಥೆಯಾಗಿದ್ದು, ದೇಶಾದ್ಯಂತ 5 ಸಾವಿರಕ್ಕೂ ಹೆಚ್ಚಿನ ಕಾರ್ಯಕರ್ತರನ್ನು ಹೊಂದಿದೆ. ಉದ್ಯೋಗದ ದಿನಗಳಲ್ಲೂ ನಾವು ಸಮಾಜದ ಉನ್ನತಿಗಾಗಿ ಈ ರೀತಿಯ ಕೆಲಸವನ್ನು ಮುಂದುವರಿಸುತ್ತೇವೆ ಎಂದು ಅಂಕುರ್ ಸ್ಪಷ್ಟಪಡಿಸಿದರು.
ಬೆಂಗಳೂರಿನಲ್ಲಿ ದೇಶದ ಸಂಸ್ಕೃತಿಯ ಲವಲೇಷವೂ ಕಾಣುತ್ತಿಲ್ಲ. ಆದರೆ, ಅದನ್ನೇ ಶಾಶ್ವತ ಸ್ಥಿತಿ ಎಂದುಕೊಳ್ಳುವ ಬದಲು ಅದರ ಬದಲಾವಣೆಗೆ ದುಡಿಯಲು ನಾವು ಸಜ್ಜಾಗಿದ್ದೇವೆ. ವಿವಿಧ ವರ್ಗಗಳ ಗುರಿಗಳಿಗೆ ಸೇತುವೆಯಾಗುವ ಅವಕಾಶ ಲಭ್ಯವಾಗುವುದೇ ದುರ್ಲಭ. ಪ್ರತಿ ರಜೆ ದಿನಗಳನ್ನು ಸದುಪಯೋಗ ಪಡಿಸಿಕೊಳ್ಳುವುದರತ್ತ ಯುವ ಜನರು ಯೋಚಿಸಿ ಈ ಆಂದೋಲನವನ್ನು ದೇಶಾದ್ಯಂತ ಹರಡಬೇಕಾಗಿದೆ ಎಂದು ಆಶಯ ವ್ಯಕ್ತಪಡಿಸಿದರು.
ಶಾಲೆಯ ಮುಖ್ಯೋಪಾಧ್ಯಾಯರಾದ ಶಾರದಾ ಹೆಗಡೆ, ಶಾಲಾ ಅಭಿವೃದ್ಧಿ ಸಮಿತಿಯ ಕೆ.ವೆಂಕಟೇಶ್, ಸುಬ್ಬರಾವ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

