ಶಿವಮೊಗ್ಗ

ಪಕ್ಷದಲ್ಲಿ ಕುಮಾರ್ ಉಳೀತಾರೆ: ಡಿಸಿಸಿ

Published On :

ಶಿವಮೊಗ್ಗ: ಕುಮಾರ್ ಬಂಗಾರಪ್ಪನವರು ಪಕ್ಷದಲ್ಲಿ ಉಳಿಯುತ್ತಾರೆ. ಅವರು ಪಕ್ಷದ ಅಧಿಕೃತ ಅಭ್ಯರ್ಥಿಯನ್ನೇ ಬೆಂಬಲಿಸುತ್ತಾರೆ ಎಂಬ ವಿಶ್ವಾಸ ತಮಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರ್ ಬಂಗಾರಪ್ಪನವರು ಶನಿವಾರ ತಮ್ಮ ಭಾವನೆಯನ್ನು ಹೊರಗೆ ಹಾಕಿದ್ದಾರೆ. ಈ ಮಧ್ಯೆ ತಾವು ಅವರ ಮನೆಗೆ ಹೋಗಿ ಮಾತುಕತೆ ನಡೆಸಿದ್ದು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಕರ್ತವ್ಯ ಮಾಡಿದ್ದೇನೆ ಎಂದರು.
ನಮ್ಮ ಅವರ ಮಾತುಕತೆ ವೇಳೆ, ಅವರು ಸಕಾರಾತ್ಮಕವಾಗಿ ಉತ್ತರ ಕೊಟ್ಟಿದ್ದಾರೆ, ನಾನು ಪಕ್ಷ ಬಿಡುವ ಕೆಲಸ ಮಾಡುವುದಿಲ್ಲ, ಪಕ್ಷದ ಜೊತೆಗಿರುತ್ತೇನೆ, ಪಕ್ಷದ ಹಿತ ಕಾಪಾಡುವ ತೀರ್ಮಾನ ಕೈಗೊಳ್ಳುತ್ತೇನೆಂದು ಹೇಳಿದ್ದಾರೆಂದು ವಿವರಿಸಿದರು.
ಕಮಾಂಡ್ ತೀರ್ಮಾನ: ನಿಮಗೆ ಅಸಮಾಧಾನವಿದ್ದರೆ ಹೈ ಕಮಾಂಡ್‌ನಲ್ಲಿ ತೀರ್ಮಾನ ಮಾಡೋಣ, ನೀವು ನಾಯಕರು, ಪಕ್ಷದಲ್ಲೇ ಇರಬೇಕು ಎಂದು ಹೇಳಿದ್ದು, ಅವರ ಆತ್ಮೀಯರು ಅದೇ ಸಲಹೆ ಕೊಟ್ಟಿದ್ದಾರೆ ಎಂದ ಅವರು, ಈ ಲೋಕಸಭಾ ಚುನಾವಣೆಯೇ ಅಂತಿಮವಲ್ಲ. ಬೇರೆ ಬೇರೆ ವ್ಯವಸ್ಥೆಗಳಿವೆ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದಾಗಿ ತಿಳಿಸಿದರು.
ಹಾಗೆಯೇ, ಮಾತುಕತೆ ವೇಳೆ ಅವರು ಎಂದೂ ಸಹ ಪಕ್ಷ ಬಿಡುತ್ತೇನೆಂದು ಹೇಳಿಲ್ಲ. ಹಾಗೆಯೇ ಪಕ್ಷದಲ್ಲೇ ಉಳಿಯುತ್ತಾರೆಂಬ ನಂಬಿಕೆಯೂ ನಮಗಿದೆ. ಚುನಾವಣೆಯಲ್ಲಿ ಸಕ್ರಿಯವಾಗಿ ಅವರು ತೊಡಗಿಸಿಕೊಂಡು ಕಾರ್ಯಕರ್ತರನ್ನು ಹುರಿದುಂಬಿಸಿ ಅಧಿಕೃತ ಅಭ್ಯರ್ಥಿ ಪರವಾಗಿ ಕೆಲಸ ಮಾಡುತ್ತಾರೆಂಬ ವಿಶ್ವಾಸವಿದೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.