ಚುನಾವಣೆ ನನಗೀಗ ಸತ್ವಪರೀಕ್ಷೆಯ ಕಾಲ
ಶಿಕಾರಿಪುರ: ಲೋಕಸಭಾ ಚುನಾವಣೆ ನನಗೆ ಸತ್ವಪರೀಕ್ಷೆಯ ಕಾಲವಾಗಿದೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಪಟ್ಟಣದ ಮಂಗಳ ಭವನದಲ್ಲಿ ಮಂಗಳವಾರ ನಡೆದ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ಬಿಜೆಪಿ ಸರ್ಕಾರ ಅಸ್ಥಿತ್ವ ಗಳಿಸಿದ ನಂತರದಲ್ಲಿ ಕೇವಲ ರಾಜ್ಯದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಇದೀಗ ನಿರೀಕ್ಷಿಸದ ರೀತಿಯಲ್ಲಿ ಕೇಂದ್ರ ಹಾಗೂ ರಾಜ್ಯದ ಪಕ್ಷದ ಮುಖಂಡರು ಅಪೇಕ್ಷೆ ವ್ಯಕ್ತಪಡಿಸಿದ್ದರಿಂದ ಇದೀಗ ಲೋಕಸಭಾ ಚುನಾವಣೆಗೆ ಸ್ಪರ್ಧಿಸಬೇಕಾಗಿದೆ ಎಂದರು.
ಹೋರಾಡಬೇಕಾದ ಸ್ಥಿತಿ: ಸಂಸದನಾಗಿ ಅತ್ಯುತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ ಪುತ್ರ ರಾಘವೇಂದ್ರ ಪುನಃ ಸ್ಪರ್ಧಿಸಲು ಎಲ್ಲಾ ರೀತಿಯ ಅರ್ಹತೆ ಹೊಂದಿದ್ದರೂ ಪಕ್ಷದ ವರಿಷ್ಠರ ಒತ್ತಡಕ್ಕೆ ಸ್ಪರ್ಧಿಸಬೇಕಾಗಿದೆ. ಈ ಬಾರಿಯ ಚುನಾವಣೆ ಅತ್ಯಂತ ಬಿನ್ನವಾಗಿದೆ. ಸ್ವಾತಂತ್ರ ಪೂರ್ವದಲ್ಲಿ ದೇಶಕ್ಕೆ ಸ್ವಾತಂತ್ರಕ್ಕಾಗಿ ಹೋರಾಟ ನಡೆಸಿದ ರೀತಿಯಲ್ಲಿ ಈ ಬಾರಿ ಗಳಿಸಿದ ಸ್ವಾತಂತ್ರವನ್ನು ಉಳಿಸಿಕೊಳ್ಳಲು ಹೋರಾಡಬೇಕಾದ ಸ್ಥಿತಿ ತಲುಪಿದ್ದೇವೆ ಎಂದರು.
ಸ್ವಾತಂತ್ರ್ಯಾ ನಂತರದ 50 ವರ್ಷದಲ್ಲಿ ದೇಶದ ಅಭಿವೃದ್ಧಿಗೆ ಹೋಲಿಸಿದಲ್ಲಿ ಗುಜರಾತ್ನಲ್ಲಿ ನರೇಂದ್ರ ಮೋದಿ ಕಡಿಮೆ ಅವಧಿಯಲ್ಲಿನ ಸಾಧನೆಯನ್ನು ಜನತೆ ಕಂಡು ಇದೀಗ ದೇಶಕ್ಕೆ ಸಮರ್ಥ ನಾಯಕತ್ವ ಮೋದಿಯಿಂದ ಮಾತ್ರ ಸಾಧ್ಯ ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಎಂದರು.
ಅಸಾಧ್ಯ ಎಂಬ ಸ್ಥಿತಿ: ಕಾಂಗ್ರೆಸ್ ಪಕ್ಷದ ಸುದೀರ್ಘ ಅಧಿಕಾರವಧಿಯು ದೇಶದ ಬಗ್ಗೆ ಸ್ವಷ್ಟ ಕಲ್ಪನೆ, ಏಕತೆ, ಅಖಂಡತೆ, ಸಮಗ್ರತೆ ಬಗ್ಗೆ ಅನುಮಾನಿಸುವಂತಾಗಿದೆ. ಇದರೊಂದಿಗೆ ಲಕ್ಷಾಂತರ ಕೋಟಿ ಹಗರಣಗಳಲ್ಲಿ ಭಾಗಿಯಾಗಿ ಪಕ್ಷ ದಯನೀಯ ಸ್ಥಿತಿ ತಲುಪಿದೆ. ಸತತ 3 ಬಾರಿ ಮುಖ್ಯಮಂತ್ರಿಯಾದ ಶೀಲಾ ದೀಕ್ಷಿತ್ ದೆಹಲಿಯಲ್ಲಿ ಕೇವಲ 8 ಸ್ಥಾನಗಳಲ್ಲಿ ಪಕ್ಷ ಜಯ ಗಳಿಸುವ ಮೂಲಕ ಹೀನಾಯ ಸ್ಥಿತಿ ತಲುಪಿದ್ದರೂ ರಾಜ್ಯಪಾಲರನ್ನಾಗಿಸುವ ಮೂಲಕ ಅಸಹ್ಯ ವಾತಾವರಣವನ್ನು ಕಾಂಗ್ರೆಸ್ ಸೃಷ್ಟಿಸಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕೇವಲ 65-70 ಸ್ಥಾನ ಗೆಲವು ಅಸಾಧ್ಯ ಎಂಬ ಪರಿಸ್ಥಿತಿ ತಲುಪಿದೆ ಎಂದರು.
