ಶಿವಮೊಗ್ಗ

ಶೇ.15 ಆಸ್ತಿ ತೆರಿಗೆ ಹೆಚ್ಚಿಸಲು ಒಪ್ಪಿಗೆ

Published On :

ಶಿರಾಳಕೊಪ್ಪ: 2014-2015ನೇ ಸಾಲಿನಿಂದ ನಿವೇಶನಗಳಿಗೆ ಆಸ್ತಿ ತೆರಿಗೆಯನ್ನು ಶೇ.15 ರಿಂದ 30 ನಿಗದಿಗೊಳಿಸುವ ವಿಚಾರದಲ್ಲಿ ಶಿರಾಳಕೊಪ್ಪ ಪಪಂ ಕರೆದ ಸಭೆಯಲ್ಲಿ ಸದಸ್ಯರು ಪಕ್ಷಾತೀತವಾಗಿ ವಿರೋಧಿಸಿ ನಂತರ ಸರ್ಕಾರದ ಆದೇಶ ಪಾಲಿಸಬೇಕೆಂಬ ಹಿನ್ನೆಲೆಯಲ್ಲಿ ಶೇ.15 ಹೆಚ್ಚಿಗೆ ಮಾಡಲು ಒಪ್ಪಿಗೆ ಕೊಟ್ಟಿತು.
ಪಪಂ ಕಚೇರಿಯಲ್ಲಿ ಕರೆಯಲಾಗಿದ್ದ ವಿಶೇಷ ತುರ್ತುಸಭೆಯಲ್ಲಿ ತೆರಿಗೆ ವಿಷಯ ಪ್ರಸ್ತಾಪಿಸಿದಾಗ ಶಿರಾಳಕೊಪ್ಪ  ಪಟ್ಟಣ ಗ್ರಾಮಾಂತರ ಪ್ರದೇಶ ಮತ್ತು ಇಲ್ಲಿ ಬಡವರೇ ಹೆಚ್ಚಾಗಿ ಇರುವುದರಿಂದ ಪಟ್ಟಣ ಪ್ರದೇಶಗಳಲ್ಲಿ ಏರಿಸಿದಂತೆ ತೆರಿಗೆ ಏರಿಸುವುದು ಸರಿಯಲ್ಲ ಎಂದು ಸದಸ್ಯರು ಪಟ್ಟಿಹಿಡಿದಿದ್ದರು.
ಸೀಮಿತವಲ್ಲ: ಆದರೆ ಮುಖ್ಯಾಧಿಕಾರಿಗಳು ತೆರಿಗೆ ಏರಿಕೆ ಶಿರಾಳಕೊಪ್ಪ ಪಟ್ಟಣಕ್ಕೆ ಮಾತ್ರ ಸೀಮಿತ ವಾಗಿಲ್ಲ. ಹಾಗೆಯೇ ಮುಂದಿನ ಮೂರು ವರ್ಷಕ್ಕೆ ತೆರಿಗೆ ನಿಗದಿ ಆಗುತ್ತದೆ. ಮುಂದಿನ ದಿನಗಳಲ್ಲಿ ಎಲ್ಲವೂ ಕಂಪ್ಯೂಟರೀಕರಣ
ವಾಗಿತ್ತದೆ ಆದ್ದರಿಂದ ಒಪ್ಪಿಗೆ ಕೊಡಬಹುದು ಎಂದು ಸದಸ್ಯರನ್ನು ಒಪ್ಪಿಸುವಲ್ಲಿ ಯಶಸ್ವಿಯಾದರು.
ಈ ಬಾರಿ ಎಸ್‌ಎಫ್‌ಸಿ ಅನುದಾನದಿಂದ ರು. 76.25 ಲಕ್ಷ ಅನುದಾನ ದೊರಕಿದ್ದು, ಸರ್ಕಾರದ ಸೂಚನೆಯಂತೆ ಪ.ಜಾತಿ ಮತ್ತು ಪ.ಪಂಗಡಗಳಿಗೆ ಉಪಯೋಗಿಸಲ್ಪಡುವ ಶೇ.22.75ಕ್ಕೆ 17.34ಲಕ್ಷ ಹಾಗೆಯೇ ಇತರ ಬಡ
ಕುಟುಂಬಕ್ಕೆ 5.52 ಲಕ್ಷ ಹಾಗೂ ಅಂಗವಿಕಲರ ಶೇ.3ರ ಯೋಜನೆಗೆ ಹಣ ನಿಗದಪಡಿಸಿ ಇತರ ಹಣವನ್ನು ಪಟ್ಟಣದ ಅಭಿವೃದ್ಧಿಗೆ ಬಳಸಲು ಸಭೆ ಒಪ್ಪಿಗೆ ನೀಡಿತು.
ಸಭೆ ಒಪ್ಪಿಗೆ: ಪರಿಹಾರ ಯೋಜನೆಯಡಿ ಮಂಜೂರಾದ ಕೊಳವೆ ಬಾವಿ ಕೊರೆಸುವ ಮತ್ತು ಪೈಪಲೈನ್ ಅಳವಡಿಸುವ ಕಾಮಗಾರಿಗೆ ಬಂದಂತಹ ಟೆಂಡರ್ ಗಳಿಗೆ ಸಭೆ ಒಪ್ಪಿಗೆ ಸೂಚಿಸಿತು.
ಪಪಂ ಅಧ್ಯಕ್ಷೆ ಜಮೀಲಾ ಖಾತೂನ್ ಸಭೆ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ನೂರ್ ಜಹಾನ್ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಯ್ಕ್ ಹಾಗೂ ಎಲ್ಲಾ ಸದಸ್ಯರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.