ವಿದ್ಯಾಭ್ಯಾಸದೊಂದಿಗೆ ವಿಶೇಷ ತರಬೇತಿ ಅಗತ್ಯ
ಸಾಗರ: ವಿದ್ಯಾರ್ಥಿಗಳು ವಾಣಿಜ್ಯಶಾಸ್ತ್ರದ ಎಲ್ಲಾ ಸೂತ್ರ, ತರ್ಕ, ಜಿಜ್ಞಾಸ್ಥೆಗಳನ್ನು ತಮ್ಮ ಪಠ್ಯದಲ್ಲಿ ಪಡೆಯುತ್ತಾರಾದರೂ ವಿಜ್ಞಾನ ವಿಷಯದ ಲ್ಯಾಬ್ ಅನುಭವದಂತೆ ವ್ಯಾಪಾರ ಜಗತ್ತಿನ ಪ್ರತ್ಯಕ್ಷ ಅನುಭವ ಬೇರೆಯದೇ ವಾಸ್ತವವನ್ನು ತಿಳಿಸಬಲ್ಲದು ಎಂದು ಎಲ್.ಬಿ. ಎಂಡ್ ಎಸ್.ಬಿ.ಎಸ್. ಕಾಲೇಜಿನ ಪ್ರಾಚಾರ್ಯ ಪ್ರೊ. ಬಿ.ಸಿ. ಶಶಿಧರ್ ಹೇಳಿದರು.
ಇಲ್ಲಿನ ಇಂದಿರಾಗಾಂಧಿ ಸರ್ಕಾರಿ ಮಹಿಳಾ ಕಾಲೇಜಿನ ವಾಣಿಜ್ಯ ವಿಭಾಗ ಶನಿವಾರ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ವ್ಯಾಪಾರ ಕೌಶಲ್ಯ ಮೇಳ ಉದ್ಘಾಟಿಸಿ, ವಿದ್ಯಾಭ್ಯಾಸದ ಜೊತೆ ಸಿಗುವ ಇಂತಹ ತರಬೇತಿ ಭವಿಷ್ಯದ ಉದ್ಯಮ ನಿರ್ವಹಣೆ ಕಾಲದಲ್ಲಿ ವೈಫಲ್ಯದ ಅಪಾಯ ಕಡಮೆ ಮಾಡುತ್ತದೆ ಎಂದು ಅಭಿಪ್ರಾಯಪಟ್ಟರು.
ಸಮೃದ್ಧ ಅನುಭವ: ಹಿಂದಿನವರಲ್ಲಿ ಬಹುಜನ ಯಾವುದೇ ಪಠ್ಯ ಓದಿ ವ್ಯಾಪಾರಕ್ಕೆ ಇಳಿಯುತ್ತಿರಲಿಲ್ಲ. ಅನುಭವವೇ ಸಮೃದ್ಧ ಪಾಠ ಎಂಬ ನೀತಿ ಆ ದಿನಗಳಲ್ಲಿ ಜಾರಿಯಲ್ಲಿತ್ತು. ಒಂದು ವಸ್ತುವಿನ ಮಾರ್ಕೆಟಿಂಗ್‌ನಲ್ಲಿ ಇಂದು ನವನವೀನ ಮಾದರಿಗಳನ್ನು ಬಳಸಲಾಗುತ್ತಿದ್ದರೂ, ಹಿಂದಿನ ದಿನಗಳ ಜಾಣ್ಮೆ ಈಗಲೂ ಪ್ರಸ್ತುತ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಅಶೋಕ್ ಡಿ. ರೇವಣಕರ್ ಮಾತನಾಡಿ, ಬೋಳು ತಲೆಯವನಿಗೆ ಬಾಚಣಿಗೆ ಮಾರುವುದು ವ್ಯಾಪಾರಿ ಯಶಸ್ಸನ್ನು ಸೂಚಿಸುವಂತದು. ಇಂದಿನ ಸ್ಮರ್ಧಾತ್ಮಕ ಪ್ರಪಂಚದಲ್ಲಿ ಲಭ್ಯ ಅವಕಾಶಗಳನ್ನು ಬಾಚಿಕೊಳ್ಳುವ ನಿಟ್ಟಿನಲ್ಲಿ ಕೌಶಲ್ಯ ಮೇಳ ವಿದ್ಯಾರ್ಥಿನಿಯರಿಗೆ ಸಹಾಯ ಮಾಡಬಲ್ಲದು. ಮುಂದಿನ ದಿನಗಳಲ್ಲಿ ಅಂತರ್ ಕಾಲೇಜು ವ್ಯಾಪಾರ ಕೌಶಲ್ಯ ಮೇಳ ಆಯೋಜಿಸುವ ಕುರಿತು ಚಿಂತನೆ ನಡೆದಿದೆ ಎಂದರು. ವಾಣಿಜ್ಯ ವಿಭಾಗದ ಮುಖ್ಯಸ್ಥ ಕೆ. ರಾಜಾರಾಂ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಧುರಾ ಸ್ವಾಗತಿಸಿದರು. ಶಮೀಲಾ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

