'ಜನಪದ ಸಾಹಿತ್ಯದಲ್ಲಿ ಹೆಣ್ಣು' ವಿಚಾರ ಸಂಕಿರಣ
ಶಿವಮೊಗ್ಗ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನೇತೃತ್ವದಲ್ಲಿ ಮಾ.28ರಂದು ಶುಕ್ರವಾರ ಬೆಳಗ್ಗೆ 10ಕ್ಕೆ ಎಸ್.ಆರ್. ನಾಗಪ್ಪಶೆಟ್ಟಿ ನ್ಯಾಷನಲ್ ಕಾಲೇಜಿನಲ್ಲಿ ಶ್ರೀಮತಿ ಮಧುರಾ ಅಶೋಕಕುಮಾರ್ ದತ್ತಿ ಅಂಗವಾಗಿ “d«Ú®Ú¥Ú ಸಾಹಿತ್ಯದಲ್ಲಿ Ôæyß|’ ವಿಚಾರವಾಗಿ ಮತ್ತು ಸೊರಬದ ಸೌರಭ ಗಿಫ್ಟ್ ದತ್ತಿ ಅಂಗವಾಗಿ “OÚ«ÚsÚ ನಾಡಿಗೆ ಕಲಾವಿದರ OÚæàsÚßVæ’ ವಿಚಾರವಾಗಿ ದತ್ತಿ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಕಾಲೇಜಿನ ಪ್ರಾಚಾರ್ಯ ಪ್ರೊ. ಆರ್.ಕೆ. ಬಾಳಿಗಾ ಉದ್ಘಾಟಿಸಲಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಿ. ಮಂಜುನಾಥ ಅಧ್ಯಕ್ಷತೆ ವಹಿಸಲಿದ್ದಾರೆ. ದತ್ತಿ ಉಪನ್ಯಾಸಕರಾಗಿ ಸಹ್ಯಾದ್ರಿ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ. ಮೋಹನ ಚಂದ್ರಗುತ್ತಿ ಮತ್ತು ನರಸಿಂಹರಾಜಪುರದ ಸರ್ಕಾರಿ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ. ಅಣ್ಣಪ್ಪ ಎಸ್. ಮಳೀಮಠ ಅವರು ಭಾಗವಹಿಸಲಿದ್ದಾರೆ. ದತ್ತಿ ದಾನಿಗಳ ಪರವಾಗಿ ಶ್ರೀಮತಿ ಮಧುರಾ ಅವರು ಮತ್ತು ಶಿವಾನಂದ ಬೀಳಿಗಿ ಅವರು ಭಾಗವಹಿಸಲಿದ್ದಾರೆ.
ಮಾ.29ರಂದು ಶನಿವಾರ ಬೆಳಗ್ಗೆ 11ಕ್ಕೆ ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ ಶ್ರೀಮತಿ ಹಾಲಮ್ಮ ಕೋ ದಿ. ಕೋರಿ ರುದ್ರಪ್ಪ ದತ್ತಿ ಅಂಗವಾಗಿ “ÈÚ^Ú«Ú ಸಾಹಿತ್ಯದಲ್ಲಿ ಸ್ತ್ರೀ ÑÚMÈæÞ¥Ú«æ’ ವಿಚಾರವಾಗಿ ಮತ್ತು ಶ್ರೀಮತಿ ಆಯೆಶಾಬಿಯಾನೆ ಖಾಸಿಂಬಿ ಅಬ್ಬಲಗೆರೆ ದತ್ತಿ ಅಂಗವಾಗಿ “ÑÚM}Ú ಶಿಶುನಾಳ ಷರೀಪರ ಸಮನ್ವಯ _M}Ú«æ’ ವಿಚಾರವಾಗಿ ಉಪನ್ಯಾಸ ಏರ್ಪಡಿಸಲಾಗಿದೆ.
ರಾಷ್ಟ್ರೀಯ ಶಿಕ್ಷಣ ಸಮಿತಿ ಕೋಶಾಧ್ಯಕ್ಷ ಟಿ.ಆರ್. ಅಶ್ವತ್ಥನಾರಾಯಣ ಅವರು ಉದ್ಘಾಟಿಸಲಿದ್ದಾರೆ. ಜಿಲ್ಲಾ ಕಸಾಪ ಅಧ್ಯಕ್ಷರಾದ ಡಿ. ಮಂಜುನಾಥ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಸಾಹಿತಿ ಪ್ರೊ. ಎಂ.ಬಿ. ನಟರಾಜ್ ಮತ್ತು ಭದ್ರಾವತಿಯ ಶ್ರೀ ಆದಿಚುಂಚನಗಿರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಡಾ. ಹರಿಣಾಕ್ಷಿ ಅವರು ಉಪನ್ಯಾಸ ನೀಡಲಿದ್ದಾರೆ. ಪ್ರಾಚಾರ್ಯರಾದ ಡಾ. ಗೋಪಾಲಕೃಷ್ಣ ಕೊಳ್ತಾಯ, ದತ್ತಿದಾನಿಗಳಾದ ಕೆ.ವಿ. ಸೌಮ್ಯ, ಕೆ.ಆರ್. ವೀರಣ್ಣ, ನೂರ್ ಸಮದ್ ಅಬ್ಬಲಗೆರೆ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಢಿ
ಮಾ. 29ರಂದು ಶನಿವಾರ ಮಧ್ಯಾಹ್ನ 12.30ಕ್ಕೆ ನಗರದ ಆರ್.ಎಂ.ಎಲ್. ನಗರದಲ್ಲಿರುವ ಅಲ್. ಮಹಮೂದ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ದಿ. ಬೆಣ್ಣೇಗೆರೆ ಬಸವನಗೌಡ ಕಡ್ಲೇಗೌಡ್ರು ದತ್ತಿ ಅಂಗವಾಗಿ ಮತ್ತು ಸೊರಬದ ಚಿಕ್ಕವಲಿ ನಾಗರಾಜಗೌಡ್ರು ದತ್ತಿ ಅಂಗವಾಗಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಿ. ಮಂಜುನಾಥ ಉದ್ಘಾಟಿಸಲಿದ್ದಾರೆ, ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಎಂ. ಕುಬೇಂದ್ರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ದತ್ತಿ ಉಪನ್ಯಾಸ ನೀಡಲು ಸಾಹಿತಿಗಳು, ಗಂಗಾವತಿ ಕೃಷಿ ಉತ್ಪನ್ನ ಮಾರಾಟ ಮಂಡಳಿಯ ಕಾರ್ಯದರ್ಶಿಗಳಾದ ಡಾ. ಶರಶ್ಚಂದ್ರ ರಾನಡೆ ಅವರು ಮತ್ತು ಜಾನಪದ ವಿದ್ವಾಂಸ ಡಾ. ಬಸವರಾಜ ನೆಲ್ಲಿಸರ ಅವರು ಉಪನ್ಯಾಸ ನೀಡಲಿದ್ದಾರೆ. ಶಿವಮೊಗ್ಗ ಎ.ಪಿ.ಎಂ.ಸಿ. ಕಾರ್ಯದರ್ಶಿ ಸಿ. ಪಾತಲಿಂಗಪ್ಪ ಮತ್ತು ಚಿಕ್ಕವಾಲಿ ನಾಗರಾಜಗೌಡ ಭಾಗವಹಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

