ಶಿವಮೊಗ್ಗ

ಕೈಮಗ್ಗ ಸತ್ಯಾಗ್ರಹ ಮುಂದುವರಿಕೆಗೆ ನಿರ್ಧಾರ

Published On :

ಕ.ಪ್ರ.ವಾರ್ತೆ ್ಣ ಸಾಗರ ್ಣ ಮೇ 14
ಕೈಮಗ್ಗ ಸತ್ಯಾಗ್ರಹ ಮುಂದುವರಿಸುವ ಬಗ್ಗೆ ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಕೈಮಗ್ಗ ನೇಕಾರರ ಸಂಘಟನೆಗಳ ಪ್ರಮುಖರ ಸಮಾಲೋಚನಾ ಸಭೆ ಸೋಮವಾರ ಹೆಗ್ಗೋಡು ಸಮೀಪದ ಹೊನ್ನೇಸರ ಶ್ರಮಜೀವಿ ಆಶ್ರಮದಲ್ಲಿ ನಡೆಯಿತು.
ಸಭೆಯಲ್ಲಿ ಪ್ರಸ್ತುತ ನೇಕಾರರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದು, ಹೋರಾಟದಂತಹ ಚಟುವಟಿಕೆಗಳಲ್ಲಿ ಅವರು ಪಾಲ್ಗೊಳ್ಳಲು ಮಾನಸಿಕ ಹಾಗೂ ಆರ್ಥಿಕವಾಗಿ ಶಕ್ತಿಶಾಲಿಗಳಾಗಿಲ್ಲ. ಕೈಮಗ್ಗ ಉದ್ದಿಮೆಯನ್ನು ಪ್ರವೇಶಿಸಿ ಮೂಲ ನೇಕಾರಿಕೆಗೆ ಧಕ್ಕೆ ಉಂಟು ಮಾಡಿರುವ ವಿದ್ಯುತ್ ಮಗ್ಗ ಅಳವಡಿಸುವ ಪ್ರಕ್ರಿಯೆ ನಿಲ್ಲಿಸಬೇಕು ಎಂದು ಈಗಾಗಲೆ ಒಂದು ಸುತ್ತಿನ ಹೋರಾಟ ಮಾಡಲಾಗಿದೆ. ಅದನ್ನು ದೇಶವ್ಯಾಪಿ ಇನ್ನಷ್ಟು ಪರಿಣಾಮಕಾರಿಯಾಗಿ ವಿಸ್ತರಿಸುವ ನಿಟ್ಟಿನಲ್ಲಿ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.
ಘಟಕಗಳ ಅಭಿವೃದ್ಧಿ:  ಮುಂದಿನ ದಿನಗಳಲ್ಲಿ ಖಾದಿ ಮತ್ತು ಕೈಮಗ್ಗ ಘಟಕಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ವ್ಯಾಪ್ತಿಗೆ ತರುವುದು, ಕೈಮಗ್ಗಕ್ಕೆ ರಾಷ್ಟ್ರೀಯ ಕೈಮಗ್ಗ ನೀತಿ ರೂಪಿಸಬೇಕೆಂದು ಸರ್ಕಾರದ ಮೇಲೆ ಒತ್ತಡ ಹೇರುವ ಕುರಿತು ಚರ್ಚೆ ನಡೆಯಿತು. ಕೈಮಗ್ಗ ನೇಕಾರರಲ್ಲಿ ಆತ್ಮಸ್ಥೈರ್ಯ ವೃದ್ಧಿಸುವ ನಿಟ್ಟಿನಲ್ಲಿ ಘಟಕಗಳನ್ನು ಅಭಿವೃದ್ಧಿಪಡಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು.
ಚರಕ ಸಂಸ್ಥೆಯ ಪ್ರಸನ್ನ, ಅಖಿಲ ಭಾರತ ಕೈಮಗ್ಗ ಸಂಘಟನೆಗಳ ಒಕ್ಕೂಟದ ಅಧ್ಯಕ್ಷೆ ಉಜ್ರಮ್ಮ, ರಾಜ್ಯ ಸಂಚಾಲಕ ಎಸ್.ಸಿ. ದೇವರಮನಿ, ಆಂಧ್ರಪ್ರದೇಶದ ದಸ್ತಕಾರ್ ಸಂಸ್ಥೆಯ ಲತಾ ರೆಡ್ಡಿ, ಶ್ಯಾಮಸುಂದರಿ, ಮೋಹನರಾವ್ ಬೆಳಗಾವಿ, ಗೋಪಿಕೃಷ್ಣ, ಇಂಡಿಯನ್ ಇನ್‌ಸ್ಟಿಟ್ಟೂಟ್ ಸಂಸ್ಥೆಯ ಸುರೇಶ್ ಭಾಗವತರು, ರಾಜಲಕ್ಷ್ಮೀ ಕಾಮತ್, ಕೆ.ಪಿ. ಸುರೇಶ್, ಗಜೇಂದ್ರಗಡದ ಆದಿಶಕ್ತಿ ಕೈಮಗ್ಗ ನೇಕಾರರ ಸಂಘದ ವಿಶ್ವನಾಥ್, ಮಹಾಲಿಂಗಾಪುರದ ಶಿವಶಂಕರ್, ಅಂಬರ ಚಿತ್ತಾರದ ಎನ್.ಎಂ.ಕುಲಕರ್ಣಿ, ಚರಕ ಸಂಸ್ಥೆಯ ಪದ್ಮಶ್ರೀ, ರಾಜಶೇಖರ್, ರಮೇಶ್, ಸುಂದರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.