ಶಿವಮೊಗ್ಗ

ಕಳವಾಗಿದ್ದ ಆಭರಣ ಮಾಲೀಕರಿಗೆ ವಾಪಸ್

Published On :

ಭದ್ರಾವತಿ: ಬಂಧಿತ ಆರೋಪಿಗಳಿಂದ ವಶಪಡಿಸಿಕೊಂಡ ಕಳವು ಮಾಲುಗಳನ್ನು ಪೊಲೀಸರು ಮೂಲ ಮಾಲೀಕರಿಗೆ ಹಿಂದಿರುಗಿಸಿದ್ದಾರೆ.
ಕಳೆದ ವರ್ಷ ವರಮಹಾಲಕ್ಷ್ಮಿ ಹಬ್ಬದಂದು ಶ್ರೀಸತ್ಯಸಾಯಿ ಶಾಲೆಯ ಶಿಕ್ಷಕಿ ಟಿ.ವಿ. ಸುಜಾತಾ ಶಂಕ್ರಪ್ಪ ಅವರಿಗೆ ಸೇರಿದ ಸುಮಾರು 2.75 ಲಕ್ಷ ಮೌಲ್ಯದ ಚಿನ್ನದ ಆಭರಣವು ಶಾಲೆಯ ಮುಂಭಾಗದಲ್ಲಿ ಕಳುವಾಗಿತ್ತು. ಇತ್ತೀಚೆಗೆ ಅಪರಾಧಿಗಳನ್ನು ಬಂಧಿಸಿದಾಗ ಅನೇಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಅದರಲ್ಲಿ ಸುಜಾತ ಶಂಕರಪ್ಪ ಅವರ 20 ಗ್ರಾಂ ಒಂದು ಎಳೆ ಸರ ಹಾಗೂ 90 ಗ್ರಾಂ ಮಾಂಗಲ್ಯ ಸರ ಕಳುವಾಗಿತ್ತು.
ಈ ವಸ್ತುಗಳನ್ನು ಭದ್ರಾವತಿ ಸರ್ಕಲ್ ಇನ್‌ಸ್ಪೆಕ್ಟರ್ ಜೆ.ಜೆ. ತಿರುಮಲೇಶ್ ಕಚೇರಿಯಲ್ಲಿ ಮಾಲೀಕರಿಗೆ ಹಿಂದಿರುಗಿಸಿದರು. ಈ ಚಿನ್ನ ಮತ್ತು ಬೆಳ್ಳಿ ಪರೀಕ್ಷಕರ ಸಂಘದ ಅಧ್ಯಕ್ಷ ಶೇಷಾದ್ರಿ ಪಾವಸ್ಕಾರ, ಶಿಕ್ಷಕರು ಹಾಗೂ ಸಾಕ್ಷಿದಾರರಾದ ಯೋಗೇಶ್ವರಪ್ಪ ಮತ್ತು ರಾಮು, ಮಹಿಳಾ ಪೊಲೀಸ್ ಪೇದೆ ಅನ್ನಪೂರ್ಣ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.