ಬಹುಮತದಿಂದ ಗೆಲ್ಲಿಸಿ: ಯಡಿಯೂರಪ್ಪ ಮನವಿ
ಶಿರಾಳಕೊಪ್ಪ: ನಾನು ಯಾವುದೇ ಜಾತಿ ಜನಾಂಗದ ಮತ ಕೇಳಲ್ಲ. ಜೆಡಿಎಸ್, ಕಾಂಗ್ರೆಸ್ನಿಂದ ಚುನಾವಣೆಗೆ ಯಾರು ನಿಂತಿದ್ದಾರೆ ಎಂದು ನೋಡದೇ ರೈತರ ಋಣ ತೀರಿಸಲು ಹಾಗು ನೆಮ್ಮದಿ ಜೀವನ ನಡೆಸಲು ಕೇಂದ್ರದಲ್ಲಿ ನರೇಂದ್ರ ಮೋದಿ ನೇತ್ರತ್ವದ ಬಿಜೆಪಿ ಸರ್ಕಾರ ರಚಿಸಲು ಯಡಿಯೂರಪ್ಪ ಅವರಿಗೆ ಹಿಂದೆಂದಿಗಿಂತ ಹೆಚ್ಚಿನ ಮತಕೊಟ್ಟು ಗೆಲ್ಲಿಸಿ ಎಂದು ಮಾಜಿ ಮುಖ್ಯ ಮಂತ್ರಿ ಶಿವಮೊಗ್ಗ ಲೋಕಸಭಾ ಬಿಜೆಪಿ ಅಭ್ಯರ್ಥಿ ಯಡಿಯೂರಪ್ಪ ಮನವಿ ಮಾಡಿದರು.
ಶಿರಾಳಕೊಪ್ಪ ಭಾಗದ ತೊಗರ್ಸಿ ಮತ್ತು ಸುಣ್ಣದಕೊಪ್ಪ ಭಾಗದಲ್ಲಿ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಇಂದು ದೇಶ ಸಂಕಷ್ಟದಲ್ಲಿದೆ, ಅಕ್ಕಪಕ್ಕದ ದೇಶಗಳು ನಮ್ಮಮೇಲೆ ದಾಳಿ ಮಾಡಲು ಸಜ್ಜಾಗಿವೆ. ಸೈನಿಕರಿಗೆ ರಕ್ಷಣೆ ಇಲ್ಲ ಇಂತಹ ಸಂಧರ್ಬದಲ್ಲಿ ದೇಶದ ರಕ್ಷಣೆಗಾಗಿ ದೇಶಕಾಪಾಡಲು ಬಿಜೆಪಿಗೆ ಮತಹಾಕ ಬೇಕು ಎಂದರು.
ವಿದ್ಯುತ್ ಸಮಸ್ಯೆ: ಶಿಕಾರಿಪುರ ತಾಲ್ಲೂಕಿನಲ್ಲಿ ಶಾಸಕನಾಗುವ ಮೊದಲು ವಿದ್ಯುತ್ತ್ ಅವ್ಯವಸ್ಥೆಯಿತ್ತು ನಾನು ಈವರೆಗೆ 110ಕೆವಿಯ 8ಸ್ಥಾವರ ಮತ್ತು 220ಕೆವಿ ಸ್ಥಾವರಗಳನ್ನು ಸ್ಥಾಪಿಸಿ ತಾಲ್ಲೂಕಿನ ರೈತರು ನೆಮ್ಮದಿ ಇಂದ ಜೀವನ ನಡೆಸಲು ದಾರಿಮಾಡಿ ಕೊಡಲಾಗಿದೆ. ಕೇಂದ್ರ ಸರ್ಕಾರ ನಾನು ಅಧಿಕಾರದಲ್ಲಿ ಇದ್ದಾಗ ಕಲ್ಲಿದ್ದಲು ಕೊಟ್ಟಿದ್ದರೆ ಇನ್ನೂ 2ಸಾವಿರ ಮೆಗಾವ್ಯಾಟ ವಿದ್ಯುತ್ ಉತ್ಪಾದಿಸಿ ವಿದ್ಯುತ್ ಸಮಸ್ಯೆ ಕಡಿಮೆ ಆಗುವಂತೆ ಮಾಡಬಹುದಿತ್ತು ಎಂದರು.
ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಶಾಸಕ ಮಹಲಿಂಗಪ್ಪ, ಜಿ.ಪಂ. ಸದಸ್ಯರಾದ ಈಶ್ವರಪ್ಪ, ಬಂಗಾರ್ ನಾಯ್ಕ, ಅಗಡಿ ಅಶೋಕ, ಎಪಿಎಂಸಿ ಅಧ್ಯಕ್ಷ ಚಂದ್ರಶೇಖರಪ್ಪ,ರೇವಣಪ್ಪ, ಸಣ್ಣ ಹನುಮಂತಪ್ಪ ಕವಲಿ ಸುಭ್ರಮಣ್ಯ, ವಾಲ್ಮಿಕಿ ಸಮಾಜದ ಜಿಲ್ಲಾ ಅಧ್ಯಕ್ಷ ಶಿವಣ್ಣ ಹಲವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

