ಸಮಸ್ಯೆಗೆ 'ಕೃಷಿಕ್ ಸಮಾಜ' ಸ್ಪಂದನೆ
ಕ.ಪ್ರ.ವಾರ್ತೆ ಶಿಕಾರಿಪುರ ಮಾ. 20
ಭಾರತೀಯ ಕೃಷಿಕ್ ಸಮಾಜ ಸಂಪೂರ್ಣ ರೈತ ಸಮುದಾಯದ ಅಭಿವೃದ್ಧಿ ಹಾಗೂ ಸಮಸ್ಯೆಯ ಶಾಶ್ವತ ಪರಿಹಾರಕ್ಕಾಗಿ ಅಸ್ಥಿತ್ವ ಪಡೆದಿದೆ. ಸಮಾಜ ರೈತಾಪಿ ವರ್ಗದ ಸಮಸ್ಯೆಯ ಪರಿಹಾರಕ್ಕೆ ಹೆಚ್ಚಿನ ಕಾಳಜಿ ವಹಿಸಲಿದೆ ಎಂದು ಭಾರತೀಯ ಕೃಷಿಕ್ ಸಮಾಜ, ನವದೆಹಲಿ ರಾಜ್ಯ ಉಪಾಧ್ಯಕ್ಷ ನಾಗನಗೌಡ ಮರಿಗೌಡ ತಿಳಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಭಾರತೀಯ ಕೃಷಿಕ್ ಸಮಾಜದ ಜಿಲ್ಲಾ ಯುವ ಘಟಕ ಉದ್ಘಾಟಿಸಿ ಮಾತನಾಡಿದ ಅವರು, 1955 ರಲ್ಲಿ ರಾಷ್ಟ್ರಪತಿ ಬಾಬು ರಾಜೇಂದ್ರಪ್ರಸಾದ್ ಹಾಗೂ ಪ್ರಧಾನಿ ಜವಾಹರ್ ಲಾಲ್ ನೆಹರು ನೇತೃತ್ವದಲ್ಲಿ “Áæç}Ú ÑÚM}æ’ ಎಂಬ ಹೆಸರಿನಲ್ಲಿ ಆರಂಭವಾದ ಸಂಘಟನೆ ಇಂದು 10 ಲಕ್ಷಕ್ಕೂ ಅಧಿಕ ಸದಸ್ಯರನ್ನು ಸಂಘಟಿಸಿ ಬೃಹತ್ ರೈತ ಸಮುದಾಯದ ಆಶಾಕಿರಣವಾಗಿ ರೂಪುಗೊಂಡಿದೆ. ರೈತರ ಕಷ್ಟ-ಸುಖಗಳಿಗೆ ಪೂರಕವಾಗಿ ಸ್ಪಂದಿಸಿ ರೈತರ ಅಭಿವೃದ್ಧಿ ಕೇಂದ್ರೀಕರಿಸಿ ಕಾರ್ಯನಿರ್ವಹಿಸುತ್ತಿರುವ ಸಂಘಟನೆ ರಾಜಕೀಯ ದುರುದ್ದೇಶ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದರು.
ಹೋರಾಟ ಧ್ಯೇಯವಾಗಲಿ: ಮುಖ್ಯ ಅತಿಥಿ ಪೊಲೀಸ್ ಉಪಾಧೀಕ್ಷಕ ಸೈಯದ್ ಇಸಾಕ್ ಮಾತನಾಡಿ, ಸ್ವಾರ್ಥ ಸಾಧನೆಯಿಂದ ಸಂಘಟನೆ ಸಂಪೂರ್ಣ ಹೊರ ಬಂದು ಕೇವಲ ರೈತಾಪಿ ವರ್ಗದ ಶ್ರೇಯೋಭಿವೃದ್ಧಿಗಾಗಿ ಮಾತ್ರ ಎಂಬ ತತ್ವದ ಆಧಾರದಲ್ಲಿ ಕಾರ್ಯನಿರ್ವಹಿಸಿದಲ್ಲಿ ಸಂಘದ ಅಸ್ಥಿತ್ವಕ್ಕೆ ಹೆಚ್ಚಿನ ಮಹತ್ವ ದೊರೆಯಲಿದೆ. ರಾಜಕೀಯ ಮುಲಾಜಿಗೆ ಒಳಪಡದೆ ರೈತರ ಅಭ್ಯುದಯಕ್ಕಾಗಿ ಹೋರಾಟವನ್ನು ಧ್ಯೇಯವಾಗಿಸಿಕೊಳ್ಳಲು ತಿಳಿಸಿದರು.
