ಅರಣ್ಯ ಭೂಮಿ ಕಾಯ್ದೆ ತಿದ್ದುಪಡಿಗೆ ಪ್ರಯತ್ನ
ಕ.ಪ್ರ.ವಾರ್ತೆ, ಶಿಕಾರಿಪುರ, ಮಾ.27
ಅವೈಜ್ಞಾನಿಕವಾಗಿರುವ ಅರಣ್ಯ ಭೂಮಿ ಕಾಯ್ದೆಯನ್ನು ತಿದ್ದುಪಡಿಗೊಳಿಸಿ ಸಾಗುವಳಿದಾರ ರೈತರಿಗೆ ನ್ಯಾಯ ದೊರಕಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಬಿಜೆಪಿ ಲೋಕಸಭಾ ಅಭ್ಯರ್ಥಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದರು.
ತಾಲೂಕಿನ ಬೇಗೂರು, ಕಾಗಿನಲ್ಲಿ, ಅರಳೀಹಳ್ಳಿ, ಜಕ್ಕಿನಕೊಪ್ಪ ಮತ್ತಿತರ ಕಡೆಗಳಲ್ಲಿ ಗುರುವಾರ ಬಿರುಸಿನ ಚುನಾವಣಾ ಪ್ರಚಾರ ಸಭೆಗಳಲ್ಲಿ ಮಾತನಾಡಿ, ತಾಲೂಕಿನ ಹೊಸೂರು ಹೋಬಳಿಯ ಜನತೆ ರಾಜಕೀಯವಾಗಿ ಎಲ್ಲಾ ರೀತಿಯಲ್ಲಿ ಸಹಕಾರ ಬೆಂಬಲ ನೀಡುತ್ತಾ ಬಂದಿದ್ದು, ಈ ದಿಸೆಯಲ್ಲಿ ಮುಖ್ಯಮಂತ್ರಿಯಾಗಿ ದೊರೆತ ಅವಕಾಶದಲ್ಲಿ ಗ್ರಾಮದ ಜನತೆ ಅಪೇಕ್ಷೆ
ಪಟ್ಟ ರೀತಿಯಲ್ಲಿ ಗ್ರಾಮದ ಸಂಪೂರ್ಣ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದ್ದೇನೆ ಎಂದ ಅವರು, ನೀರಾವರಿ, ಉಚಿತ ವಿದ್ಯುತ್, ದೇಶದಲ್ಲಿಯೇ ಪ್ರಥಮ ಬಾರಿಗೆ 3 ಲಕ್ಷದವರೆಗೆ ಬಡ್ಡಿರಹಿತ ಸಾಲ ವ್ಯವಸ್ಥೆ, 25 ಸಾವಿರವರೆಗಿನ ಸಾಲವನ್ನು 2 ಬಾರಿ ಮನ್ನಾ, ಭಾಗ್ಯಲಕ್ಷ್ಮಿ ಯೋಜನೆ, ಕಾನ್ವೆಂಟ್ ಶಿಕ್ಷಣಕ್ಕೆ ಸರಿಸಮಾನವಾಗಿ ಬಡ ವಿದ್ಯಾರ್ಥಿ, ರೈತರ ಮಕ್ಕಳಿಗೆ ಅನುಕೂಲ ಕಲ್ಪಿಸುವ ದಿಸೆಯಲ್ಲಿ ತಲಾ 5- 6 ಕೋಟಿ ವೆಚ್ಚದ ಮೊರಾರ್ಜಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ತಾಲೂಕಿನಲ್ಲಿ ಆರಂಭಿಸಲಾಗಿದೆ ಎಂದರು.
ಸಂಸದ ರಾಘವೇಂದ್ರ ಮಾತನಾಡಿ, ಯಡಿಯೂರಪ್ಪ ಅವರು ಅಧಿಕಾರಾವಧಿಯಲ್ಲಿ ರಾಜ್ಯದ 1.5 ಕೋಟಿ ಜನತೆಗೆ ನೇರವಾಗಿ ಸರ್ಕಾರದ ಯೋಜನೆ ತಲುಪುವ ಯೋಜನೆ ಜಾರಿಗೊಳಿಸಿದ್ದು, ತಾಲೂಕಿನ ಸಂಡ ಗ್ರಾಮದಲ್ಲಿ ಪಶು ಆಹಾರ ಘಟಕದ ಆರಂಭದಿಂದ ಮೆಕ್ಕೆಜೋಳಕ್ಕೆ ವೈಜ್ಞಾನಿಕ ಬೆಲೆ ದೊರೆಯಲಿದೆ ಎಂದರು.
ಆರಂಭದಲ್ಲಿ ಯಡಿಯೂರಪ್ಪನವರು ಕ್ಷೇತ್ರದ ಅಧಿದೇವತೆ ಹುಚ್ಚೂರಾಯಸ್ವಾಮಿ ದೇವಾಲಯ ಹಾಗೂ ರಾಘವೇಂದ್ರ ಸ್ವಾಮಿ ಮಠಕ್ಕೆ ತೆರಳಿ ಪೂಜೆ, ಪ್ರಾರ್ಥನೆ ಸಲ್ಲಿಸಿದರು.
ವಿವಿಧ ಪಕ್ಷದ ಮುಖಂಡರು ಪಕ್ಷಕ್ಕೆ ಸೇರ್ಪಡೆಗೊಂಡರು. ಪ್ರತಿ ಗ್ರಾಮದಲ್ಲಿ ಮಹಿಳೆಯರು ಆರತಿ ಮೂಲಕ ಯಡಿಯೂರಪ್ಪ ಅವರನ್ನು ಸ್ವಾಗತಿಸಿ ಶುಭ ಕೋರಿದರು.
ತಾಪಂ ಅಧ್ಯಕ್ಷೆ ಲೀಲಾವತಿ, ಮುಖಂಡ ಗುರುಮೂರ್ತಿ, ವಸಂತಗೌಡ, ಮೋಹನ್, ಪ್ರೇಮಕುಮಾರ್‌ಗೌಡ, ಹಾಲಪ್ಪ, ನಾಗರಾಜಪ್ಪ, ಸಕಲೇಶ್,ಪ್ರವೀಣಶೆಟ್ಟಿ, ಒಂಕಾರಿ, ಸಂಗಮೇಶ್, ಜಯಾನಾಯ್ಕ, ಗಜೇಂದ್ರನಾಯ್ಕ್ ಮತ್ತಿತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

