ಮಧುಗಿರಿಯಲ್ಲಿ ತಾರಕಕ್ಕೇರಿದ ಕುಡಿವ ನೀರಿನ ಬವಣೆ
ಮಧುಗಿರಿ: ಮಧುಗಿರಿಯಲ್ಲಿ ಕುಡಿವ ನೀರಿನ ಬವಣೆ ತಾರಕಕ್ಕೇರಿದ್ದು ಮಕ್ಕಳು ಮರಿ ಸೇರಿದಂತೆ ಕೊಡ ನೀರಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ನೀರಿನ ಸಮಸ್ಯೆ ಬಗೆ ಹರಿಸಲು ಯಾರು ಮುಂದಾಗುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಧುಗಿರಿ ತಾಲೂಕಿನಾದ್ಯಂತ ಯುಗಾದಿಗೂ ಮುನ್ನವೇ ಧಗ ಧಗ ಉರಿವ ಬೇಸಿಗೆ ಬಿರು ಬಿಸಿಲು ಜನರನ್ನು ಹೈರಾಣಗೊಳಿಸಿದೆ. 8-10 ವರ್ಷದಿಂದ ಸಮರ್ಪಕ ಮಳೆ ಬೀಳದೆ ಅಂತರ್ಜಲ ಬತ್ತಿ ಹೋಗಿ ಪಟ್ಟಣದ ವ್ಯಾಪ್ತಿಯಲ್ಲಿ ಇದ್ದಬದ್ದ ಕೊಳವೆಬಾವಿಗಳು ಬತ್ತುತ್ತಿದ್ದು ನೀರಿನ ಭವಣೆ ಹೇಳಲಸಾಧ್ಯವಾಗಿದೆ. ಆದರೂ ಆಳುವ ಜನಪ್ರತಿನಿಧಿಗಳು, ಅಧಿಕಾರಿಗಳು ಮಾತ್ರ ಪರ್ಯಾಯ ವ್ಯವಸ್ಥೆ ಮಾಡಿ ನೀರೊದಗಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಜನರು ಕಿಡಿಕಾರಿದ್ದಾರೆ.
ಬಿಸಿ ತುಪ್ಪ: ಒಂದು ಖಾಸಗಿ ಟ್ಯಾಂಕರಿನ ನೀರಿನ ಬೆಲೆ 300 ರು.ನಿಂದ 500 ರು.ಗೆ ಏರಿಸಿದ್ದು ಜನರಿಗೆ ನೀರಿನ ಸಮಸ್ಯೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಕೆಲ ನೂತನ ಪುರಸಭೆ ಸದಸ್ಯರು ಗೆಲ್ಲಿಸಿರುವ ಜನರ ಋಣ ತೀರಿಸಲು ಟ್ಯಾಂಕರ್ನಲ್ಲಿ ನೀರು ಸರಬರಾಜು ಮಾಡುವ ಮೂಲಕ ಜನರ ಹತ್ತಿರ ಸುಳಿಯುತ್ತಿದ್ದಾರೆ. ಆದರೆ ಪುರಸಭೆ ಅಧಿಕಾರಿಗಳು ಮಾತ್ರ ಕೈಗೆ ಸಿಗದೇ ಇತ್ತ ನೀರಿನ ಭವಣೆ ನೀಗಿಸದೇ ಕೈ ಚಲ್ಲಿ ಕುತಿದ್ದಾರೆ ಎಂದು ಜನರು ದೂರಿದ್ದಾರೆ. ಕೆಲ ವಾರ್ಡಗಳಲ್ಲಿ ನೀರಿದ್ದರೂ 15 ದಿನಗಳಾದರೂ ನೀರು ಬಿಡುತ್ತಿಲ್ಲ ಎಂದು ಜನತೆ ದೂರಿದ್ದಾರೆ.
ಹೇಳತೀರದ ಪಾಡು: ಇನ್ನು ತಾಲೂಕು ಕೇಂದ್ರ ಮಧುಗಿರಿ ಪಟ್ಟಣಕ್ಕೆ ತಮ್ಮ ಕಚೇರಿ ಕೆಲಸ ಕಾರ್ಯಗಳಿಗೆ ಬರುವ ಜನರಿಗೆ ಮತ್ತು ಪ್ರಯಾಣಿಕರಿಗೆ ಕುಡಿವ ನೀರಿನ ಪಾಡು ಹೇಳತೀರದು. ಪಟ್ಟಣದ ಸ್ಲಂ ಬೋರ್ಡ್, ಗೋರಿಪಾಳ್ಯ, ವಿದ್ಯಾ ನಗರ, ಮಾರುತಿ ಬಡಾವಣೆ, ಇಸ್ಲಾಂಪುರಕ್ಕೆ ನೀರು ಸರಬರಾಜು ಮಾಡುವ ಬೋರ್ ಸಂಪೂರ್ಣ ಬತ್ತಿ ಹೋಗಿದ್ದು ಈ ಭಾಗಗಳಿಗೆ ನೀರು ಬಿಟ್ಟು 15 ದಿನ ಕಳೆದಿವೆ. ಇದಲ್ಲದೆ ಇನ್ನು ಅನೇಕ ಪಟ್ಟಣದ ವಾರ್ಡ್ಗಳಲ್ಲೂ ಇದೇ ಸಮಸ್ಯೆ ತಲೆ ದೂರಿದೆ. ಆದರೂ ಪುರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಭಾಗದ ಜನತೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದೇ ಸಬೂಬು ಹೇಳಿಕೊಂಡು ಕೈ ಚೆಲ್ಲಿದ್ದಾರೆ ಎಂದು ಜನತೆ ಆಕ್ರೋಶ ವ್ಯಕ್ತಪಡಿಸಿದೆ. ಹಾಗಾಗಿ ತಾ.ಆಡಳಿತ ಮತ್ತು ಜಿಲ್ಲಾಡಳಿತ ಇತ್ತ ಗಮನ ಹರಿಸಿ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಪಟ್ಟಣದ ಜನತೆ ಆಗ್ರಹಿಸಿದ್ದಾರೆ.
ಕೆಜೆಪಿ ಯುವ ಕಾರ್ಯದರ್ಶಿಯಾಗಿ ಕೋದಂಡರಾಮು ಆಯ್ಕೆ
ತಿಪಟೂರು: ತಿಪಟೂರು ತಾಲೂಕು ಕೆಜೆಪಿ ಯುವ ಕಾರ್ಯದರ್ಶಿಯಾಗಿ ಕೋಟೆನಾಯಕನಹಳ್ಳಿಯ ಜಿ.ಕೆ. ಕೋದಂಡರಾಮು ಅವರನ್ನು ಕೆಜೆಪಿ ಮುಖಂಡರಾದ ಲೋಕೇಶ್ವರ ಆಯ್ಕೆ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

