ತುಮಕೂರು

ಪಾವಗಡ ಕ್ಷೇತ್ರಕ್ಕೆ ಹೋರಾಟಗಾರನ ಆಯ್ಕೆ: ಬಿಎಸ್ವೈ

Published On :

ಕ.ಪ್ರ. ವಾರ್ತೆ ತುಮಕೂರು ಏ.2ಕೆಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸಮ್ಮುಖದಲ್ಲಿ ಪಾವಗಡ ತಾಲೂಕು ಜೆಡಿಎಸ್ ಹಿರಿಯ ನಾಯಕ ನರಸಿಂಹರೆಡ್ಡಿ ಮತ್ತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಅಲ್ಪಸಂಖ್ಯಾತರ ಮುಖಂಡ ಪಿ. ಅಮೀರ್ ಅವರೊಂದಿಗೆ ನೂರಾರು ಜನ ಮುಖಂಡರು ಕೆಜೆಪಿಗೆ ಸೇರ್ಪಡೆಯಾದರು. ಇದೇ ಸಂದರ್ಭದಲ್ಲಿ ಯಡಿಯೂರಪ್ಪ ಮಾತನಾಡಿ ಪಾವಗಡ ಕ್ಷೇತ್ರಕ್ಕೆ ತಾಲೂಕಿನ ಸಮಸ್ಯೆಗಳಿಗೆ ಮತ್ತು ರೈತರಿಗೆ ನದಿ ನೀರಿಗಾಗಿ ಹೋರಾಟ ಮಾಡುತ್ತಿರುವ ಪಾವಗಡ ಶ್ರೀರಾಮ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿರುವುದಾಗಿ ತಿಳಿಸಿದರು.ನರಸಿಂಹರೆಡ್ಡಿ ಮಾತನಾಡಿ ನಮ್ಮ ಕ್ಷೇತ್ರದ ಮತದಾರರು ಹೊಸ ಮುಖವನ್ನು ಬಯಸುತ್ತಿದ್ದು ನಮ್ಮ ಎಲ್ಲಾ ರಾಜಕೀಯ ಅನುಭವಗಳನ್ನು ಈ ಬಾರಿ ಪ್ರಯೋಗಿಸಿ ಪಾವಗಡ ಶ್ರೀರಾಮ್ ಅವರನ್ನು ಗೆಲ್ಲಿಸುತ್ತೇವೆ ಎಂದರು.ಬಿಎಸ್ಸಾರ್ ಪಕ್ಷದ ವಿರೂಪಸಮುದ್ರ ಬಾಬ, ಕೋಟೇಶ್ವರ ರೆಡ್ಡಿ, ವಳ್ಳೂರು ಕೊಂಡಾರೆಡ್ಡಿ, ರಾಮಕೃಷ್ಣರೆಡ್ಡಿ, ಪಿ.ಎನ್. ರವಿ, ಮಡಿವಾಳ ಸಮಾಜದ ಮುಖಂಡ ಅಂಜನಪ್ಪ, ಕುರುಬ ಸಮಾಜದ ಮುಖಂಡ ವೆಂಕಟಾಪುರದ ಎಸ್. ವೆಂಕಟೇಶ್, ಎಸ್.ಬಿ. ನಾರಾಯಣಪ್ಪ, ಎಸ್.ಟಿ. ರಾಮಚಂದ್ರಪ್ಪ, ವಾಲ್ಮೀಕಿ ಸಮಾಜದ ಆರ್.ಆರ್. ಕಿಟ್ಟಿ, ಮುರುಳಿ ಕೃಷ್ಣ, ಚಂದ್ರಶೇಖರ ಶೆಟ್ಟಿ, ವಕೀಲರಾದ ಶಿವಣ್ಣ, ಗುಜನೂಡು ಜಿ.ಕೆ. ಹನುಮಂತರಾಯ, ದೌಡಬೆಟ್ಟ ನಾಗರಾಜು, ದೇವರಬೆಟ್ಟ ಶಿವಕುಮಾರ್, ತೂಮಕುಂಟ ಹನುಮಂತರಾಯ, ಹೊಸಕೋಟೆ ಇಸಾಕ್, ದಳವಾಯಿಹಳ್ಳಿ ಹನುಮಂತರಾಯ, ವೀರ್ಲಗೊಂದಿ ಹನುಮಂತರಾಯ, ಕನ್ನಮೇಡಿ ನಾಗರಾಜ್, ರಂಗೇರೊಪ್ಪ ರಾಮಕೃಷ್ಣ, ತಿಮ್ಮನಹಳ್ಳಿ ಪ್ರಕಾಶ್, ಗ್ಯಾದಿಕುಂಟೆ ರಾಮಾಂಜಿ, ಪೆಂಡ್ಲಿಜೀವಿ ಸುಬ್ಬರಾಯ, ಗ್ರಾ.ಪಂ. ಸದಸ್ಯರಾದ ರಾಮಾಂಜನಪ್ಪ, ಭೀಮಪ್ಪ, ಓಬಳನರಸಿಂಹಪ್ಪ, ಬಿ. ನಾಗರಾಜು, ಮುತ್ಯಾಲಪ್ಪ ಮುಂತಾದವರು ಕೆಜೆಪಿಗೆ ಸೇರ್ಪಡೆಯಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.