ಶಿವಮೊಗ್ಗ

ತಾವು ಮಂತ್ರಿಯ ಮಗನಲ್ಲ, ರೈತನ ಮಗ: ಭಂಡಾರಿ

Published On :

ಕ.ಪ್ರ.ವಾರ್ತೆ, ಭದ್ರಾವತಿ, ಮಾ.28
ಕಾಂಗ್ರೆಸ್‌ಗಾಗಿ ದುಡಿದು ಪಕ್ಷವನ್ನು ಅಭಿವೃದ್ಧಿಪಡಿಸಬೇಕೆಂಬುದೆ ತಮ್ಮ ಗುರಿಯಾಗಿದೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಭಂಡಾರಿ ತಿಳಿಸಿದರು.
ಪಟ್ಟಣದ ಪತ್ರಿಕಾ ಭವನದ ಸಭಾಂಗಣದಲ್ಲಿ ಗುರುವಾರ ಸಂಜೆ ನಡೆದ ಪಕ್ಷದ ಕಾರ್ಯಕರ್ತರ ಮತ್ತು ಸಾರ್ವಜನಿಕರ ಸಭೆಯನ್ನುದ್ದೇಶಿಸಿ ಮಾತನಾಡಿ, ರೈತನ ಮಗ: ಚುನಾವಣೆಯಲ್ಲಿ ಯಾರೆಲ್ಲಾ ಸ್ಪರ್ಧಿಸಿದ್ದಾರೆ ಎಂಬುದು ತಮಗೆ ಮುಖ್ಯವಲ್ಲ. ತಾವು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪ್ರಾಮಾಣಿಕವಾಗಿ ಮತದಾರರಲ್ಲಿ ಮತಯಾಚಿಸುತ್ತಿದ್ದೇನೆಂಬುದು ತಮಗೆ ಮುಖ್ಯ. ತಾವು ಚುನಾವಣೆ ನಡೆಸಲು ಯಾರಲ್ಲಿಯೂ ಹಣ ಕೇಳಿಲ್ಲ. ತಾವು ರೈತನ ಮಗನೇ ಹೊರತು ಮಂತ್ರಿಯ ಮಗನಲ್ಲವೆಂಬುದನ್ನು ಜನರು ಅರಿಯಬೇಕು. ಕಾಂಗ್ರೆಸ್ ಪಕ್ಷ ದೇಶಕ್ಕಾಗಿ ಹಾಗೂ ಬಡಜನತೆಗಾಗಿ ಏನೇನು ಮಾಡಿದೆ ಎಂಬುದು ದೇಶದ ಜನತೆಗೆ ಮತ್ತು ಕ್ಷೇತ್ರದ ಮತದಾರರಿಗೆ ತಿಳಿದಿದೆ. ಬಿಜೆಪಿ ಈ ದೇಶದಲ್ಲಿ ಕೋಮುಭಾವನೆ ಬಿತ್ತಿ ದೇಶವನ್ನು ಅಧೋಗತಿಗಿಳಿಸಿದೆ. ದೇಶದಲ್ಲಿ ಕಾಂಗ್ರೆಸ್ ಜಾತ್ಯತೀತ ಭಾವನೆ ಮತ್ತು ಸಮಗ್ರತೆಯನ್ನು ಎತ್ತಿ ಹಿಡಿದಿದೆ ಎಂದು ಹೇಳಿದರು.
ಎಐಸಿಸಿ ಸದಸ್ಯೆ ಬಲ್ಕಿಶ್‌ಬಾನು ಮಾತನಾಡಿ, ಪಕ್ಷವನ್ನು ಸದೃಢಗೊಳಿಸಲು ಭಂಡಾರಿ ಅವರು ಸತತ ಪ್ರಯತ್ನ ಮಾಡುತ್ತಿದ್ದಾರೆಂದರು. ಅವರು ಅತಿ ಹೆಚ್ಚು ಬಹುಮತದಿಂದ ಗೆಲ್ಲುವಂತೆ ಪಕ್ಷದ ಕಾರ್ಯಕರ್ತರು ಶ್ರಮಿಸಬೇಕೆಂದು ಕರೆ ನೀಡಿದ ಅವರು 16ನೇ ವಯಸ್ಸಿನಲ್ಲಿಯೇ ಯುವ ಕಾಂಗ್ರೆಸ್ ಸೇರಿದ ಭಂಡಾರಿ ಅವರು ಕಾಂಗ್ರೆಸ್ ಪಕ್ಷದ ಏಳಿಗೆಗಾಗಿ ದುಡಿದು ನಂತರ ಹಲವು ರಾಜ್ಯಗಳಲ್ಲಿ ಪಕ್ಷದ ವೀಕ್ಷಕರಾಗಿ ಕಾರ್ಯನಿರ್ವಹಿಸಿದ್ದಾರೆಂದರು.
ಪಕ್ಷದ ವೀಕ್ಷಕರಾದ ರಮೇಶ್, ಸ್ಥಳೀಯ ಮುಖಂಡರಾದ ಜಿ.ಎಂ. ರಾಮಚಂದ್ರ, ನಗರಸಭಾ ಸದಸ್ಯೆ ಲಕ್ಷ್ಮಿದೇವಿ, ನರಸಿಂಹಯ್ಯ ಮೊದಲಾದವರು ಉಪಸ್ಥಿತರಿದ್ದರು. ಮೈಲಾರಪ್ಪ ಸ್ವಾಗತಿಸಿದರು. ಟಿ.ವಿ. ಗೋವಿಂದಸ್ವಾಮಿ ನಿರೂಪಿಸಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.