ಪೌರತ್ವ ತರಬೇತಿಯಿಂದ ಸಂಘಟನಾ ಚಾತುರ್ಯ
ಕ.ಪ್ರ.ವಾರ್ತೆ, ಶಿಕಾರಿಪುರ, ಮಾ.15
ಶಿಕ್ಷಕರಾಗುವವರಿಗೆ ಕಾರ್ಯಕ್ಷಮತೆ ಹೆಚ್ಚಿಸಿ ಸಂಘಟನಾ ಚತುರತೆ ಬೆಳೆಸಿಕೊಳ್ಳುವಲ್ಲಿ ಪೌರತ್ವ ತರಬೇತಿ ಶಿಬಿರ ಅವಶ್ಯವಾಗಿದೆ ಎಂದು ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯ ನಿರ್ದೇಶಕಿ ತೇಜಸ್ವಿನಿ ರಾಘವೇಂದ್ರ ಅಭಿಪ್ರಾಯಪಟ್ಟರು.
ತಾಲೂಕಿನ ಬೆಲವಂತನಕೊಪ್ಪ ಹಾಗೂ ನೇರಲಗಿ ಗ್ರಾಮದಲ್ಲಿ ಪಟ್ಟಣದ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ನಡೆದ 2013- 14ನೇ ಸಾಲಿನ ಪೌರತ್ವ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಭವಿಷ್ಯದ ಶಿಕ್ಷಕರು ಗ್ರಾಮಾಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಿ ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆತು ಬಾಳಲು ವಿವಿಧ ರೀತಿಯ ಕೌಶಲಗಳ ಅಗತ್ಯವಿದೆ ಎಂದರು.
ಸಾಮರ್ಥ್ಯ ರೂಢಿಸಿಕೊಳ್ಳಿ: ಶಿಬಿರದ ನಿರ್ದೇಶಕಿ, ಪ್ರಾಚಾರ್ಯೆ ಡಾ. ವಿ.ಆರ್. ಜಯಶ್ರೀ ಪ್ರಾಸ್ತಾವಿಕವಾಗಿ ಮಾತನಾಡಿ, ಪಠ್ಯಕ್ರಮದ ಮೂಲಕ ಅಭ್ಯಸಿಸಲಾಗದ ಹಲವು ಸಾಮರ್ಥ್ಯಗಳನ್ನು ಪೌರತ್ವ ತರಬೇತಿ ಶಿಬಿರದ ಮೂಲಕ ರೂಢಿಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.
ಧ್ವಜಾರೋಹಣವನ್ನು ಪ್ರಾಚಾರ್ಯೆ ಜಯಶ್ರೀ ನೆರವೇರಿಸಿದರು. ಜಿ.ಪಂ. ಸದಸ್ಯ ದಾನಿ ರುದ್ರಪ್ಪ, ತಾ.ಪಂ. ಸದಸ್ಯೆ ಅನಸೂಯಮ್ಮ, ಶ್ರೀವೀರಭದ್ರೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಡಾ.ಮುರುಘರಾಜ್, ಕಾರ್ಯದರ್ಶಿ ರಾಜಣ್ಣ, ತಡಗುಣಿ ಗ್ರಾಪಂ ಅಧ್ಯಕ್ಷ ಮಂಜುನಾಥ್ ಕಾಳಿ, ಸದಸ್ಯ ದಿವಾಕರ್ ರಾವ್ ಜೊತೆಗೆ ಗ್ರಾಮದ ಮುಖಂಡರು, ಉಪನ್ಯಾಸಕರು ಮತ್ತಿತರರು ಹಾಜರಿದ್ದರು.
ಪ್ರಶಿಕ್ಷಣಾರ್ಥಿ ವರ್ಷ ತಂಡ ಪ್ರಾರ್ಥಿಸಿ, ದಾನೇಶ್ ಸ್ವಾಗತಿಸಿ, ಅಶ್ವಿನಿ ನಿರೂಪಿಸಿ, ಶಾಜಿಯಾ ಖಾನಂ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

