ಶಿವಮೊಗ್ಗ

ನಾಳೆಯಿಂದ ಜೆಎನ್‌ಎನ್‌ಸಿಇಯಲ್ಲಿ ಟೆಕ್‌ಝೋನ್-2014

Published On :

ಕ.ಪ್ರ.ವಾರ್ತೆ, ಶಿವಮೊಗ್ಗ, ಮಾ.5
ಮಾ.7 ರಿಂದ 9 ರವರೆಗೆ ಇಲ್ಲಿನ ಜೆಎನ್‌ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ರಾಷ್ಟ್ರೀಯ ಮಟ್ಟದ ತಾಂತ್ರಿಕ ಸ್ಪರ್ಧೆಗಳನ್ನು ಒಳಗೊಂಡ ಟೆಕ್ ಝೋನ್- 2014 ನಡೆಯುತ್ತಿದೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ನಾರಾಯಣ ರಾವ್ ಹಾಗೂ ಕಾಲೇಜಿನ ಪ್ರಾಂಶುಪಾಲ ಶ್ರೀನಿವಾಸರಾವ್ ಕುಂಟೆ ಕಾರ್ಯಕ್ರಮದ ವಿವರಣೆ ನೀಡಿದರು.
8 ವರ್ಷಗಳಿಂದ ಐಇಐ ಸ್ಟೂಡೆಂಟ್ ಚಾಪ್ಟರ್ ಜೆಎನ್‌ಎನ್‌ಸಿಇ ಘಟಕವು ರಾಜ್ಯಮಟ್ಟದ ತಾಂತ್ರಿಕ ಸ್ಪರ್ಧೆಗಳನ್ನು ನಡೆಸುತ್ತಿದೆ. ಸಮಾನ ಮನಸ್ಕ ವಿದ್ಯಾರ್ಥಿಗಳ ಗುಂಪು ಇದನ್ನು ಪ್ರಾರಂಭಿಸಿದ್ದಾರೆ.  ವರ್ಷ ವರ್ಷಕ್ಕೂ ಉತ್ಕೃಷ್ಟತೆ ಕಾಪಾಡಿಕೊಂಡು ಬಂದಿದೆ.  ರಾಷ್ಟ್ರಮಟ್ಟದ ಸ್ಪರ್ಧೆಗಳನ್ನು ಆಯೋಜಿಸುತ್ತಿದೆ. ಈ ಸ್ಪರ್ಧೆಯೇ ಟೆಕ್‌ಝೋನ್. ಕಳೆದ ವರ್ಷ ಸೌರ ಶಕ್ತಿಯ ಥೀಮ್ ಹೊಂದಿ ರಾಜ್ಯಮಟ್ಟದಲ್ಲಿ ಸ್ಪರ್ಧೆ ಏರ್ಪಡಿಸಿತ್ತು. ಈ ಬಾರಿ ಮರುಬಳಕೆ (ರೀಸೈಕಲ್) ವಿಷಯದಲ್ಲಿ ಕಾರ್ಯಕ್ರಮ ರೂಪಿಸಿದೆ.
150ಕ್ಕೂ ಹೆಚ್ಚು ವಿದ್ಯಾರ್ಥಿಗಳು:  ರಾಷ್ಟ್ರಮಟ್ಟದಲ್ಲಿ ನಡೆಯುತ್ತಿರುವ ಈ ಸ್ಪರ್ಧೆಯಲ್ಲಿ ತಮಿಳುನಾಡು, ಆಂಧ್ರ, ಕೇರಳ, ಮಹಾರಾಷ್ಟ್ರ ಸೇರಿದಂತೆ ಬೇರೆ ಬೇರೆ ರಾಜ್ಯಗಳ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಹೊರರಾಜ್ಯದ ಸುಮಾರು 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ ಎಂದು ಶ್ರೀನಿವಾಸ ಹೇಳಿದರು.
ಪ್ರಸ್ತುತ ಶೀರ್ಷಿಕೆಯಡಿ ಅತಿ ಮುಖ್ಯ ಸ್ಪರ್ಧೆ ನಡೆಯುತ್ತಿದೆ. ಇದು ರಾಷ್ಟ್ರಮಟ್ಟದ ತಾಂತ್ರಿಕ ಪ್ರಬಂಧ ಮಂಡನೆಯ ಸ್ಪರ್ಧೆಯಾಗಿದೆ. ವಿವಿಧ ರಾಜ್ಯಗಳಿಂದ ಸುಮಾರು 200 ಪ್ರಬಂಧಗಳು ಸ್ಪರ್ಧೆಗೆ ದಾಖಲಾಗಿವೆ. ಇದರ ಜೊತೆಗೆ ಪ್ರತಿ ವಿಭಾಗಕ್ಕೆ ತಲಾ 2 ರಂತೆ 8 ಸ್ಪರ್ಧೆಗಳು, ಎಲ್ಲಾ ವಿಭಾಗದವರಿಗೂ ಅನ್ವಯಿಸುವಂತೆ 10 ಸ್ಪರ್ಧೆಗಳು ಆಯೋಜಿಸಲಾಗಿದೆ ಐಇಐ ಸ್ಟಾಫ್ ಅಡ್ವೈಸರ್ ವೈ.ಜೆ. ಸುರೇಶ್ ವಿವರಿಸಿದರು.
