ಶಿವಮೊಗ್ಗ

'ಮಳೆಬಿಲ್ಲು' ರಾಜ್ಯ ಮಟ್ಟದ ಮಕ್ಕಳ ರಂಗ ತರಬೇತಿ ಶಿಬಿರ

Published On :

ಶಿವಮೊಗ್ಗ:  ರಾಷ್ಟ್ರಕವಿ ಕುವೆಂಪು ಹುಟ್ಟೂರಾದ ಕುಪ್ಪಳಿಯಲ್ಲಿ ಮಕ್ಕಳಿಗಾಗಿ 2ನೇ ವರ್ಷದ 'ಮಳೆಬಿಲ್ಲು' ರಾಜ್ಯ ಮಟ್ಟದ ರಂಗ ತರಬೇತಿ ಶಿಬಿರವನ್ನು ಸಾಗರದ ರಂಗ ತಂಡ 'ಸ್ಪಂದನ' ಹಮ್ಮಿಕೊಂಡಿದೆ. ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಹಕಾರದಲ್ಲಿ ನಡೆಯಲಿರುವ ಮಕ್ಕಳ ರಂಗ ತರಬೇತಿ ಶಿಬಿರವು ಕುಪ್ಪಳಿಯ ಹೇಮಾಂಗಣದಲ್ಲಿ ಏಪ್ರಿಲ್ 10 ರಿಂದ 20 ರವರೆಗೆ 11 ದಿನಗಳ ಕಾಲ ನಡೆಯಲಿದೆ. ಮಕ್ಕಳಿಗೆ ಊಟ ತಿಂಡಿ ಸೇರಿದಂತೆ ವಾಸ್ತವ್ಯದ ವ್ಯವಸ್ಥೆಯೂ ಇರುತ್ತದೆ.
 ಕುವೆಂಪು ಸಾಹಿತ್ಯ, ಕಾವ್ಯವನ್ನಾಧರಿಸಿದ ಈ ರಂಗತರಬೇತಿ ಶಿಬಿರದಲ್ಲಿ 10 ರಿಂದ 15 ವಯಸ್ಸಿನ  ಮಕ್ಕಳು ಭಾಗವಹಿಸಬಹುದಾಗಿದೆ. ರಂಗತರಬೇತಿಯ ಜೊತೆಗೆ ಸಾಹಸ ಚಾರಣ, ಬರ್ಡ್‌ವಾಚಿಂಗ್, ಫೋಟ್ರೋಗ್ರಫಿ, ಕ್ರಾಫ್ಟ್ ಡಿಸೈನಿಂಗ್, ಚಿತ್ರಕಲೆ, ಸಂಗೀತ, ನೃತ್ಯ ಕತೆ-ಕವಿತೆ ರಚನೆ ಹೀಗೆ ಹಲವು ಬಗೆಯ ಸೃಜನಶೀಲ ತರಬೇತಿ ನೀಡಲಾಗುವುದು. ರಂಗ ನಿರ್ದೇಶಕಿ ಎಂ.ವಿ.ಪ್ರತಿಭಾ ಶಿಬಿರವನ್ನು ನಿರ್ದೇಶಿಸುವರು. ಕೊನೆಯ ದಿನ ನಾಟಕ ಪ್ರದರ್ಶನವಿರುತ್ತದೆ.
 ಹಿರಿಯ ರೈತ ಮುಖಂಡ ಕಡಿದಾಳ್ ಶ್ಯಾಮಣ್ಣ, ಖ್ಯಾತ ಸಾಹಿತಿ ನಾ.ಡಿಸೋಜ ಶಿಬಿರದ ಮಾರ್ಗದರ್ಶಕರಾಗಿರುವರು. ರಂಗಕರ್ಮಿ ನಟ ಮಂಡ್ಯ ರಮೇಶ್ ಶಿಬಿರ ಉದ್ಘಾಟಿಸಿ ಒಂದು ದಿನ ಮಕ್ಕಳೊಡನೆ ಭಾಗವಹಿಸಲಿದ್ದಾರೆ. ಯುವ ಕಲಾವಿದ ಕೃಷ್ಣ ರಾಯಚೂರ್ ಕ್ರಾಫ್ಟ್ ಡಿಸೈನ್ ಮತ್ತು ಆರ್ಟ್ ಕ್ಲಾಸ್ ನಡೆಸುವರು. ಮೈಸೂರಿನ ಖ್ಯಾತ ಮ್ಯಾನ್ ಸಂಸ್ಥೆಯ ಕೆ.ಮನು ಸಾಹಸ ಚಾರಣಕ್ಕೆ ಮಕ್ಕಳನ್ನು ಕರೆದೊಯ್ಯಲಿದ್ದಾರೆ. ಖ್ಯಾತ ಚಿತ್ರ ನಟ ಅರುಣ್ ಸಾಗರ್ ಶಿಬಿರದ ಸಮಾರೋಪದ ದಿನ ಮಕ್ಕಳ ಜೊತೆಗಿರುತ್ತಾರೆ. ರಾಜ್ಯ ಮಟ್ಟದ ಈ ಮಕ್ಕಳ ರಂಗ ತರಬೇತಿ ಶಿಬಿರದಲ್ಲಿ ಇನ್ನೂ ಹಲವು ಕಲಾವಿದರು, ಮಕ್ಕಳ ಜೊತೆ ಕಳೆಯುವರು.
 ಆಸಕ್ತ ಮಕ್ಕಳು, ಪೋಷಕರು ಎಂ.ವಿ.ಪ್ರತಿಭಾ ಸಾಗರ-9945 17879, ರಿಯಾಜ್, ಶಿರಸಿ-9980247048 ವಿಜಯಶ್ರೀ, ಧಾರವಾಡ-9448231058 ಇವರಿಗೆ ಸಂಪರ್ಕಿಸಿ ವಿವರ ಪಡೆಯಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.