ಶಿವಮೊಗ್ಗ

ಲಗ್ನ ಪತ್ರಿಕೆ ಕೊಡಲು ಹೋದ ಯುವತಿ ನಾಪತ್ತೆ

Published On :

ಶಿವಮೊಗ್ಗ: ತನ್ನ ವಿವಾಹದ ಲಗ್ನ ಪತ್ರಿಕೆಯನ್ನು ಸ್ನೇಹಿತೆಗೆ ಕೊಡಲು ತೆರಳಿದ ಯುವತಿಯೊಬ್ಬಳು ನಾಪತ್ತೆಯಾಗಿರುವ ಪ್ರಸಂಗ ನಡೆದಿದೆ.
ಹೊಳೆಹೊನ್ನೂರು ಬಳಿ ಡಿಬಿ ಹಳ್ಳಿಯವರಾದ ಪುಷ್ಪಾ (26) ನಾಪತ್ತೆಯಾದವರು, ಜೂ.4ರಂದು ಈಕೆಯ ಮದುವೆ ನಿಶ್ಚಯವಾಗಿತ್ತು. ಮೇ 23ರಂದು ಸ್ನೇಹಿತೆಯರಿಗೆ ಲಗ್ನಪತ್ರಿಕೆ ನೀಡಿಬರುವುದಾಗಿ ಮನೆಯವರಿಗೆ ಹೇಳಿ ಹೋದಾಕೆ ಪುನಃ ಮನೆಗೆ ಬಂದಿಲ್ಲ ಎಂದು ಪ್ರಕರಣ ದಾಖಲಾಗಿದೆ.
ಪೋಷಕರು ಈಕೆಯ ಬಗ್ಗೆ ಸಂಬಂಧಿಗಳು, ಪರಿಚಯಸ್ಥರು, ಸ್ನೇಹಿತರ ಮನೆಗಳಲ್ಲಿ ವಿಚಾರಿಸಿದರೂ ಅವರ ಕುರಿತಂತೆ ಯಾವುದೇ ಸುಳಿವು ಲಭ್ಯವಾಗಿಲ್ಲ. ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ.
ವಿದ್ಯಾರ್ಥಿನಿ ನಾಪತ್ತೆ
ಬಿಎ ಪರೀಕ್ಷೆ ಬರೆಯಲು ಶಿವಮೊಗ್ಗ ನಗರಕ್ಕೆ ಆಗಮಿಸಿದ್ದ ವಿದ್ಯಾರ್ಥಿನಿಯೊಬ್ಬಳು ನಾಪತ್ತೆಯಾಗಿದ್ದಾರೆ. ಹಾತಿಕಟ್ಟೆ ಗ್ರಾಮದ ನಿವಾಸಿ ಜಯಲಕ್ಷ್ಮೀ (19) ನಾಪತ್ತೆಯಾದ ಯುವತಿ ಎಂದು ಗುರುತಿಸಲಾಗಿದೆ.
ಮನೆ ಕಳ್ಳತನ
ಸವಳಂಗ ರಸ್ತೆಯ ಶಶಿಧರ ಎಂಬುವರ ಮನೆಗೆ ಕನ್ನ ಹಾಕಿರುವ ಕಳ್ಳರು ನಗ ನಾಣ್ಯ ದೋಚಿಸಿದ್ದಾರೆ.
ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ಮನೆಗೆ ನುಗ್ಗಿರುವ ಕಳ್ಳರು 2.40 ಲಕ್ಷ ರು.ಮೌಲ್ಯದ ಬಂಗಾರ, ಬೆಳ್ಳಿಯ ಆಭರಣ ಹಾಗೂ 18 ಸಾವಿರ ರುಪಾಯಿ ನಗದು ಅಪಹರಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕುವೆಂಪು ರಂಗಮಂದಿರದ ಬಳಿ ಬೈಕ್ ಕಳವು
ಇಲ್ಲಿನ ಕುವೆಂಪು ರಂಗಮಂದಿರದ ಬಳಿ ನಿಲ್ಲಿಸಿದ್ದ ಬೈಕ್‌ಮೊಂದನ್ನು ಕಳ್ಳರು ಅಪಹರಿಸಿದ್ದಾರೆ. ಹೊಸಹಳ್ಳಿ ಗ್ರಾಮದ ನಿವಾಸಿ
ಗೋಪಾಲ ಎಂಬುವರಿಗೆ ಸೇರಿದ ಕೆಎ 14 ಈಎ 1838 ನೊಂದಣೆಯ ಬೈಕ್ಕ್‌ಳುವಾಗಿದೆ. ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.