ಭರವಸೆ: ಭಾರತೀಯ ಕೃಷಿಕ್ ಸಮಾಜದ ರಾಜ್ಯ ಸಹನಿರ್ದೇಶಕ ಹಾಗೂ ಜಿಲ್ಲಾ ಯುವ ಘಟಕದ ಅಧ್ಯಕ್ಷರಾಗಿ ಪದಗ್ರಹಣ ಸ್ವೀಕರಿಸಿ ಚಂದ್ರು ಸಾಹುಕಾರ್ ಮಾತನಾಡಿ, ಮೂಲ ರೈತಾಪಿ ಕುಟುಂಬದ ಹಿನ್ನೆಲೆಯನ್ನು ಗುರುತಿಸಿ ನೀಡಿದ ಜವಾಬ್ದಾರಿ ಚ್ಯುತಿ ಬಾರದ ರೀತಿಯಲ್ಲಿ ನಿರ್ವಹಿಸುವುದಾಗಿ ತಿಳಿಸಿ ಸದಾ ರೈತ ಪರವಾದ ಸಮಸ್ಯೆಗಳಿಗೆ ಸ್ವಂದಿಸುವ ಮೂಲಕ ರಾಜಕೀಯ ಒತ್ತಡಗಳಿಗೆ ಮಣಿಯದೇ ಕಾರ್ಯನಿರ್ವಹಿಸಿ ಸಂಘಟನೆ ಹೆಮ್ಮರವಾಗಿಸುವ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸುವುದಾಗಿ ಭರವಸೆ ನೀಡಿದರು.
ಅಧ್ಯಕ್ಷತೆ ತಾಲೂಕಿನ ಪ್ರಗತಿ ಪರ ರೈತ ಚಂದ್ರಪ್ಪ ಮೆಡ್ಲೇರಿ ವಹಿಸಿದ್ದರು. ತಾಲೂಕು ಸಹಾಯಕ ಕೃಷಿ ನಿರ್ದೇಶಕ ಡಾ.ಪ್ರಭಾಕರ್, ರಾಜ್ಯ ಸಹನಿರ್ದೇಶಕ ನಾಗರಾಜ್ ಹಾವೇರಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಉಮಾದೇವಿ, ಧಾರವಾಡ ಯುವ ಘಟಕದ ಅಧ್ಯಕ್ಷ ಮಲ್ಲಪ್ಪ ಮಾರಡಗಿ, ಸಹ ಸದಸ್ಯ ಬಸವರಾಜ್ ಹೆಬ್ಬಳ್ಳಿ, ರಾಜ್ಯ ಸಹ ನಿರ್ದೇಶಕ ಮಹಾಂತೇಶ್ ಕೊಡಲಿ, ಈರಣ್ಣ ಅಂಗಡಿ, ಉಳುವಪ್ಪ, ಹೊನ್ನಣ್ಣನವರ್, ಮಲ್ಲಿಕಾ ಪಾಟೀಲ್, ಭರಮಗೌಡ ಪಾಟೀಲ್, ಹಂಜಪ್ಪ ಲಮಾಣಿ, ಹಾಲಸ್ವಾಮಿ, ಆರಾಧ್ಯಮಠ್, ಗುರುಪ್ರಸಾದ್, ಯೋಗೀಶ್ವರ್ ಸಹಿತ ವಿವಿಧ ಗ್ರಾಮದ ರೈತರು ಹಾಜರಿದ್ದರು.
ಇತ್ತೀಚೆಗೆ ನಿಧನರಾದ ಭಾರತ್ ಕೃಷಿಕ್ ಸಮಾಜದ ಜಿಲ್ಲಾಧ್ಯಕ್ಷ ನಂದಿಹಳ್ಳಿ ನಾಗನಗೌಡ ಪಾಟೀಲರ ಸ್ಮರಣಾರ್ಥ ಸಭೆಯಲ್ಲಿ ಮೌನಾಚರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಮಂಜಣ್ಣ ಗಾಮ ಪ್ರಾರ್ಥಿಸಿ, ವೈಭವ ಶಿವಣ್ಣ ಸ್ವಾಗತಿಸಿದರು. ಬೇಗೂರು ಸಿದ್ದೇಶ್ ನಿರೂಪಿಸಿ, ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

