ಶಿವಮೊಗ್ಗ

ಕಪಾಳಮೋಕ್ಷ ಮಾಡಿದ ವಿದ್ಯಾರ್ಥಿನಿ

Published On :

ಶಿವಮೊಗ್ಗ: ವಿದ್ಯಾರ್ಥಿನಿಯೊಬ್ಬಳು ತನ್ನ ವಾಹನಕ್ಕೆ ಡಿಕ್ಕಿ ಹೊಡೆದ ಕಾರು ಚಾಲಕ ಕಾಲೇಜು ವಿದ್ಯಾರ್ಥಿಗೆ ಸಾರ್ವಜನಿಕರ ಸಮ್ಮುಖದಲ್ಲೇ ಧರ್ಮದೇಟು ನೀಡಿದ ಪ್ರಸಂಗ ಇಲ್ಲಿನ ಶಿವಮೂರ್ತಿ ವೃತ್ತದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಶುಕ್ರವಾರ ನಾಲ್ಕು ಗಂಟೆ ಸುಮಾರಿಗೆ ಕಾಲೇಜು ಮುಗಿಸಿಕೊಂಡು ಬಂದ ವಿದ್ಯಾರ್ಥಿನಿಯರಿಬ್ಬರು ಶಿವಮೂರ್ತಿ ವೃತ್ತದಲ್ಲಿ ದ್ವಿಚಕ್ರ ವಾಹನದಲ್ಲಿ ಸಾಗುತ್ತಿರುವ ವೇಳೆ ಹಿಂದಿನಿಂದ ಬಂದ ಕಾರು ಚಾಲಕ ದ್ವಿಚಕ್ರ ವಾಹನಕ್ಕೆ ಆಕಸ್ಮಿಕವಾಗಿ ಡಿಕ್ಕಿಹೊಡೆದಿದ್ದಾನೆ. ವಾಹನ ಜಖಂಗೊಂಡಿದೆ.
ತಕ್ಷಣವೇ ಕ್ಷಮೆ ಕೋರಿದ ಕಾರು ಚಾಲಕ ವಿದ್ಯಾರ್ಥಿ, ದ್ವಿಚಕ್ರ ವಾಹನವನ್ನು ರಿಪೇರಿ ಮಾಡಿಸಿಕೊಡುವಾಗಿ ಭರವಸೆಕೊಟ್ಟಿದ್ದಾನೆ. ಈ ಸಂದರ್ಭದಲ್ಲಿ ಕೆರಳಿದ ವಿದ್ಯಾರ್ಥಿನಿಯರು ಕಾರು ಚಾಲಕನ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ, ಕಪಾಳಮೋಕ್ಷ ಮಾಡಿದ್ದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದನ್ನು ಕಂಡ ಸುತ್ತಮುತ್ತಲಿನ ಜನರು ಕಾರು ಚಾಲಕ ವಿದ್ಯಾರ್ಥಿಯ ನೆರವಿಗೆ ಬಂದಿದ್ದಾರೆ. ಅಪಘಾತ ಆಕಸ್ಮಿಕ, ವಾಹನ ರಿಪೇರಿ ಮಾಡಿಸಿಕೊಡುವುದಾಗಿ ಹೇಳಿದರೂ ನಿಂದಿಸುತ್ತಿರುವುದನ್ನು ಖಂಡಿಸಿದರು. ಈ ಸಂದರ್ಭದಲ್ಲಿ ಆ ವಿದ್ಯಾರ್ಥಿನಿಯು ಸಾರ್ವಜನಿಕರ ಮೇಲೆ ಎಗರಿ ಬಿದ್ದಿದ್ದಾರೆ.
ಅಂತಿಮವಾಗಿ ಚಾಲಕ ವಿದ್ಯಾರ್ಥಿ ಜಯನಗರ ಪೊಲೀಸ್ ಠಾಣೆಯ ಮೊರೆ ಹೋಗಿದ್ದಾನೆ. ಅಲ್ಲಿ ಮಾತುಕತೆ ನಡೆದು ನಂತರ ಪ್ರಕರಣ ವಿದ್ಯಾನಗರದ ಸಂಚಾರಿ ಠಾಣೆಗೆ ವರ್ಗಾಯಿಸಲಾಯಿತು. ರಾಜಿ ಸಂಧಾನ ಪ್ರಕ್ರಿಯೆ ನಡೆಯಿತು. ಘಟನೆಗೆ ಸಂಬಂಧಪಟ್ಟಂತೆ ಯಾವುದೇ ಪ್ರಕರಣ ದಾಖಲಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಕ್ಕಿ: ಸವಾರ ಸಾವು
ಸಾಗರ: ತಾಲೂಕಿನ ರಾ.ಹೆ. 206ರ ದಾಸಕೊಪ್ಪ ಕೆರೆ ಏರಿ ಮೇಲೆ ಕಾರು ಹಾಗೂ ಸೈಕಲ್ ನಡುವೆ ಡಿಕ್ಕಿ ಸಂಭವಿಸಿ ಸೈಕಲ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.
ಬೆಂಗಳೂರಿನಿಂದ ಸಿಗಂದೂರುಗೆ ಬರುತ್ತಿದ್ದ ಟಾಟಾ ಫಾರ್ಚೂನ್ ಕಾರು ಹಾಗೂ ಆನಂದಪುರಂನಿಂದ ದಾಸಕೊಪ್ಪ ಬರುತ್ತಿದ್ದ ಸೈಕಲ್ ಸವಾರನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಸೈಕಲ್ ಸವಾರ ಕೃಷ್ಣ (18) ಸ್ಥಳದಲ್ಲಿಯೆ ಮೃತಪಟ್ಟಿದ್ದಾರೆ.
ಕೃಷ್ಣ ಮೂಲತ- ರಾಣಿಬೆನ್ನೂರು ತಾಲೂಕಿನ ಬೇಲೂರು ಗ್ರಾಮದವರಾಗಿದ್ದು, ದಾಸಕೊಪ್ಪದಲ್ಲಿ ಜೆಸಿಬಿ ಕೆಲಸಕ್ಕೆ ಬಂದಿದ್ದರು ಎಂದು ಮೂಲಗಳು ತಿಳಿಸಿ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.