ತಹಸೀಲ್ದಾರ್ ನಟರಾಜ್ಗೆ ಬೀಳ್ಕೊಡುಗೆ
ಕ.ಪ್ರ.ವಾರ್ತೆ ಸೊರಬ ಮಾ. 13
ತಾಲೂಕು ತಹಸೀಲ್ದಾರ್, ದಂಡಾಧಿಕಾರಿ ಹಾಗೂ ಮುಜರಾಯಿ ಅಧಿಕಾರಿ ಪಿ.ಜಿ. ನಟರಾಜ್ ಅವರು ವರ್ಗಾವಣೆ ಆಗಿರುವ ಹಿನ್ನೆಲೆಯಲ್ಲಿ ತಾಲೂಕು ಆಡಳಿತದ ವತಿಯಿಂದ ಬೀಳ್ಕೊಡುಗೆ ನೀಡಲಾಯಿತು.
ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದ ಅವರು, ಸರ್ಕಾರಿ ಇಲಾಖೆ ಸೇವಕನಾಗಿ ಸೇವೆ ಸಲ್ಲಿಸಿದ ತೃಪ್ತಿ ನನಗಿದೆ. ಒಬ್ಬ ಅಧಿಕಾರಿಯ ಪ್ರಾಮಾಣಿಕ ಕಾರ್ಯ ನಿರ್ವಹಣೆಗೆ ಪ್ರಮುಖವಾಗಿ ಕಚೇರಿ ಸಿಬ್ಬಂದಿ ಹಾಗೂ ಮಾಧ್ಯಮದವರು ಆಯಾ ಕಾಲಘಟ್ಟ ಅರಿತು ಸಹಕರಿಸಿದರೆ ಸೇವೆ ಸಾರ್ಥಕವಾಗುತ್ತದೆ. ಸಲ್ಲಬೇಕಾದ ಕಡೆಯೇ ಸೇವೆ ಸಲ್ಲುತ್ತದೆ. ಈ ನಿಟ್ಟಿನಲ್ಲಿ ತಾಲೂಕನ್ನು ನಾನು ಸ್ಮರಿಸಬೇಕಿದೆ ಎಂದರು.
ನೂತನ ತಹಸೀಲ್ದಾರ್ ತಿಪ್ಪುರಾವ್ ಮಾತನಾಡಿ, ಈ ಕಾರ್ಯಕ್ರಮವೇ ಒಬ್ಬ ಪ್ರಾಮಾಣಿಕ ಅಧಿಕಾರಿಯ ವ್ಯಕ್ತಿತ್ವ ಏನು ಎಂಬ ಅರಿವಾಗುತ್ತದೆ. ಈ ದಿಸೆಯಲ್ಲಿ ನನ್ನ ಜವಾಬ್ದಾರಿ ಏನೆಂಬುದನ್ನು ನೆನಪಿಸಿದ್ದೀರಿ, ತಾಲೂಕು ಜನತೆ, ಜನಪ್ರತಿನಿಧಿ, ಮಾಧ್ಯಮ, ಕಚೇರಿ ಸಿಬ್ಬಂದಿ ಸಹಕಾರವನ್ನು ಈ ಹಿನ್ನೆಲೆಯಲ್ಲಿ ಬಯಸುತ್ತೇನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಇಒ ಮಹ್ಮದ್ ಇಸ್ಮಾಯಿಲ್, ಕೃಷಿ ಅಧಿಕಾರಿ ಜಿ. ಮಂಜುಳಾ, ಜಿಪಂ ಎಇಇ ತಿಮ್ಮಪ್ಪ, ಸಿಡಿಪಿಒ ಚಿದಂಬರಪ್ಪ, ತೋಟಗಾರಿಕಾ ನಿರ್ದೇಶಕ ರಾಮಚಂದ್ರ ಮಡಿವಾಳರ್, ಶಿರಸ್ತೇದಾರ್ ಶಶಿಕಲಾ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುರೇಶ್, ವಿವಿಧ ಇಲಾಖೆ ಸಿಬ್ಬಂದಿ ಮೊದಲಾದವರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

