ಶಿವಮೊಗ್ಗ

ಚಿನ್ನದ ಬೆಳೆ ತೆಗೆದ ರೈತನ ಮಗಳು

Published On :

ವಿಶೇಷ ವರದಿ
ಶಿವಮೊಗ್ಗ:  ರೈತನ ಮಗಳು ಚಿನ್ನದ ಬೆಳೆ ತೆಗೆದಿದ್ದಾಳೆ. ಶಿವಮೊಗ್ಗ ತಾಲೂಕು ರಾಮನಗರ ಗ್ರಾಮದ ಕೃಷಿಕ ಸುರೇಶ್, ಗೀತಾ ದಂಪತಿ ಪುತ್ರಿ ಅರ್ಪಿತಾ ಈ ಬಾರಿಯ ಕುವೆಂಪು ವಿಶ್ವವಿದ್ಯಾಲಯದಲ್ಲಿ ಗರಿಷ್ಠ ಚಿನ್ನದ ಪದಕ ಬಾಚಿದ ವಿದ್ಯಾರ್ಥಿನಿ. ಶಿವಮೊಗ್ಗದ ಪ್ರತಿಷ್ಠಿತ ರಾಷ್ಟ್ರೀಯ ಶಿಕ್ಷಣ ಸಮಿತಿಯು ನಡೆಸುತ್ತಿರುವ ಕಮಲಾ ನೆಹರು ಮಹಿಳಾ ಕಾಲೇಜಿನ ಬಿಕಾಂ ವಿದ್ಯಾರ್ಥಿನಿ ಅರ್ಪಿತಾ ಅವರು ಕುವೆಂಪು ವಿವಿಯ 24ನೇ ಘಟಿಕೋತ್ಸವದಲ್ಲಿ 5 ಚಿನ್ನದ ಪದಕಗಳಿಗೆ ಕೊರಳೊಡ್ಡುತ್ತಿದ್ದಾರೆ.ಈ ಸಂದರ್ಭ 'ಕನ್ನಡಪ್ರಭ'ಕ್ಕೆ ಪ್ರತಿಕ್ರಿಯೆ ನೀಡಿದ ಅರ್ಪಿತಾ, ಓದಿನಲ್ಲಿ ಆಸಕ್ತಿ, ಸಾಕಷ್ಟು ಪರಿಶ್ರಮ ಹಾಕಿದ್ದೆ. ಆದರೆ, ಚಿನ್ನದ ಪದಕ ಬರುತ್ತದೆಂದು ಯಾವಾಗಲೂ ನಿರೀಕ್ಷಿತ. 5 ಚಿನ್ನದ ಪದಕ ನನ್ನ ಪಾಲಿಗೆ ಅನಿರೀಕ್ಷಿತ ಸುದ್ದಿ. ಈ ಘಳಿಗೆಯಲ್ಲಿ ಖುಷಿಯಾಗುತ್ತಿದೆ ಎಂದು ಚುಟುಕಾಗಿ ಉತ್ತರಿಸಿದರು.
ಹೆಮ್ಮೆ ಎನಿಸುತ್ತಿದೆ:  ಕಮಲಾ ನೆಹರು ಕಾಲೇಜಿನ ಬೋಧಕ ವರ್ಗವನ್ನು ನಾನು ಸ್ಮರಿಸಲೇಬೇಕು. ಅವರೆಲ್ಲ ಸಹಕಾರದಿಂದ ಈ ಸಾಧನೆ ಸಾಧ್ಯವಾಯಿತು. ಪೋಷಕರೂ ಸಹ ನನ್ನ ಓದಿಗೆ ಪ್ರೋತ್ಸಾಹ ನೀಡಿದರು, ಚಿನ್ನದ ಪದಕ ಬಂದಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ ಎಂದು ತಿಳಿಸಿದರು.ಮಾರ್ಗದರ್ಶನ:  ಚಾರ್ಟರ್ಡ್ ಅಕೌಂಟೆಂಟ್ ಆಗಬೇಕೆಂಬ ಕನಸಿನಂತೆ ತಯಾರಿ ನಡೆಸಿದ್ದೇನೆ. ಸಿಎ ಪರೀಕ್ಷೆ ತೆಗೆದುಕೊಳ್ಳುವ ಪೂರ್ವಭಾವಿಯಾಗಿ ಶಿವಮೊಗ್ಗದ ಆಡಿಟರ್ ಎನ್.ಎಲ್. ಪ್ರಸಾದ್ ಅವರಿಂದ ಮಾರ್ಗದರ್ಶನ ಪಡೆದುಕೊಳ್ಳುತ್ತಿದ್ದೇನೆ ಎಂದು ವಿವರಿಸಿದರು.
ಅಗ್ರಸ್ಥಾನದಲ್ಲಿ ಅರ್ಪಿತಾ:  ಈ ಬಾರಿ 109 ಸ್ವರ್ಣ ಪದಕ ಹಂಚಿಕೆಯಾಗುತ್ತಿದ್ದು, 67 ವಿದ್ಯಾರ್ಥಿಗಳು ಹಂಚಿಕೆಯಾಗುತ್ತಿದ್ದಾರೆ. ಈ ಪೈಕಿ 51 ವಿದ್ಯಾರ್ಥಿನಿಯರೇ ಸೇರಿರುವುದು ವಿಶೇಷ. ಪದಕ ಪಡೆದ ಪಟ್ಟಿಯಲ್ಲಿ ಗ್ರಾಮೀಣ ಪ್ರತಿಭೆ ಅರ್ಪಿತಾ ಅಗ್ರಸ್ಥಾನದಲ್ಲಿರುವುದು ಈ ಸಾಲಿನ ಘಟಿಕೋತ್ಸವದ ವಿಶೇಷವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.