ತುಮಕೂರು

ಸೋಮಶೇಖರ್ ನೇಮಕ (ಸುದ್ದಿ ಸಂಕ್ಷೇಪ)

Published On :

ತುಮಕೂರು: ತುಮಕೂರು ನಗರ ಯುವ ಜಾತ್ಯತೀತ ಜನತಾದಳ ಅಧ್ಯಕ್ಷರಾಗಿ ಮೆಳೆಕೋಟೆ ಹೊಸಮನೆಯ ಎಂ. ಸೋಮಶೇಖರ್ ಅವರನ್ನು ನೇಮಕ ಮಾಡಿರುವುದಾಗಿ ನಗರ ಯುವ ಜಾತ್ಯತೀತ ಜನತಾದಳ ಅಧ್ಯಕ್ಷ ಬಿ. ಚಂದ್ರಬಾಬು ಅವರು ತಿಳಿಸಿದ್ದಾರೆ.
ಅರುಣ್ಕುಮಾರ್ಗೆ ಸನ್ಮಾನ
ತುಮಕೂರು: ತುಮಕೂರಿನ ಸಿಟಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಟಿ.ಎನ್. ಅರುಣ್ಕುಮಾರ್ ಅವರಿಗೆ ಆಸರೆ ಸ್ನೇಹ ಸಮೂಹದ ವತಿಯಿಂದ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಟಿ.ಎನ್. ಅರುಣ್ಕುಮಾರ್, ವಕೀಲ ರಾಜ್ಕುಮಾರ್, ಉಮೇಶ್, ವೆಂಕಟೇಶ್, ಚಂದನ್ ಮುಂತಾದವರು ಉಪಸ್ಥಿತರಿದ್ದರು.
ಪರೀಕ್ಷೆ ಕುರಿತು ಉಪನ್ಯಾಸ
ತುಮಕೂರು: ತುಮಕೂರಿನ ನಿಜಕವೆ ಟ್ರಸ್ಟ್ ವತಿಯಿಂದ ಕೆಂಪೇಗೌಡ ವಸತಿ ಶಾಲೆಯ 10 ನೇ ತರಗತಿ ಮಕ್ಕಳಿಗೆ ಪರೀಕ್ಷಾ ಭಯದಿಂದ ಪಾರಾಗುವುದು ಹೇಗೆ ಎಂಬ ವಿಷಯ ಕುರಿತು ಉಪನ್ಯಾಸ ಏರ್ಪಡಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ಎಂ.ಕೆ. ನಾಗರಾಜರಾವ್ ಪಾಲ್ಗೊಂಡಿದ್ದರು. ಟ್ರಸ್ಟ್ನ ಅಧ್ಯಕ್ಷ ಎಚ್.ರಾಮಾಂಜನೇಯ ಸ್ವಾಗತಿಸಿದರು. ಶಿಕ್ಷಕಿ ಪ್ರೇಮಲತಾ, ಆಡಳಿತ ವ್ಯವಸ್ಥಾಪಕಿ ಶೃತಿ ಉಪಸ್ಥಿತರಿದ್ದರು.
ಪಿಎಚ್ಡಿ ಪದವಿ
ತುಮಕೂರು: ಮಧುಗಿರಿ ತಾಲೂಕು ಗಾಳಿ ಹಳ್ಳಿ ಗ್ರಾಮದ ಡಾ. ವಿ. ಪ್ರಸನ್ನಕುಮಾರ್ ಅವರು ರಚಿಸಿರುವ ವೀರಪ್ಪ ಮೊಯ್ಲಿ ಸಾಹಿತ್ಯ ಎಂಬ ಮಹಾಪ್ರಬಂಧಕ್ಕೆ ಮೈಸೂರು ವಿಶ್ವ ವಿದ್ಯಾಲಯ ಪಿಎಚ್ಡಿ ಪದವಿ ನೀಡಿ ಗೌರವಿಸಿದೆ. ಪ್ರಾಧ್ಯಾಪಕ ಡಾ. ನಂಜಯ್ಯ ಹೊಂಗನೂರು ಅವರ ಮಾರ್ಗದರ್ಶನದಲ್ಲಿ ಈ ಪ್ರಬಂಧವನ್ನು ಸಿದ್ಧಪಡಿಸಲಾಗಿದೆ.
ರಾಮರೆಡ್ಡಿಗೆ ಸನ್ಮಾನ
ತುಮಕೂರು: ಕೇಂದ್ರ ಕಾರ್ಮಿಕ ಕಲ್ಯಾಣ ನಿಧಿ ಮಾಜಿ ಅಧ್ಯಕ್ಷ ರಾಮರೆಡ್ಡಿ ಅವರನ್ನು ಕವಿತಾಕೃಷ್ಣ ಸಾಹಿತ್ಯಮಂದಿರದಲ್ಲಿ ಗೌರವಿಸಲಾಯಿತು. ಕವಿತಾ ಕೃಷ್ಣ, ಬಿಂಬಕುಮಾರ್, ಟಿ.ಆರ್.ಎಚ್. ಪ್ರಕಾಶ್, ಸಂತ ತುಕಾರಾಂ, ಎಲೆನ್ಸಿಂಗ್ ಉಪಸ್ಥಿತರಿದ್ದರು.
ಎನ್ಎಸ್ಎಸ್ ಶಿಬಿರ
ತುಮಕೂರು: ತುಮಕೂರಿನ ಬಟವಾಡಿಯಲ್ಲಿರುವ ಸಿದ್ದಗಂಗಾ ಕೈಗಾರಿಕಾ ತರಬೇತಿ ಸಂಸ್ಥೆ ವತಿಯಿಂದ ಸಿದ್ದಗಂಗಾ ಮಠದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಶಿಬಿರವನ್ನು ಮೈದಾಳ ಗ್ರಾಪಂ ಅಧ್ಯಕ್ಷೆ ನಳಿನ ಉದ್ಘಾಟಿಸಿದರು. ಪ್ರಿನ್ಸಿಪಾಲ್ ಎನ್. ಸುನಿಲ್, ಶಿಬಿರಾಧಿಕಾರಿ ಸಿದ್ದಲಿಂಗಯ್ಯ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.