ಶಿವಮೊಗ್ಗ

ಶಿವಮೊಗ್ಗದಲ್ಲಿ ರಂಭಾಪುರಿ ಮಠದ ಶಾಖೆ

Published On :

ಶಿವಮೊಗ್ಗದ ಗಾಜನೂರಿನಲ್ಲಿರುವ ರಂಭಾಪುರಿ ಪೀಠದ ವಿಶಾಲ ಜಾಗದಲ್ಲಿ ವಿದ್ಯಾಕೇಂದ್ರ ಮತ್ತು ಮಠದ ಶಾಖೆ ತೆರೆಯಲು ತಯಾರಿ ನಡೆಸಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಮದ್ ರಂಭಾಪುರಿ ಪ್ರಸನ್ನ ರೇಣುಕ ವೀರ ಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಈ ಯೋಜನೆಗೆ ಎಲ್ಲರ ಸಹಕಾರ ಕೋರಿದರು. ರಂಭಾಪುರಿ ಪೀಠದ ಆಧ್ಯಾತ್ಮ ಕೇಂದ್ರ ಶಿವಮೊಗ್ಗ ನಗರದಲ್ಲಿ ನೆಲೆಗೊಳ್ಳಬೇಕು. ಜಗದ್ಗುರುಗಳು ಮುಂದಾದರೆ ನಾವೆಲ್ಲಾ ನಿಂತು ಕಾರ್ಯನಿರ್ವಹಿಸುವುದಾಗಿ ಅನೇಕರು ಹೇಳಿದರು. ಖಂಡಿತವಾಗಿ ಈಗ ಕಳೆದಷ್ಟು ದಿನಗಳು ಮುಂದೆ ಕಳೆಯುವುದಿಲ್ಲ ಎಂಬ ವಿಶ್ವಾಸವಿದೆ ಎಂದ ಅವರು, ಮಾಜಿ ಡಿಸಿಎಂ ಈಶ್ವರಪ್ಪನವರೂ ಶಕ್ತಿ ಮೀರಿ ಸಹಕಾರ ಕೊಡುವ ಘೋಷಣೆ ಮಾಡಿದ್ದಾರೆ. ಅದನ್ನು ಸರಿಯಾಗಿ ಬಳಸಿಕೊಳ್ಳುವ ಕಾರ್ಯದಲ್ಲಿ ನಾವು, ಪೀಠದ ಬಳಗದವರು ಹಿಂದೆ ಬಿದ್ದಿದ್ದೇವೆ ಎಂದರೆ ತಪ್ಪಾಗಲಿಕ್ಕಿಲ್ಲ ಎಂದು ಹೇಳಿದರು. ಮುಂದೆ ಒಂದು ವ್ಯವಸ್ಥಿತವಾದ ಸಂಘಟನೆ ಮಾಡುವ ಮೂಲಕ ಆ ಒಂದು ಕಾರ್ಯಕ್ಕೆ ಚಾಲನೆ ಕೊಡುವ ಕಾರ್ಯಬೇಕು ಎಂದು ಕರೆ ನೀಡಿದರು.


ದೇಹ ದಣಿದಿದೆ..
ಗುರುಪೀಠಗಳ ಶಾಖಾಮಠಗಳು ತಮ್ಮ ವ್ಯಾಪ್ತಿಯಲ್ಲಿ ಸಣ್ಣಪುಟ್ಟ ಕಾರ್ಯಕ್ರಮಗಳನ್ನು ಮುಂದುವರಿಸಿಕೊಂಡು ಬಂದರೆ ಜಗದ್ಗುರುಗಳ ಮೇಲಿನ ಒತ್ತಡ ಕಡಿಮೆಯಾಗಬಹುದು. ನಿರಂತರವಾಗಿ ಓಡಾಡುವುದರಿಂದ, ಆರೋಗ್ಯದ ಮೇಲೆ ದುಷ್ಪರಿಣಾಮ ಆಗುವ ಮುನ್ಸೂಚನೆ ಕಂಡುಬಂದಿದೆ. ಹೀಗಾಗಿ ಭಕ್ತರೂ ಸಹ ಸಹಕಾರ ಕೊಡುತ್ತೀರಿ ಎಂದು ಭಾವಿಸುವುದಾಗಿ ಕಾರ್ಯಕ್ರಮದಲ್ಲಿ ರಂಭಾಪುರಿ ಶ್ರೀಗಳು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.