ತುಮಕೂರು

ಕಾಂಗ್ರೆಸ್ ಟಿಕೆಟ್ ನನಗೆ ಖಚಿತ: ಕೋರ್ಟ್ ನರಸಪ್ಪ

Published On :

ಕ.ಪ್ರ. ವಾರ್ತೆ   ಪಾವಗಡ   ಏ.2
ಬರುವ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯಾಗಿ ನನಗೇ ಟಿಕೆಟ್ ಖಚಿತವೆಂದು ಕಾಂಗ್ರೆಸ್ ಮುಖಂಡ ಕೋರ್ಟ್ ನರಸಪ್ಪ ತಿಳಿಸಿದರು.
ಅವರು ಪಟ್ಟಣದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಪಟ್ಟಣದ ಜೆಎಂಫ್ಸಿ ನ್ಯಾಯಾಲದಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ನಾನು ಅಂದಿನ ಪ್ರಧಾನಿ ರಾಜೀವ್ಗಾಂಧಿ ಹಾಗೂ ಸೋನಿಯಾ ಹಾಗೂ ಪಕ್ಷದ ಅನೇಕ ಹಿರಿಯ ರಾಷ್ಟ್ರ ಮುಖಂಡರು ಹಾಗೂ ರಾಜ್ಯ ಮಟ್ಟದ ಕಾಂಗ್ರೆಸ್ ನಾಯಕರ ನಾಯಕತ್ವ ಮೆಚ್ಚಿ ನ್ಯಾಯಾಲಯದ ಕೆಲಸಕ್ಕೆ ರಾಜಿನಾಮೆ ನೀಡುವ ಮೂಲಕ ಕಾಂಗ್ರೆಸ್ನಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದೇನೆ. 20ವರ್ಷಗಳಿಂದ ಟಿಕೆಟ್ಗಾಗಿ ಹೋರಾಟ ಮಾಡುತ್ತಿದ್ದೇನೆ ಎಂದರು.
 ಪಕ್ಷ ಸಂಘಟನೆಗೆ ಸಾಕಷ್ಟು ಶ್ರಮಿಸಿದ್ದೇನೆ. ಅಲ್ಲದೆ ದಲಿತ ಪರ ಸಮಸ್ಯೆ ಹಾಗೂ ಸರ್ವ ಜನಾಂಗಗಳ ಏಳಿಗೆ ಹಿನ್ನೆಲೆ ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡರ ಶಿಫಾರಸು ಮೇರೆಗೆ 3 ಬಾರಿ ಟಿಕೆಟ್ ಆಕಾಂಕ್ಷಿಯಾಗಿದ್ದೆ. 3 ಬಾರಿಯೂ ಟಿಕೆಟ್ ಕೈತಪ್ಪಿ ನನಗೆ ವಂಚನೆಯಾಗಿದೆ. ಸಕ್ರೀಯ ರಾಜಕಾರಣದ ಹಿನ್ನೆಲೆಯಲ್ಲಿ ಈ ಬಾರಿ ಕಾಂಗ್ರೆಸ್ ಟಿಕೆಟ್ ನನಗೇ ದೊರೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರ ಬೆಂಬಲದೊಂದಿಗೆ ಈ ಬಾರಿ ಪಾವಗಡ ವಿಧಾನ ಸಭಾ ಕ್ಷೇತ್ರದಿಂದ ಸ್ವರ್ಧಿಸಲು ಟಿಕೆಟ್ಗೆ ಹೋರಾಟ ನಡೆಸಿದ್ದೇನೆ. ಕೆಪಿಸಿಸಿ ಶಿಫಾರಸಿನಂತೆ ಎಐಸಿಸಿ ಕೋರ್ ಕಮಿಟಿಯಲ್ಲಿ ನನ್ನ ಹೆಸರು ಮತ್ತು ಶಾಸಕ ವೆಂಕಟರಮಣಪ್ಪ ಹೆಸರು ಮಾತ್ರ ಇದ್ದು ಹಿರಿಯ ಮುಖಂಡ ಎಸ್.ಎಂ. ಕೃಷ್ಣ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಹಿರಿಯ ಮುಖಂಡ ಸಿದ್ಧರಾಮಯ್ಯ ಮುಂತಾದ ಕಾಂಗ್ರೆಸ್ ಮುಖಂಡರು ಸೇವೆ, ಸಂಘಟನೆ ಹಾಗೂ ನನ್ನ ಪಕ್ಷನಿಷ್ಠೆ  ಪರಿಗಣಿಸಿದ್ದಾರೆ ಎಂದರು.
ಎಲ್ಲಾ ವರ್ಗದ ಬೆಂಬಲ ನನಗೆ ಇರುವುದರಿಂದ ಟಿಕೆಟ್ ನೀಡಿದರೆ ಈ ಭಾರಿ ಇಲ್ಲಿ ಕಾಂಗ್ರೆಸ್ಗೆ ಗೆಲವು ಖಚಿತವೆಂದರು.
ಪಕ್ಷದ ಸ್ಥಳೀಯ ಮುಖಂಡರ ಬೆಂಬಲ ಪಕ್ಷ ನಿಷ್ಠೆ ಹಾಗೂ ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಟಿಕೆಟ್ ನನಗೆ ಲಭ್ಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.