ಕಲಿಕೆಗೆ ಕೊನೆಯಿಲ್ಲ: ಪ್ರೊ.ವಿಶ್ವನಾಥಯ್ಯ
ಶಿವಮೊಗ್ಗ: ವ್ಯಕ್ತಿಗೂ ವ್ಯಕ್ತಿತ್ವಕ್ಕೂ ತುಂಬಾ ವ್ಯತ್ಯಾಸವಿದೆ. ಪ್ರತಿಯೊಬ್ಬರೂ ವಿಶ್ವವಿದ್ಯಾನಿಲಯದ ಪದವೀಧರದರರಾಗಬಹುದು. ಆದರೆ ವಿಶ್ವದ ಪದವೀಧರರಾಗುವುದು ಸಾಧ್ಯವಿಲ್ಲ. ಏಕೆಂದರೆ ಕಲಿಕೆಯೆನ್ನುವುದು ಸಾಗರದಂತೆ. ಇದಕ್ಕೆ ಕೊನೆಯೆ ಇಲ್ಲ ಎಂದು ರಸಾಯನಶಾಸ್ತ್ರ ಪ್ರಾಧ್ಯಾಪಕ ಪ್ರೊ. ಬಿ.ಎಸ್. ವಿಶ್ವನಾಥಯ್ಯ ಹೇಳಿದರು.
ನಗರದ ಸಹ್ಯಾದ್ರಿ ಕಾಲೇಜಿನ ಪಾಥ್ವೇಸ್ ಘಟಕ ಆಯೋಜಿಸಿದ್ದ ವಿಶೇಷ ಬೇಸಿಗೆ ಕಾರ್ಯಾಗಾರ ಉದ್ಘಾಟಿಸಿದ ಅವರು, ಕಟ್ಟಡವನ್ನು ಇಟ್ಟಿಗೆ, ಮರಳಿನಿಂದ ಕಟ್ಟಲಾಗುತ್ತದೆ. ಮನೆ ಮನಸ್ಸು ಹಾಗೂ ಹೃದಯದಿಂದ ಕಟ್ಟಲ್ಪಟ್ಟಿರುತ್ತದೆ. ಮನೆಯೇ ಮೊದಲ ಪಾಠ ಶಾಲೆಯಾದರೆ ತಂದೆ ತಾಯಿಯರೇ ಮಕ್ಕಳಿಗೆ ಮೊದಲ ಗುರು. ಮಾನವ ಕಲಿಕೆಯನ್ನು ಶಿಕ್ಷಣದ ಮೂಲಕವೇ ಕಲಿಯಬೇಕೆಂಬುದು ತಪ್ಪು ಕಲ್ಪನೆ. ಕಲಿಯುವ ಆಸಕ್ತಿ ಇದ್ದರೆ ಪ್ರತಿಯೊಬ್ಬರಿಂದಲೂ ಹೊಸ ವಿಷಯವನ್ನು ಕಲಿಯುತ್ತಾನೆ ಎಂದರು.
ಎಡ್ಯುರೈಟ್ ಟ್ರೈನಿಂಗ್ ಅಕಾಡೆಮಿಯ ನಿರ್ದೇಶಕ ಪ್ರೊ. ಎನ್. ದಿವಾಕರರಾವ್ ಉಪಸ್ಥಿತರಿದ್ದರು.
ನಮಿತಾ ಡಿಸೋಜ ನಿರೂಪಿಸಿದರು, ಸೌಂದರ್ಯ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಡಾ. ಬಿ.ಸಿ ಪಾಟೀಲ್ ಸ್ವಾಗತಿಸಿದರು. ಶೃತಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

