'ನವೀನ್ಗೆ ಸನ್ಮಾನಿಸಬೇಕು'
ಹೊಸನಗರ: ಕಬೀರ್ ಮರಣಕ್ಕೆ 10 ಲಕ್ಷ ಪರಿಹಾರ ಘೋಷಿಸಿ, ತನಕೋಡು ಪ್ರಕರಣದಲ್ಲಿ ಪ್ರಾಮಾಣಿಕ ಕರ್ತವ್ಯ ಮಾಡಿದ ಪೊಲೀಸ್ ನವೀನ್ ನಾಯಕ್ಗೆ ಶಿಕ್ಷೆ ವಿಧಿಸಲು ಹೊರಟಿರುವುದು ಅಕ್ಷ್ಯಮ್ಯ ಅಪರಾಧ ಎಂದು ಆರೋಪಿಸಿ ತಾಲೂಕು ಬಿಜೆಪಿ ಘಟಕ ಶನಿವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿತು. ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರು, ಸಿಬ್ಬಂದಿ ನವೀನ್ ನಾಯಕ್ಗೆ ಈ ವಿಚಾರದಲ್ಲಿ ಸನ್ಮಾನ ನೀಡಬೇಕು ಎಂದು ಒತ್ತಾಯಿಸಿದರು. ಕಬೀರ್ ಅಪರಾಧಿ ಎಂಬುದು ಸರ್ಕಾರಕ್ಕೆ ಗೊತ್ತಿಲ್ಲವೆ? ತುಷ್ಟೀಕರಣ ರಾಜಕಾರಣ ಸರ್ಕಾರ ಕೈ ಬಿಡಬೇಕು. ರಾಷ್ಟ್ರಪತಿ ಪದಕ ಪುರಸ್ಕೃತ ನವೀನ್ಕುಮಾರ್ ಪೊಲೀಸರ ಜೀವ ಹಾನಿ ತಪ್ಪಿಸಲು ಗುಂಡು ಹಾರಿಸಬೇಕಾಯಿತು. ಇದನ್ನು ಗಮನಿಸದ ಸರ್ಕಾರ ಎಎನ್ಎಸ್ ಪೊಲೀಸ್ ಸಿಬ್ಬಂದಿ ಸ್ಥೈರ್ಯ ಕುಗ್ಗಿಸುವ ಕಾರ್ಯಕ್ಕೆ ಮುಂದಾಗಿದೆ. ಇದನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದರು. ನಂತರ ತಹಸೀಲ್ದಾರ್ ವಿಲಾಂಜೇಕರ್ ಅವರಿಗೆ ಮನವಿ ಅರ್ಪಿಸಲಾಯಿತು. ಪ್ರತಿಭಟನೆಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಕೃಷ್ಣಮೂರ್ತಿ, ಬಿಜೆಪಿ ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ಜಯಂತಿ, ಎ.ವಿ. ಮಲ್ಲಿಕಾರ್ಜುನ್, ದಿನೇಶ್, ಸುರೇಶ್, ನಾಗರತ್ನ, ಮಂಜುನಾಥಗೌಡ, ತೀರ್ಥೇಶ್ ಇತರರು ಇದ್ದರು.
ನೇತ್ರರೋಗ: ಉಪನ್ಯಾಸ ಇಂದು
ಶಿವಮೊಗ್ಗ: ಮಲೆನಾಡು ಹೃದಯ ಪ್ರತಿಷ್ಠಾನ ಹಾಗೂ ನಿರಾಯಮ ಯೋಗ ಕೇಂದ್ರ ಮೇ 4ರಂದು ಕಣ್ಣಿನ ಸಾಮಾನ್ಯ ರೋಗಗಳು ಮತ್ತು ಪರಿಹಾರ ಕುರಿತು ಉಪನ್ಯಾಸ ಏರ್ಪಡಿಸಲಾಗಿದೆ. ಅಂದು ಸಂಜೆ 6ಕ್ಕೆ ನಗರದ ಪಾರ್ಕ್ ಬಡಾವಣೆಯ ಹೆಗ್ಡೆ ಹೆಲ್ತ್ ಕಾಂಪ್ಲೆಕ್ಸ್ನಲ್ಲಿ ಭಾರತಿ ಚಂದ್ರಕಾಂತ್ ಉಪನ್ಯಾಸ ನಡೆಸಿಕೊಡುವರು. ಪ್ರತಿದಿನ ಬೆಳಗ್ಗೆ 6 ರಿಂದ 8ರವರೆಗೆ ಇದೇ ಸ್ಥಳದಲ್ಲಿ ಉಚಿತ ಯೋಗ ತರಬೇತಿ ಶಿಬಿರ ಏರ್ಪಡಿಸಲಾಗಿದೆ. ಆಸಕ್ತರು ಮೊ. 9886534924 ಸಂಪರ್ಕಿಸಬಹುದು ಎಂದು ಡಾ. ಎಸ್.ಬಿ. ಹೆಗ್ಡೆ ತಿಳಿಸಿದ್ದಾರೆ.
ಪೂರ್ವಭಾವಿ ಸಭೆ ಇಂದು
ಶಿವಮೊಗ್ಗ: ವಿಶ್ವಕರ್ಮ ಜಗದ್ಗುರು ಅರೆಮಾದನಹಳ್ಳಿ ಮಹಾಸಂಸ್ಥಾನ ಮಠದ ಶಿವಸುಜ್ಞಾನ ತೀರ್ಥಮಹಾಸ್ವಾಮಿಯವರ 32ನೇ ಚಾತುರ್ಮಾಸ್ಯ ವ್ರತಾನುಷ್ಠಾನ ನಡೆಸುವ ಸಲುವಾಗಿ ಮೇ 4ರಂದು ಬೆಳಗ್ಗೆ 11ಕ್ಕೆ ನಗರದ ಗಾಂಧಿ ಬಜಾರಿನಲ್ಲಿರುವ ಕಾಳಿಕಾ ಪರಮೇಶ್ವರಿ ಸೊಸೈಟಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಏರ್ಪಡಿಸಲಾಗಿದೆ ಎಂದು ಜಿಲ್ಲಾ ವಿಶ್ವಕರ್ಮ ಮಹಾಸಭಾ ಕಾರ್ಯದರ್ಶಿ ಎಂ.ಬಿ. ಬಸವರಾಜ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

