ಶಿವಮೊಗ್ಗ

ಆತ್ಮವಂಚನೆಯಿಂದ ಬದುಕು ಹಾಳು: ಶ್ರೀ

Published On :

ಶಿವಮೊಗ್ಗ: ವ್ಯಕ್ತಿಯ ತನ್ನ ಪರಿಮಿತಿಯ ಅರಿವಿಲ್ಲದೆ ಆತ್ಮವಂಚನೆ ಮೂಲಕ ತಮ್ಮ ಉತ್ತಮ ಬದುಕನ್ನು ಕಳೆದುಕೊಳ್ಳುತ್ತಾನೆ ಎಂದು ಬಸವಕೇಂದ್ರದ ಚರಮೂರ್ತಿ ಶ್ರೀಬಸವಮರಳಸಿದ್ದ ಸ್ವಾಮೀಜಿ ಹೇಳಿದರು.
ಅವರು ಸ್ವಾಮಿ ವಿವೇಕಾನಂದ ಬಡಾವಣೆಯ ಶ್ರೀನಾಗಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಏರ್ಪಡಿಸಿದ್ದ ನೆಮ್ಮದಿಯ ಬದುಕು ತಿಂಗಳ ಉಪನ್ಯಾಸದಲ್ಲಿ ಮಾತನಾಡಿ, ಭೂತ ಹಾಗೂ ಭವಿಷ್ಯದ ಚಿಂತೆ ಬಿಟ್ಟು ವರ್ತಮಾನದ ಅಗತ್ಯತೆಗಳಿಗೆ ಆದ್ಯತೆ ನೀಡಿದಲ್ಲಿ ನೆಮ್ಮದಿಯ ಬದಕನ್ನು ಪಡೆಯಬಹುದು ಎಂದು ಹೇಳಿದ ಅವರು, ಈ ಕ್ಷಣದಲ್ಲಿ ಏನು ಮಾಡಬೇಕೆಂಬ ಅರಿವು ಇಲ್ಲದೆ ಭೂತ ಭವಿಷ್ಯಗಳ ಬಗ್ಗೆ ಯೋಚಿಸುವುದರಿಂದಲೇ ನಮ್ಮಲ್ಲಿ ಗೊಂದಲಗಳು ಉಂಟಾಗುತ್ತವೆ ಎಂದು ತಿಳಿಸಿದರು.
ನಮ್ಮ ಸಾಮರ್ಥ್ಯದ ಅರಿವಿನ ಸ್ಪಷ್ಟತೆ ಇರಬೇಕು ಆತ್ಮವಿಶ್ವಾಸದ ಆತ್ಮಶಕ್ತಿಯನ್ನು ವೃದ್ಧಿಸಿಕೊಳ್ಳಬೇಕು ಎಂದವರು ಸಲಹೆ ನೀಡಿದರಲ್ಲದೇ, ಮಕ್ಕಳಿಗೆ ಬದುಕಿನ ಆದ್ಯತೆ ಬಗ್ಗೆ ತಿಳಿಸಿ ಹೇಳಬೇಕು. ಇದರಿಂದ ಅವರ ಭವಿಷ್ಯ ಉಜ್ವಲವಾಗುತ್ತದೆ. ಪೋಷಕರು ಈ ವಿಚಾರದಲ್ಲಿ ಸ್ಪಷ್ಟ ನಿಲುವು ಹೊಂದಿರಬೇಕಾಗುತ್ತದೆ ಎಂದವರು ಅವರು ಹಲವು ಉದಾಹರಣೆಯೊಂದಿಗೆ ವಿವರಿಸಿದರು.
ಸಭೆ ಅಧ್ಯಕ್ಷತೆಯನ್ನು ಶ್ರೀ ನಾಗಸುಬ್ರಹ್ಮಣ್ಯ ದೇವಸ್ಥಾನ ಸೇವಾಸಮಿತಿ ಅಧ್ಯಕ್ಷ ನ.ರಾ. ವೆಂಕಟೇಶ್ ವಹಿಸಿ ದೇವಸ್ಥಾನ ಸಮಿತಿಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಂಕುತಿಮ್ಮನ ಕಗ್ಗ ಸಪ್ತಾಹ ನಡೆಸಿಕೊಟ್ಟ ಉಪನ್ಯಾಸಕ ಜಿ.ಎಸ್. ನಟೇಶ್‌ರನ್ನು ಸನ್ಮಾನಿಸಲಾಯಿತು. ಸಮಿತಿ ನಿರ್ದೇಶಕ ಸಣ್ಣಮಲ್ಲಪ್ಪ ಪ್ರಾರ್ಥಿಸಿ, ಸ್ವಾಗತಿಸಿದರು ಅರ್ಚಕ ಸಂದೇಶ ಉಪಾಧ್ಯ ವಂದಿಸಿದರು. ಸಭೆಯಲ್ಲಿ ಖಜಾಂಚಿ ಎ.ವಿ. ಕೃಷ್ಣರಾಜ್ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.