ಇಂದು 162 ಮಂದಿಗೆ ಕುವೆಂಪು ವಿವಿ ಪಿಎಚ್ಡಿ
Published On :
- ಕ.ಪ್ರ.ವಾರ್ತೆ ಶಿವಮೊಗ್ಗ ಮಾ. 18
ಕುವೆಂಪು ವಿಶ್ವವಿದ್ಯಾಲಯದ 24ನೇ ಘಟಿಕೋತ್ಸವ ಮಾ.19 ರಂದು ನಡೆಯಲಿದೆ. 162 ಮಂದಿ ಪಿಎಚ್ಡಿ ಪದವಿ, 31 ಮಂದಿ ಎಂಫಿಲ್ ಪದವಿ ಸ್ವೀಕರಿಸುವರು. ವಿಶೇಷವೆಂದರೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಯಾರಿಗೂ ಸಹ ಈ ಬಾರಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತಿಲ್ಲ.
ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ಕುಲಪತಿ ಪ್ರೊ. ಎಸ್.ಎ. ಬಾರಿ, ರಾಜ್ಯಪಾಲ ಹನ್ಸರಾಜ ಭಾರದ್ವಾಜ್ ಅವರು ಘಟಿಕೋತ್ಸವ ಅಧ್ಯಕ್ಷತೆ ವಹಿಸಲಿದ್ದಾರೆ. ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ಎನ್.ಕುಮಾರ್ ಘಟಿಕೋತ್ಸವ ಭಾಷಣ ಮಾಡುವರು ಎಂದರು.
ಈ ಘಟಿಕೋತ್ಸವದಲ್ಲಿ 3938 ವಿದ್ಯಾರ್ಥಿ ಹಾಗೂ 6376 ವಿದ್ಯಾರ್ಥಿನಿಯರು ಸೇರಿದಂತೆ 10314 ಮಂದಿ ಪದವಿ ಪಡೆಯಲು ಅರ್ಹರು. ದೂರ ಶಿಕ್ಷಣ ನಿರ್ದೇಶನಾಲಯದಿಂದ 25494 ವಿದ್ಯಾರ್ಥಿಗಳು ಪದವಿ ಪಡೆಯುವವರಿದ್ದಾರೆ ಎಂದು ತಿಳಿಸಿದರು.
ಪದಕ ವಿವರ: ಘಟಿಕೋತ್ಸವದಲ್ಲಿ 109 ಸ್ವರ್ಣ ಪದಕಗಳಿವೆ. ಅವುಗಳನ್ನು 16 ಪುರುಷರು ಹಾಗೂ 51 ಮಹಿಳೆಯರು ಸೇರಿ ಒಟ್ಟು 67 ವಿದ್ಯಾರ್ಥಿಗಳು ಹಂಚಿಕೊಂಡಿದ್ದಾರೆ. ಶಿವಮೊಗ್ಗ ಕಮಲಾ ನೆಹರು ಮಹಿಳಾ ಕಾಲೇಜಿನ ಬಿ.ಕಾಂ. ವಿದ್ಯಾರ್ಥಿನಿ ಕೆ.ಎಸ್. ಅರ್ಪಿತಾ ಐದು ಸ್ವರ್ಣ ಪದಕ ಪಡೆದಿದ್ದರೆ, ಶಂಕರಘಟ್ಟದ ಎಂಎ (ಕನ್ನಡ) ವಿದ್ಯಾರ್ಥಿನಿ ಬಿ.ಡಿ. ಅಪರ್ಣಾ 4 ಸ್ವರ್ಣ ಪದಕ ಹಾಗೂ 2 ನಗದ ಬಹುಮಾನ ಪಡೆದುಕೊಂಡಿದ್ದಾರೆ.
ಕೆ.ಪಿ.ಭವ್ಯಾ (ಎಂಎ ಕನ್ನಡ), ರಾಬಿಯಾ ಬಸ್ರಿ (ಎಂಎ ಉರ್ದು) ತಲಾ 4 ಸ್ವರ್ಣ ಪದಕ ಹಾಗೂ 1 ನಗದು ಬಹುಮಾನಗಳನ್ನು ಪಡೆದಿದ್ದಾರೆ.
ಎಂಸ್ಸಿ ಜೈವಿಕ ತಂತ್ರಜ್ಞಾನ ವಿದ್ಯಾರ್ಥಿ ಕೆ.ಸಿ.ಸುಪ್ರವಾಣಿ 4 ಸ್ವರ್ಣ ಪದಕ ಪಡೆದಿದ್ದರೆ, ದಾವಣಗೆರೆ ಬಿವಿಎ ಕಾಲೇಜಿನ ಗೋವೆರಹಳ್ಳಿ ಸ್ವಾಮಿ 3 ಸ್ವರ್ಣ ಪದಕ ಹಾಗೂ 1 ನಗದು ಬಹುಮಾನ ಪಡೆದಿರುತ್ತಾರೆ.
ಕೆ.ಎನ್. ಸುಬ್ರಹ್ಮಣ್ಯ (ಎಂ.ಎ. ಸಮಾಜಶಾಸ್ತ್ರ), ರಾಮೇಗೌಡ (ಎಂಬಿಎ), ಚೈತ್ರ (ಎಂಎ ಇಂಗ್ಲಿಷ್), ಅಕ್ಷತಾ (ಎಂ.ಎ. ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ), ಯು.ದಶಮಿ (ಎಂಸಿಎ)ನಲ್ಲಿ ತಲಾ 3 ಸ್ವರ್ಣ ಪದಕಗಳನ್ನು ಗಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕುವೆಂಪು ವಿವಿ ಕುಲಸಚಿವರಾದ ಮಲ್ಲಿಕಾ ಘಂಟಿ, ಬೋಜಾನಾಯ್ಕ, ಹಣಕಾಸು ಅಧಿಕಾರಿ ಹಿರೇಮಣಿ ನಾಯ್ಕ ಹಾಜರಿದ್ದರು.
ಪಿಎಚ್ಡಿ ನಿಕಾಯವಾರು
ಕಲಾ ನಿಕಾಯ- 39
ವಾಣಿಜ್ಯ ನಿಕಾಯ- 5
ಶಿಕ್ಷಣ ನಿಕಾಯ- 6
ತಾಂತ್ರಿಕ ನಿಕಾಯ- 15
ವಿಜ್ಞಾನ ನಿಕಾಯ- 96
ಕಾನೂನು ನಿಕಾಯ- 01
- - - - - - - - - - -
ಎಂಫಿಲ್
ಕಲಾ ನಿಕಾಯ- 27
ವಿಜ್ಞಾನ ನಿಕಾಯ- 02
ಶಿಕ್ಷಣ ನಿಕಾಯ- 02
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

