ಶಿವಮೊಗ್ಗ

ಆಧುನಿಕ ಯುಗದಲ್ಲೂ ಮೌಢ್ಯ ಜೀವಂತ: ಕಾಳೇಗೌಡ ನಾಗವಾರ

Published On :

ಕ.ಪ್ರ.ವಾರ್ತೆ  ಭದ್ರಾವತಿ  ಮಾ.1
ಸಾಂಪ್ರದಾಯಿಕ ಚಿಂತನೆಯನ್ನು ಹೋಗಲಾಡಿಸಲು ಶತಮಾನಗಳಿಂದ ಹೋರಾಡಿದರೂ ಬೆತ್ತಲೆ ಸೇವೆ, ಮಡೆಸ್ನಾನದಂತಹ ಮೌಢ್ಯ ಇಂದಿಗೂ ಜೀವಂತವಾಗಿದ್ದು, 2,600 ವರ್ಷದ ಹಿಂದೆ ಬುದ್ಧನೇ ಇಂತಹ ಮೌಢ್ಯದ ವಿರುದ್ಧ ಜ್ಞಾನ ಮೂಡಿಸಿದ್ದರೂ, ಇದನ್ನು ಸಂಪೂರ್ಣ ತೊಡೆದುಹಾಕಲಾಗಿಲ್ಲ ಎಂದು  ಸಾಹಿತಿ ಕಾಳೇಗೌಡ ನಾಗವಾರ ಹೇಳಿದರು.
ಭದ್ರಾವತಿಯ ಎಂಪಿಎಂ ಕಲ್ಯಾಣ ಮಂದಿರದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಶನಿವಾರ ಏರ್ಪಡಿಸಿದ್ದ ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ, ಶಿವಮೊಗ್ಗ ಜಿಲ್ಲೆಯಲ್ಲಿ ಜನಿಸಿದ ಕುವೆಂಪು ಅವರು ಮಹಾನ್ ಕವಿಗಳ ಪಟ್ಟಿಗೆ ಸೇರಿದವರು ಎಂದರು.
ಶಿವಮೊಗ್ಗ ಜಿಲ್ಲಾ ಕ.ಸಾ.ಪ ಅಧ್ಯಕ್ಷ ಡಿ. ಮಂಜುನಾಥ್ ಮಾತನಾಡಿ, ಕವಿ ಪಂಪನಲ್ಲಿದ್ದ ಬದ್ಧತೆ ಇಂದಿನ ಯಾರಲ್ಲೂ ಕಂಡುಬರುತ್ತಿಲ್ಲ. ಇಂತಹ ಬದ್ಧತೆ ನೆನಪು ಮಾಡಿಕೊಡುವ ಕಾರ್ಯವನ್ನು ಇಂತಹ ಸಮ್ಮೇಳನಗಳು ಮಾಡಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಸರ್ವಾಧ್ಯಕ್ಷ ಪ್ರೊ. ಎಂ. ಚಂದ್ರಶೇಖರಯ್ಯ ಕೃಷಿ ಮತ್ತು ಕೈಗಾರಿಕಾ ಚಟುವಟಿಕೆ ಪ್ರಧಾನವಾಗಿರುವ ಭದ್ರಾವತಿ, ಅದರ ಸಂಸ್ಕೃತಿ, ನಾಗರಿಕತೆ, ಕಾರ್ಖಾನೆಗಳ ದುಸ್ಥಿತಿ ಮುಂತಾದವುಗಳ ಬಗ್ಗೆ ಮಾತನಾಡಿದ ಅವರು ಕುವೆಂಪು ರೈತಗೀತೆ ರಚಿಸಿದ್ದು ಹಾಗೂ ಖ್ಯಾತ ಕ್ರಿಕೆಟಿಗ ಜಿ.ಆರ್. ವಿಶ್ವನಾಥ್ ಜನಿಸಿದ್ದು ಭದ್ರಾವತಿಯಲ್ಲಿ ಎಂದು ಹೇಳಿದರು.
ಶಾಸಕ ಅಪ್ಪಾಜಿ, 3ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಎನ್.ಕೆ. ಶಂಕರಪ್ಪ ಹನಿಗವನ ಕವಿ ದುಂಡಿರಾಜ್ ಮೊದಲಾದವರು ಹಾಜರಿದ್ದರು. ಕಡಿದಾಳ್ ಶಾಮಣ್ಣ ಸಾಹಿತಿ ಜಿ.ಎಸ್. ಶಿವರುದ್ರಪ್ಪ ಅವರ ಭಾವಚಿತ್ರ ಅನಾವರಣ ಮಾಡಿದರುಕೋಗಲೂರು ತಿಪ್ಪೇಸ್ವಾಮಿ ಸ್ವಾಗತಿಸಿದರು. ತಿಮ್ಮಪ್ಪ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.