ಶಿವಮೊಗ್ಗ

ಮನಸ್ಸಿನ ಶಾಂತಿಗಾಗಿ ದೇವರ ಆರಾಧನೆ: ಪಾಂಡುರಂಗ ಭಟ್

Published On :

ಸೊರಬ: ಪೂಜೆ, ಆರಾಧನೆ ಮನಸ್ಸಿನ ಶಾಂತಿ, ಸ್ಥಿಮಿತಕ್ಕೆ ಪೂರಕವಾಗಿ ಕೆಲಸ ಮಾಡುವುದರಿಂದ ಆರಾಧನೆ  ಅವಶ್ಯಕ ಎಂದು ಪಾಂಡುರಂಗ ಭಟ್ ಅಭಿಪ್ರಾಯಪಟ್ಟರು.
ತಾಲೂಕಿನಾದ್ಯಂತ ಸಂಚರಿಸುರುವ ವರದಹಳ್ಳಿ ಶ್ರೀಧರ ಸ್ವಾಮಿಗಳ ಪಾದುಕಾ ಅಭಿಯಾನ ಅಂಗವಾಗಿ ಸೋಮವಾರ ಯಲಸಿ ಗ್ರಾಮದಲ್ಲಿ ನಡೆದ ಪಾದುಕ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಿಂದೂ ಧರ್ಮದಲ್ಲಿ ಸಾಮಾಜಿಕ ಸಾಮರಸ್ಯ ಕಾಯ್ದುಕೊಳ್ಳುವುದಕ್ಕೆ ಹಾಗೂ ಮನಸ್ಸಿನ ನೆಮ್ಮದಿಗಾಗಿ ಕಂಡುಕೊಂಡ ಸುಲಭ ಮಾರ್ಗ ಈ ಪೂಜೆ ಎಂದರು. ಮಾಧವ ದೇಗುಲದಲ್ಲಿ ನಡೆದ ಪಾದುಕಾಭಿಷೇಕ, ತುಳಸಿ ಅರ್ಚನೆ, ಕಾಣಿಕೆ ಸಮರ್ಪಣೆ, ಪ್ರಸಾದ ವಿನಿಯೋಗ,  ಪೂಜಾ ಕಾರ್ಯಕ್ರಮ, ಧಾರ್ಮಿಕ ವಿಧಿ ವಿಧಾನದಲ್ಲಿ ಅರ್ಚಕ ನಾಗೇಶ ಭಟ್, ಮಹೇಶ ಜೋಯ್ಸ್, ವಾಸುದೇವರಾವ್, ಬಿ.ಚಿದಂಬರ ರಾವ್, ಸತೀಶ್ ಜೋಯ್ಸ್, ನರಸಿಂಗರಾವ್, ನೀಲಕಂಠರಾವ್, ಬಾಲಕೃಷ್ಣ ಕೊಠಾರಿ, ಗಣಪತಿ ಕೊಠಾರಿ, ಬಿ. ಸುಬ್ರಹ್ಮಣ್ಯ, ವಿಠ್‌ಠಲರಾವ್ ಕುಟುಂಬದವರು ಪಾಲ್ಗೊಂಡರು. ವರದಹಳ್ಳಿ ಕ್ಷೇತ್ರದ ದತ್ತಾತ್ರೇಯಭಟ್, ರಘುಪತಿಭಟ್ ಗೀಜಗಾರ್, ದಿನೇಶ್ ವರದಹಳ್ಳಿ, ಶ್ರೀನಿವಾಸ್ ಭಟ್ ಹೊರಬೈಲು, ಸತ್ಯಣ್ಣ ಚೀಲನೂರು ಆಗಮಿಸಿದ್ದರು. ಗ್ರಾಮದ ಆಕಾಶವಾಣಿ ಕಲಾವಿದೆ ಇಂದೂಮತಿ ನೀಲಕಂಠರಾವ್, ದಿವ್ಯ, ಜಯಂತಿ, ವಿಶಾಲಮ್ಮ, ಗೌರಿ ಮುಂತಾದವರಿಂದ ದೇವರ ನಾಮಗಳ ಹಾಡುಗಾರಿಕೆ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.