ನಕಲಿ ರಸಗೊಬ್ಬರ: ಕೃಷಿ ಇಲಾಖೆ ಸೂಚನೆ
ಶಿವಮೊಗ್ಗ: ಕೆಲವು ರಸಗೊಬ್ಬರ ಮಾರಾಟಗಾರರು ಇತರೆ ಜಿಲ್ಲೆಯಿಂದ ವಾಹನದಲ್ಲಿ ಆಗಮಿಸಿ ಸಾಕಷ್ಟು ಪ್ರಮಾಣದಲ್ಲಿ ರಸಗೊಬ್ಬರ, ಸಾಯಿಲ್ ಕಂಡೀಷನರ್, ಸಾವಯವ ಗೊಬ್ಬರ ಎಂಬುದಾಗಿ ತಿಳಿಸಿ ರೈತರಿಗೆ ಗ್ರಾಮ ಮಟ್ಟದಲ್ಲಿಯೇ ಈ ವಾಹನದ ಮುಖಾಂತರವೇ ಅಲ್ಲಲ್ಲಿ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕೃಷಿ ಇಲಾಖೆ ಈ ರೀತಿಯಾಗಿ ಮಾರಾಟ ಮಾಡುವುದು ಕಾನೂನು ರೀತ್ಯಾ ವಂಚನೆಯ ಪ್ರಕರಣವಾಗಿರುತ್ತದೆ. ರೈತರು ಈ ರೀತಿಯಾಗಿ ರಸಗೊಬ್ಬರ, ಸಾವಯವ ಗೊಬ್ಬರವೆಂದು ನಂಬಿಸಿ ನೀಡುವ ಪರಿಕರಗಳನ್ನು ಯಾವುದೇ ಕಾರಣಕ್ಕೂ ಖರೀದಿಸಬಾರದು ಎಂದು ಕೋರಿದೆ.
ಸಂಶಯಾಸ್ಪದವಾಗಿ ರಸಗೊಬ್ಬರ, ಸಾವಯವ ಗೊಬ್ಬರ ಮಾರಾಟ ಮಾಡುವ ಪ್ರಕರಣಗಳು ತಮ್ಮ ಗ್ರಾಮದಲ್ಲಿ ಕಂಡುಬಂದಲ್ಲಿ ತಕ್ಷಣವೇ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳಿಗಾಗಲೀ ಅಥವಾ ತಾಲೂಕು ಸಹಾಯಕ ಕೃಷಿ ನಿರ್ದೇಶಕರಿಗಾಗಲೀ ತಿಳಿಸಬೇಕಾಗಿ ಕೋರಲಾಗಿದೆ.
ಇಲಾಖೆಯಿಂದ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ವಿಚಕ್ಷಣಾ ದಳ ರಚಿಸಲಾಗಿದ್ದು, ಇದರ ಮುಖ್ಯಸ್ಥರಾದ ಸಣ್ಣಕ್ಕಿ ಮಾರುತಿ, ಸಹಾಯಕ ಕೃಷಿ ನಿರ್ದೇಶಕರು(ಮೊ. 9591987304), ಸದಸ್ಯರಾದ ರಾಮಪ್ಪ ಜಕನೂರು, ಕೃಷಿ ಅಧಿಕಾರಿ (ಮೊ. 9591987380) ಅಥವಾ ಅರುಣ, ಕೃಷಿ ಅಧಿಕಾರಿ (ಮೊ. 9591987365) ಇವರಿಗೆ ದೂರು ನೀಡಬಹುದಾಗಿದೆ ಎಂದು ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಮಧುಸೂಧನ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

