ಶಿವಮೊಗ್ಗ

ಅಭಿವೃದ್ಧಿ ಶೂನ್ಯವೇ ರಾಜ್ಯ ಸರ್ಕಾರದ ಸಾಧನೆ

Published On :

ಹೊಸನಗರ: ಸಮಗ್ರ ಹಾಗು ಸಮರ್ಪಕ ಆಡಳಿತ ನೀಡುವಲ್ಲಿ ವಿಫಲವಾದ ರಾಜ್ಯ ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಶೂನ್ಯವೇ ದೊಡ್ಡ ಸಾಧನೆ ಎಂದು ಆರೋಪಿಸಿದ ಮಾಜಿ ಮುಖ್ಯಮಂತ್ರಿ ಶಿವಮೊಗ್ಗ ಲೋಕಸಭಾ ಬಿಜೆಪಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
 ತಾಲೂಕಿನ ಬಟ್ಟೆಮಲ್ಲಪ್ಪದಲ್ಲಿ ಹಮ್ಮಿಕೊಂಡಿದ್ದ ಭಾರತ ಗೆಲ್ಲಿಸಿ ಕಾರ್ಯಕ್ರಮ ಉದ್ಘಾಟಿಸಿ, ಸಾಧನೆ ಮಾತಾಗಬೇಕು ಹೊರತು ಮಾತೇ ಸಾಧನೆಯಂತಾಗಬಾರದು ಆದರೆ ರಾಜ್ಯದ ಈಗಿನ ಪ್ರಗತಿಯ ಅಂಕಿ ಅಂಶ ನೋಡಿದಾಗ ಮಾತೇ ಬಂಡವಾಳ ಎಂಬ ಸ್ಥಿತಿ ನಿರ್ಮಾಣಗೊಂಡಿದೆ ಎಂದರು ಆರೋಪಿಸಿದರು.
 ನನ್ನ ಆಡಳಿತದ ಅವಧಿಯಲ್ಲಿ ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣೆ ಎಂಬಂತೆ ತಾರತಮ್ಯ ಎಸಗದೆ ಸಾಮಾಜಿಕ ನ್ಯಾಯದ ಅಡಿಯಲ್ಲಿ ಸರ್ವರಿಗೂ ಸಮಪಾಲು, ಸರ್ವರಿಗೂ ಸಮ ಬಾಳು ರೀತಿಯಲ್ಲಿ ಹಲವು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಲ್ಲದೆ ಅಭಿವೃದ್ಧಿ ಅನುಷ್‌ಠಾನಗೊಳಿಸಲಾಗಿದೆ. ಆದರೆ ರಾಜ್ಯ ಸರ್ಕಾರ ಜಾತಿ ಧರ್ಮದ ಆಧಾರದಲ್ಲಿ ಸಮಾಜದಲ್ಲಿ ಕಂದಕ ಮೂಡಿಸುವ ಯತ್ನ ಮಾಡಿದೆ ಎಂದು ಟೀಕಿಸಿದರು.
ಸಚಿವ ಸ್ಥಾನ ಬಯಸಿ ಬಂದಿಲ್ಲ:
ಕೇಂದ್ರದಲ್ಲಿ 2020ಕ್ಕೆ ಭಾರತವನ್ನು ಸೂಪರ್ಪ್‌ವರ್ದೇಶವನ್ನಾಗಿ ಮಾಡುವ ಕನಸು ಹೊಂದಿರುವ ನರೇಂದ್ರ ಮೋದಿಯನ್ನು ಪ್ರಧಾನಿಯನ್ನಾಗಿ ಮಾಡಬೇಕು ಎಂಬ ಏಕೈಕ ಉದ್ದೇಶಹೊಂದಿ, ನರೇಂದ್ರ ಮೋದಿಗೆ ಕೇಂದ್ರದಲ್ಲಿ ಸಾಥ್ ನೀಡಬೇಕು ಎಂಬ ಕಾರಣದಿಂದ ಲೋಕಸಭೆಗೆ ಸ್ಪರ್ಧಿಸಿದ್ದೇನೆ ಹೊರತು ಕೇಂದ್ರದಲ್ಲಿ ಸಚಿವನಾಗುತ್ತೇನೆ ಎಂಬ ಕಾರಣಕ್ಕಾಗಿ ಅಲ್ಲ ಎಂದು ಬಿಎಸ್‌ವೈ ಸ್ಪಷ್ಟಪಡಿಸಿದರು.
 ತಾವು ಅಧಿಕಾರದಲ್ಲಿದ್ದಾಗ ಮಾಡಿದ ಸಾಧನೆ ಪರಿಗಣಿಸಿ ಮತ್ತು ನನ್ನ ಅಧಿಕಾರದವಧಿಯಲ್ಲಿ ಯಾವುದಾದರೂ ಒಂದು ಯೋಜನೆ ಉಪಯೋಗ ನಿಮಗೆ ಆಗಿದ್ದಲ್ಲಿ ನನಗೆ ಆಶೀರ್ವದಿಸಿ ಎಂದು ಮನವಿ ಮಾಡಿದರು.
 ಶಾಸಕ ಸಿದ್ರಾಮಣ್ಣ, ಮಾಜಿ ಸಚಿವ ಹರತಾಳು ಹಾಲಪ್ಪ, ಪ್ರಮುಖರಾದ ಟಿ.ಡಿ.ಮೇಘರಾಜ್, ಎನ್.ಆರ್.ದೇವಾನಂದ್, ಕೆ.ವಿ.ಕೃಷ್ಣಮೂರ್ತಿ, ಬಿ.ಯುವರಾಜ್, ಶುಭಾ ಕೃಷ್ಣಮೂರ್ತಿ, ನಾಗರತ್ನ ದೇವರಾಜ್, ನಿರ್ಮಲಾ ಗಣೇಶ, ಶಾಂತಾ ಶೇಖರಪ್ಪ, ಹರತಾಳು ಶಿವಕುಮಾರ್, ಎಂ.ಎನ್.ಸುಧಾಕರ್, ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.