ದೇಶದ ಹಿತದೃಷ್ಟಿಯಿಂದ ಈ ಬಾರಿಯ ಚುನಾವಣೆ ಬಹು ಮಹತ್ವದ್ದಾಗಿದೆ. ಕಾಂಗ್ರೆಸ್ ಜೆಡಿಎಸ್ ಅಭ್ಯರ್ಥಿಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಕಾದ ಅವಶ್ಯಕತೆ ಇಲ್ಲ. ಚುನಾವಣೆಯಲ್ಲಿ ಸ್ಪರ್ಧೆ ಅನಿವಾರ್ಯವಾಗಿದೆ. ಮತದಾರರ ಮನೆ ಮನೆಗೆ ತೆರಳಿ ಅಧಿಕಾರವಧಿಯಲ್ಲಿ ಸರ್ಕಾರದ ಸೌಲಭ್ಯ ದೊರೆತಿಲ್ಲ ಎಂದು ಹೇಳಲ ಸಾಧ್ಯವಾದ ರೀತಿಯಲ್ಲಿ ನಿರ್ವಹಿಸಿದ ಯೋಜನೆಗಳ ಬಗ್ಗೆ ವಿವರಿಸಿ ಮತ ಯಾಚಿಸುವಂತೆ ಕಾರ್ಯಕರ್ತರಿಗೆ ತಿಳಿಸಿದರು.
ಮಾ.20 ರಂದು ನಾಮಪತ್ರ ಸಲ್ಲಿಸಲಿದ್ದು ಅಂದು ಪ್ರತಿಯೊಬ್ಬ ಕಾರ್ಯಕರ್ತರು ಗ್ರಾಮದ ದೇವಾಲಯಕ್ಕೆ ಹೆಚ್ಚಿನ ಮತದಾರರ ಜತೆ ತೆರಳಿ ದೇಶಕ್ಕೆ, ಪಕ್ಷಕ್ಕೆ, ನರೇಂದ್ರ ಮೋದಿಗೆ ಶುಭ ಹಾರೈಸಿ ಪ್ರಾರ್ಥನೆ ಸಲ್ಲಿಸುವಂತೆ ತಿಳಿಸಿದ ಅವರು, ಕಾರ್ಯಕರ್ತರು, ಮುಖಂಡರ ಸಾಮರ್ಥ್ಯವನ್ನು ಭೂತ್ಗಳಲ್ಲಿ ಪಡೆದ ಶೇ.70 ಮತದಿಂದ ನಿರ್ಧರಿಸಬಹುದಾಗಿ ಎಂದರು.
20 ರಿಂದ ಮನೆ ಭೇಟಿ: ರಾಜ್ಯದ ಉದ್ದಗಲಕ್ಕೆ ಸಂಚರಿಸುವ ಉದ್ದೇಶದಿಂದ ಜಿಲ್ಲೆಯಲ್ಲಿ ಪಕ್ಷದ ಸಾರ್ವಜನಿಕ ಸಭೆ, ಬಹಿರಂಗ ಸಭೆಗಳು ಕೊನೆಗೊಂಡಿದೆ. ಕಾರ್ಯಕರ್ತರು ವೈಯಕ್ತಿಕ ಮನೆ ಭೇಟಿಯನ್ನು 20 ರಿಂದ ಆರಂಭಿಸುವಂತೆ ತಿಳಿಸಿ ಪರಸ್ಥಳದ ಹಿತೈಷಿಗಳು ಸಂಬಂಧಿಕರ ಮೂಲಕ ಪಕ್ಷಕ್ಕೆ ಹೆಚ್ಚಿನ ಮತ ದೊರಕಿಸುವಂತೆ ಶ್ರಮಿಸಬೇಕಾಗಿದೆ. ರಾಜ್ಯದಲ್ಲಿ ಕನಿಷ್ಠ 20 ಸ್ಥಾನದಲ್ಲಿ ಜಯ ಗಳಿಸದಿದ್ದಲ್ಲಿ ಪಕ್ಷ ಸೇರ್ಪಡೆ ಪ್ರಯೋಜನವಿಲ್ಲವಾಗಲಿದೆ ಎಂದರು.
ಈ ಸಂದರ್ಭ ತಾ.ಪಂ. ಅಧ್ಯಕ್ಷೆ ಲೀಲಾವತಿ, ಜಿ.ಪಂ. ಸದಸ್ಯ ಈಶ್ಪರಪ್ಪ, ಬಂಗಾರಿ ನಾಯ್ಕ್, ಎಪಿಎಂಸಿ ಅಧ್ಯಕ್ಷ ಚಂದ್ರಪ್ಪ, ಮುಖಂಡ ಕೆ.ಶೇಖರಪ್ಪ, ರುದ್ರಪ್ಪಯ್ಯ, ಗುರುಮೂರ್ತಿ, ವಸಂತಗೌಡ, ಭೂಕಾಂತ್, ಗಾಯತ್ರಿದೇವಿ, ಚನ್ನವೀರಪ್ಪ, ಸುಕೇಂದ್ರಪ್ಪ, ಅಂಬಾರಗೊಪ್ಪ ಶೇಖರಪ್ಪ, ಕವಲಿ ಸುಬ್ರಹ್ಮಣ್ಯ, ಶುಭಾರಘು,ಪ್ರವೀಣಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

