ಬದಲಿ ಇಂಧನ ಬಳಕೆಯಿಂದ ಸ್ವಾವಲಂಬನೆ ಸಾಧ್ಯ
ಕ.ಪ್ರ.ವಾರ್ತೆ ಟಿ ಹೊಸನಗರ ಟಿ ಏ. 6
ಸೋಲಾರ್ ನಂತಹ ಬದಲಿ ಇಂಧನ ಬಳಸಿ, ಜನರು ಸ್ವಾವಲಂಬಿಗಳಾಗಬೇಕು ಎಂದು ಬೆಂಗಳೂರು ಹೈಕೋರ್ಟ್ ನ್ಯಾಯವಾದಿ ಸೂರೆಘಟ್ಟ ಗಂಗಾಧರ ಐತಾಳ್ ಹೇಳಿದರು.
ಸೆಲ್ಕೋ ಸೋಲಾರ್ ಲೈಟ್ ಲಿ. ಆಶ್ರಯದಲ್ಲಿ ಕಾರಣಗಿರಿ ಸಿದ್ಧಿವಿನಾಯಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಹಾಗೂ ಗ್ರಾಮಭಾರತಿ ಟ್ರಸ್ಟ್ ಸಹಯೋಗದಲ್ಲಿ ನಡೆದ ಎಸ್-20 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯೋಜನೆಗಾಗಿ ಜನರ ತ್ಯಾಗ: ಮಲೆನಾಡಿನ ಜನ ಜಲವಿದ್ಯುತ್ ಯೋಜನೆಗಾಗಿ ಸಾಕಷ್ಟು ತ್ಯಾಗ ಮಾಡಿದ್ದಾರೆ. ಆದರೆ ಎಲ್ಲವನ್ನೂ ತ್ಯಾಗ ಮಾಡಿದ ಕುಟುಂಬಗಳಿಗೆ ದಿನಪೂರ್ತಿ ವಿದ್ಯುತ್ ಕೊಡುವ ಶಕ್ತಿ ಸರ್ಕಾರಕ್ಕಿಲ್ಲ. ವಿದ್ಯುತ್ತಿಗಾಗಿ ಸರ್ಕಾರಗಳನ್ನು ನಂಬಿಕೊಂಡಿರುವ ಬದಲು ಜನ ಸೌರವಿದ್ಯುತ್ ಮೂಲಕ ಸ್ವಾವಲಂಬಿಗಳಾಗುವುದು ಒಳ್ಳೆಯದು. ಈ ದಿಸೆಯಲ್ಲಿ ಹನಿಯ ಹಾಗೂ ಕುಂಭತ್ತಿಗಳನ್ನು ಸಂಪೂರ್ಣ ಸೌರ ಗ್ರಾಮವಾಗಿ ಪರಿವರ್ತಿಸಿದ ಕೀರ್ತಿ ಗ್ರಾಮಭಾರತಿ ಟ್ರಸ್ಟ್ ಹಾಗೂ ಸೆಲ್ಕೋ ಸೋಲಾರ್ ಕಂಪನಿಗೆ ಸಲ್ಲುತ್ತದೆ ಎಂದರು.
ಸೆಲ್ಕೋ ಸಂಸ್ಥೆ ಕಾರ್ಯನಿರ್ವಾಹಕ ಅಧಿಕಾರಿ ಮೋಹನ ಭಾಸ್ಕರ ಹೆಗಡೆ ಮಾತನಾಡಿ, ಸೆಲ್ಕೋ ಸಂಸ್ಥೆ ಲಾಭಕ್ಕಾಗಿ ಬೆಳಕು ನೀಡುವ ಕೆಲಸ ಮಾಡಿಲ್ಲ. ವಿದ್ಯುತ್ ಇಲ್ಲದ ಕುಗ್ರಾಮಗಳಿಗೆ ಸೋಲಾರ್ ವಿದ್ಯುತ್ ನೀಡಲು ಹೆಚ್ಚು ಆದ್ಯತೆ ನೀಡಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಕತ್ತಲೆಯಿಂದ ತೊಂದರೆಯಾಗಬಾರದು ಎಂದು ಶಿಕ್ಷಣಕ್ಕಾಗಿ ಬೆಳಕು ಯೋಜನೆಯಡಿ ಸಾವಿರಾರು ಗ್ರಾಮೀಣ ಮಕ್ಕಳಿಗೆ ಸೌರದೀಪ ನೀಡಿದೆ ಎಂದರು.
ವಿವಿಧ ಕಾರ್ಯಕ್ರಮ: ಸೆಲ್ಕೋ ಸಂಸ್ಥೆಯ ಡೆಪ್ಯುಟಿ ಜನರಲ್ ಮ್ಯಾನೇಜರ್ ಜಗದೀಶ್ ಮಾತನಾಡಿ, ಸೆಲ್ಕೋ ಸಂಸ್ಥೆ ತನ್ನ 20 ವರ್ಷ ಸಾರ್ಥಕ ಸಾಧನೆ ನೆನಪಿನಲ್ಲಿ ಯಕ್ಷಗಾನ ಶಿಕ್ಷಣ, ಶಕ್ತಿ ಹಾಗೂ ಸೋಲಾರ್ ವಿಷಯಗಳಿಗೆ ಆದ್ಯತೆ ನೀಡಿ ಕಾರ್ಯಕ್ರಮ ಮಾಡುತ್ತಿದೆ ಎಂದರು. ಸಂಸ್ಥೆಯ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಗುರುಪ್ರಸಾದ್ ಶೆಟ್ಟಿ ದಿಕ್ಸೂಚಿ ಭಾಷಣ ಮಾಡಿದರು.
ಸಿದ್ಧಿವಿನಾಯಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಹಾಗೂ ಗ್ರಾಮಭಾರತಿ ಅಧ್ಯಕ್ಷ ಎನ್.ಡಿ. ನಾಗೇಂದ್ರ ರಾವ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಮಭಾರತಿ ಕಾರ್ಯದರ್ಶಿ ಹನಿಯ ರವಿ ನಿರೂಪಿಸಿದರು. ಏರಿಯಾ ಮ್ಯಾನೇಜರ್ ಶೇಖರ ಶೆಟ್ಟಿ ಸ್ವಾಗತಿಸಿದರು. ಬ್ರಾಂಚ್ ಮ್ಯಾನೇಜರ್ ವಿ.ಜಿ. ಹೆಗಡೆ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

