ಶಿವಮೊಗ್ಗ

ಅವೈಜ್ಞಾನಿಕ ಸಿಗ್ನಲ್ ದೀಪ ಅಳವಡಿಕೆ

Published On :

ಶಿವಮೊಗ್ಗದ ಪೊಲೀಸ್ ಚೌಕಿಯಲ್ಲಿ ಸಿಗ್ನಲ್ ಲೈಟ್ ಅಳವಡಿಕೆ ಅತ್ಯಂತ ಅವೈಜ್ಞಾನಿಕವಾಗಿದೆ. ಅತ್ಯಂತ ಜನನಿಬಿಡ ಪ್ರದೇಶವಿದು. ವಾಹನಗಳ ಓಡಾಟವೂ ಅತಿ ಹೆಚ್ಚು. ಶಿವಮೊಗ್ಗ ನಗರವು ಈ ದಿಕ್ಕಿನಲ್ಲೇ ಹೆಚ್ಚು ಬೆಳೆಯುತ್ತಿರುವುದರಿಂದ ಯಾವಾಗಲೂ ಸಹ ಇಲ್ಲಿ ಜನಜಂಗುಳಿ ಇರುತ್ತದೆ. ಅಂಗಡಿ ಮುಂಗಟ್ಟುಗಳ ಸಂಖ್ಯೆಯೂ ಹೆಚ್ಚು. ಆದರೆ ಈ ವೃತ್ತದಲ್ಲಿ ಈ ಜಾಗದಲ್ಲಿ ಪೊಲೀಸರೂ ಸರ್ವಕಾಲದಲ್ಲೂ ಇರುವುದಿಲ್ಲ ಹಾಗಾಗಿ ಕಾರಣ ವಾಹನಗಳು ಎರ್ರಾಬಿರ್ರಿ ನುಗ್ಗುತ್ತಿರುತ್ತವೆ. ಈ ರೀತಿ ಅವೈಜ್ಞಾನಿಕ ಸಿಗ್ನಲ್ ದೀಪದ ಕಾರಣದಿಂದಲೇ ಒಮ್ಮೆ ಸಿಟಿ ಬಸ್ ಡಿಕ್ಕಿಯಾಗಿ ಬೈಕ್ ಸವಾರನೊಬ್ಬ ಮೃತಪಟ್ಟಿದ್ದ. ಇಂತಹ ಪರಿಸ್ಥಿತಿ ಮತ್ತೊಮ್ಮೆ ಮರುಕಳಿಸುವ ವರೆಗೂ ಸರಿಯಾಗುವುದಿಲ್ಲವೇನೋ ಎಂಬ ಪರಿಸ್ಥಿತಿ ಇದೆ. ಪೊಲೀಸ್ ಇಲಾಖೆ ಕೂಡಲೇ ಈ ಗಮನ ಹರಿಸಿ ಸೂಕ್ತ ಸಂಚಾರ ನಿಯಂತ್ರಣ ವ್ಯವಸ್ಥೆ ಮಾಡಬೇಕು.
ಟಿ ರಮೇಶ್ ಎಂ., ಶಿವಮೊಗ್ಗ
ಬೀದಿ ದೀಪ ಹಾಕಿ
ಶಿವಮೊಗ್ಗದ ಲಾಲ್ ಬಹದ್ದೂರ್ ಶಾಸ್ತ್ರಿ ನಗರದ ಹಲವು ಬೀದಿ ದೀಪಗಳು ಹಲವು ದಿನಗಳಿಂದ ನಂದಿ ಹೋಗಿವೆ. ಬಹಳಾ ಮುಖ್ಯವಾಗಿ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿ ನಿಲಯವಿರುವ ಮೊದಲ ತಿರುವಿನಲ್ಲಿರುವ ಬೀದಿ ದೀಪಗಳು ಕೆಟ್ಟು ಹೋಗಿವೆ. ಈ ರಸ್ತೆಯಲ್ಲಿ ಹಲವು ಬಾರಿ ಸರಗಳ್ಳತನಗಳು ನಡೆದಿವೆ. ವಿದ್ಯಾರ್ಥಿನಿ ನಿಲಯದ ಬಾಲಕಿಯರು ಹಾಗೂ ಮಹಿಳೆಯರು ಸಂಜೆ ನಂತರ ಮನೆಯಿಂದ ಹೊರಗೆ ಬರಲು ಯೋಚನೆ ಮಾಡುವಂತಹ ಪರಿಸ್ಥಿತಿ ಉಂಟಾಗಿದೆ. ನಗರಸಭೆ ಕೂಡಲೇ ಇತ್ತ ಗಮನ ಹರಿಸಿ ಬೀದಿ ದೀಪಗಳ ದುರಸ್ಥಿ ಮಾಡಬೇಕು. ಸುಮ್ಮನೆ ತೆರಿಗೆ ಕಟ್ಟಿಸಿಕೊಂಡು ಇರುವುದಲ್ಲ. ಪುರಪಿತೃಗಳು ಇತ್ತ ಗಮನ ಹರಿಸಲಿ.
ಟಿ ಸರೋಜಮ್ಮ, ಶಿವಮೊಗ್ಗ
ರಸ್ತೆ ವಿಭಜಕ ಅಳವಡಿಸಿ
ಶಿವಮೊಗ್ಗದ ಸವಳಂಗ ರಸ್ತೆಯಲ್ಲಿರುವ ರೇಲ್ವೆ ಗೇಟು ಹಾಕಿದಾಗ ಎರಡೂ ಬದಿಯಲ್ಲಿ ವಾಹನಗಳು ಕಿಕ್ಕಿರಿದು ನಿಲ್ಲುತ್ತಿವೆ. ಗೇಟು ತೆರೆದ ನಂತರ ಒಮ್ಮೆಲೇ ನುಗ್ಗುವುದರಿಂದ ಒಂದು ನಿಮಿಷದಲ್ಲಿ ಆಗುವ ಕೆಲಸಕ್ಕೆ ಹತ್ತಾರು ನಿಮಿಷ ಜಗ್ಗಾಟ ನಡೆಯುತ್ತದೆ. ಈ ರಸ್ತೆಯಲ್ಲಿ ರೈಲ್ವೆ ಗೇಟ್ ವರೆಗೆ ರಸ್ತೆ ವಿಭಜಕವನ್ನು ಎರಡೂ ಬದಿಯಲ್ಲಿ ಅಳವಡಿಸುವ ಅವಶ್ಯಕತೆ ಇದೆ. ಅಲ್ಲದೇ ರಾಂಗ್ ಸೈಡ್ ನಲ್ಲಿ ಬರುವ ವಾಹನ ಚಾಲಕರನ್ನು ನಿಯಂತ್ರಿಸಲು ಗೇಟ್ ಹಾಕಿದಾಗ ಪೊಲೀಸ್ ಸಿಬ್ಬಂದಿ ನಿಲ್ಲುವ ಅಗತ್ಯವೂ ಇದೆ. ಹೀಗಾದರೆ ಮಾತ್ರ ವಾಹನ ಸಂಚಾರ ಸರಾಗವಾಗಿರಲು ಸಾಧ್ಯ. ಆದ್ದರಿಂದ ನಗರಸಭೆ ಕೂಡಲೇ ಈ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಸುಮ್ಮನೆ ವಾಹನ ಸವಾರರ ನಡುವೆ ಮಾತಿನ ಚಕಮಕಿ ನಡೆಯುತ್ತಿರುತ್ತವೆ.
ಟಿ ರಾಮಚಂದ್ರ, ರವೀಂದ್ರ ನಗರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.