ಮ್ಯಾರಥಾನ್:  ಕಾರ್ಯಕ್ರಮದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಮಾ.8 ರಂದು ಬೆಳಗ್ಗೆ 7.30 ಗಂಟೆಗೆ ಇಲ್ಲಿನ ಉಷಾ ನರ್ಸಿಂಗ್ ಹೋಂ ಮುಂಭಾಗದಿಂದ ಕಾಲೇಜಿನವರೆಗೆ ಮ್ಯಾರಥಾನ್ ಹಮ್ಮಿಕೊಳ್ಳಲಾಗಿದೆ. ಸುಮಾರು 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಳ್ಳುತ್ತಿದ್ದು, ಶಾಸಕ ಕೆ.ಬಿ.ಪ್ರಸನ್ನಕುಮಾರ್ ಚಾಲನೆ  ನೀಡಲಿದ್ದಾರೆ.
ಉದ್ಘಾಟನೆ:  ಮಾ.7 ರಂದು ಬೆಳಗ್ಗೆ 9.30 ಗಂಟೆಗೆ ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ. ವಾಮನಾಚಾರ್ಯ ನೆರವೇರಿಸುವರು. ಮಂಡಳಿಯ ಅಧಿಕಾರಿ ಡಾ. ಆರ್.ಲಕ್ಷ್ಮಿನಾರಾಯಣ, ಎನ್‌ಇಎಸ್ ಕಾರ್ಯದರ್ಶಿ ಎನ್.ಟಿ. ನಾರಾಯಣರಾವ್ ಉಪಸ್ಥಿತರಿರುವರು.
ಸ್ಪರ್ಧೆಗಳು:  ಉದ್ಘಾಟನಾ ಕಾರ್ಯಕ್ರಮದ ನಂತರ ಪ್ರಸ್ತುತಿ ಆರಂಭವಾಗಲಿದೆ. ನಂತರ ಸ್ಪರ್ಧೆಗಳ ಮೊದಲ ಸುತ್ತು ಆರಂಭವಾಗಲಿದೆ. ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಮೊದಲ ದಿನ 'ಹುಚ್ಚುಡುಗ್ರು' ಚಲನಚಿತ್ರ ತಂಡದವರು ಭೇಟಿ ಕೊಟ್ಟು ಕಾರ್ಯಕ್ರಮ ನಡೆಸಿಕೊಡುವರು. ಕಾಲೇಜಿನ ವಿದ್ಯಾರ್ಥಿಗಳೂ ಸಹ ತಮ್ಮ ಕಾರ್ಯಕ್ರಮ ನೀಡುವರು.
2ನೇ ದಿನ ಸಂಜೆ ಬೆಂಗಳೂರಿನ ದಯಾನಂದ ಸಾಗರ್ ಕಾಲೇಜಿನ ಸ್ಟೂಡೆಂಟ್ ಬ್ಯಾಂಡ್ ಕಾರ್ಯಕ್ರಮ ನೀಡುತ್ತಿದೆ.
ಸ್ಪರ್ಧೆ, ಬಹುಮಾನ:  ಭಾನುವಾರ ಸ್ಪರ್ಧೆಗಳ ಅಂತಿಮ ಸುತ್ತು ನಡೆಯಲಿದೆ. ಪ್ಲಾನ್ ಎಕ್ಸ್-2ಡಿ ಡ್ರಾಯಿಂಗ್, ಆಕೃತಿ 3-ಡಿ ಮಾಡೆಲಿಂಗ್, ಸರ್ಕ್ಯೂಟ್ ಡಿಬಗ್ಗಿಂಗ್, ಕಂಪ್ಯೂಟರ್ ಪ್ರೋಗ್ರಾಮಿಂಗ್- ಡಿಬಗ್ಗಿಂಗ್, ಚಕ್ರವ್ಯೂಹ, ಮಿಸ್ಟರ್ ಅಂಡ್ ಮಿಸಸ್ ಟೆಕ್‌ಝೋನ್, ಪ್ರೊಡಕ್ಟ್ ಮ್ಯಾನೆಜ್‌ಮೆಂಟ್, ರೋಬೊ ಕಾಳಗ ಸ್ಪರ್ಧೆ ನಡೆಯಲಿದೆ.
ಪ್ರತಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ 5000 ರುಪಾಯಿ ಮತ್ತು ವಿವಿಧ ತರಬೇತಿ ಸಂಸ್ಥೆಗಳ ರಿಯಾಯಿತಿ ಕೂಪನ್‌ಗಳನ್ನು ನೀಡಲಾಗುತ್ತಿದೆ. ರೋಬೋ ಸ್ಪರ್ಧೆಯಲ್ಲಿ ವಿಜೇತರಾದವರಿಗೆ 10000 ನಗದು ನೀಡಲಾಗುತ್ತದೆ. ಒಟ್ಟಾರೆ 2.20 ಲಕ್ಷ, ಒಟ್ಟಾರೆ 4 ಲಕ್ಷ ಮೌಲ್ಯದ ಬಹುಮಾನ ನೀಡಲಾಗುತ್ತಿದೆ ಎಂದು ಸುಮುಖ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಬೋಧನಾ ವರ್ಗದ ಸುನಿತಾ, ಬಸವರಾಜ್, ಮಂಜುನಾಥ್, ಇರ್ಫಾನ್, ತಸೀನ್, ಮಧುಸೂಧನ್ ವಿದ್ಯಾರ್ಥಿ ಪ್ರತಿನಿಧಿಗಳಾದ ರಮ್ಯ, ವಿಘ್ನೇಶ್, ದಿವ್ಯ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.