ಸರ್ವೀಸ್ ಸೆಂಟರಲ್ಲಿ ಶಾರ್ಟ್ ಸರ್ಕೀಟ್: ಕಾರು ಭಸ್ಮ
ಸೊರಬ: ಪಟ್ಟಣದ ಸಾಗರ ರಸ್ತೆಯಲ್ಲಿರುವ ಮಾರುತಿ ಸರ್ವೀಸ್ ಸೆಂಟರ್‌ನಲ್ಲಿ ಮಾರುತಿ ಓಮ್ನಿ ರಿಪೇರಿ ವೇಳೆ ವಯರ್ ಶಾರ್ಟ್ ಸರ್ಕೀಟ್ ಆಗಿ ಕಾರು ಸಂಪೂರ್ಣ ಸುಟ್ಟು ಕರಕಲಾದ ಘಟನೆ ಗುರುವಾರ ನಡೆದಿದೆ.
ಗುರುವಾರ ಬೆಳಗ್ಗೆ ನಾಗರಾಜ ಮಾಲೀಕತ್ವದ ಮಾರುತಿ ಸರ್ವೀಸ್ ಸೆಂಟರ್‌ನಲ್ಲಿ ಪ್ರಶಾಂತ್‌ಗೌಡ ಎಂಬುವವರು ತಮ್ಮ ಮಾರುತಿ ಓಮ್ನಿ ರಿಪೇರಿ ಮಾಡುವ ಸಂದರ್ಭದಲ್ಲಿ ಪರಸ್ಪರ ವೈರ್‌ಗಳನ್ನು ಕೂಡಿಸುವಾಗ ಬೆಂಕಿ ಹೊತ್ತಿ, ಪೆಟ್ರೋಲ್ ಟ್ಯಾಂಕಿಗೆ ಆವರಿಸಿ ಓಮ್ನಿ ಸುಟ್ಟು ಕರಕಲಾಗಿದೆ. ಈ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಪ್ರಶಾಂತ್‌ಗೌಡ ಅವರ ಕಾಲಿಗೆ ಪೆಟ್ಟಾಗಿದ್ದೂ ಅಲ್ಲದೇ ಬಿಡಿ ಭಾಗಗಳು ಸಿಡಿದು ಸುಮಾರು 50 ಅಡಿ ಎತ್ತರದಲ್ಲಿರುವ ಒಣಗಿದ ಮರದ ತುದಿಗೆ ಬೆಂಕಿ ಕಿಡಿ ಸಿಡಿದ ಪರಿಣಾಮ ಮರಕ್ಕೂ ಬೆಂಕಿ ತಗುಲಿತ್ತು.
ನಂತರ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಕಾರ್ಯ ಪ್ರವೃತ್ತರಾಗಿ ಬೆಂಕಿ ನಂದಿಸಿ, ಹೆಚ್ಚಿನ ಅನಾಹುತವನ್ನು ತಪ್ಪಿಸಿದರು.
ಡಿಕ್ಕಿ: ವ್ಯಕ್ತಿ ಸಾವು
ಸಾಗರ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಬರುವ ಜೋಗ ರಸ್ತೆಯ ಎಲ್.ಬಿ. ಕಾಲೇಜು ಸಮೀಪದ ಮಹಿಳಾ ಹಾಸ್ಟೆಲ್ ಎದುರು ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಹಕ್ರೆ ವಾಸಿ ನಾರಾಯಣಪ್ಪ (65) ಎಂಬುವವರು ಸ್ಥಳದಲ್ಲಿಯೆ ಮೃತಪಟ್ಟ ಘಟನೆ ಬುಧವಾರ ರಾತ್ರಿ ನಡೆದಿದೆ.
ಇವರು ಸಾಗರದಿಂದ ತಮ್ಮ ಊರಿಗೆ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಬಂದ ಟಾಟಾ ಲಗೇಜ್ ಪಿಕಪ್ ವಾಹನ ಡಿಕ್ಕಿ ಹೊಡೆದಿದೆ. ನಾರಾಯಣಪ್ಪ ಸ್ಥಳದಲ್ಲಿಯೇ ಮೃತಪಟ್ಟಿದ್ದು, ವಾಹನ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
--
ರಾಷ್ಟ್ರೀಯ ವಿಚಾರ ಸಂಕಿರಣ ಇಂದು
ಶಿವಮೊಗ್ಗ: ಕುವೆಂಪು ವಿವಿ ಹಾಗೂ ಕೆ.ಎಚ್. ಪಾಟೀಲ್ ಛೇರ್ ಇನ್ ಕೋ ಆಪರೇಟಿವ್ ಸಂಸ್ಥೆಯ ಅರ್ಥಶಾಸ್ತ್ರ ವಿಭಾಗದ ಸಂಯುಕ್ತಾಶ್ರಯದಲ್ಲಿ ಮಾ. 28ರಂದು ಬೆಳಗ್ಗೆ 10.30ಕ್ಕೆ ಕುವೆಂಪು ವಿವಿಯ ಪ್ರೊ. ಎಸ್.ಪಿ. ಹಿರೇಮಠ್ ಸಭಾಂಗಣದಲ್ಲಿ ಎಮರ್ಜಿಂಗ್ ಇಷ್ಯೂಸ್ ಇನ್ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಮತ್ತು ದಿವಂಗತ ಕೆ.ಎಚ್. ಪಾಟೀಲ್ ಅವರ 90ನೇ ಜನ್ಮ ದಿನಾಚರಣೆ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಾಗಾರ ಏರ್ಪಡಿಸಲಾಗಿದೆ. ಈ ಕಾರ್ಯಾಗಾರವನ್ನು ಮಾಪುಸಾ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಆಫ್ ಗೋವಾದ ಅಧ್ಯಕ್ಷ ರಮಾಕಾಂತ್ ಡಿ. ಕಲಾಪ್ ಅವರು ಉದ್ಘಾಟಿಸುವರು. ಕುವೆಂಪು ವಿವಿಯ ಕುಲಪತಿ ಪ್ರೊ. ಎಸ್.ಎ. ಬಾರಿ ಉಪಸ್ಥಿತರಿರುವರು.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

