ರಂಗ ಕಲೆ ಜೀವಂತಿಕೆಯಿಂದ ಕೂಡಿದ ಸಂಜೀವಿನಿ'
ತುಮಕೂರು: ರಂಗ ಕಲೆ ಜೀವಂತಿಕೆಯಿಂದ ಕೂಡಿದ್ದು ಜನರ ನಾಡಿ ಮಿಡಿತವನ್ನ ಹಿಡಿದು ಎಲ್ಲರ ಮನಸ್ಥಿತಿಯನ್ನು ಪ್ರಚೋದಿಸಿ ಒಳತುಡಿತಗಳನ್ನು, ಆರೋಗ್ಯವಂತ ವಿಚಾರಗಳ ತುಮುಲುಗಳನ್ನು ಚಿಗುರಿಸುವ ಸಂಜೀವಿನಿಯಾಗಿದೆ ಎಂದು ಜಾನಪದ ವಿದ್ವಾಂಸ ಪಂಡಿತ್ ಶಾಮಾಚಾರ್ ಹೇಳಿದರು. ಅವರು ಸಿ.ಎಸ್. ಪುರ ದ ಜೈ ಭಾರತ್ ಯುವಕ ಸಂಘ ಹಾಗೂ ವಾಗ್ದೇವಿಯ ಭಜನಾ ಮಂಡಳಿ ಸಹಯೋಗದಲ್ಲಿ ಚಿ. ಉದಯಶಂಕರ್ ಕಲಾಮಂದಿರದಲ್ಲಿ ಮೆಳೇಕಲ್ಲಹಳ್ಳಿ ಆಯೋಜಿಸಿದ್ದ ಸುಗ್ಗಿ ರಂಗ ಸಂಭ್ರಮ 5ನೇ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜೀವಂತ ಮತ್ತು ನೈಜ ಅಭಿನಯ ಮೂಲಕ ಪ್ರೇಕ್ಷಕರನ್ನು ಮನ ಮುಟ್ಟುವಂತ ಜಾನಪದ ರಂಗ ಕಲೆ ಆಧುನಿಕ ಮಾಧ್ಯಮಗಳ ಕಿರಿಚಾಟದಿಂದ ಸ್ವಲ್ಪ ದೂರವೆ ಉಳಿಯುತ್ತಿದೆ ಎಂದರೆ ತಪ್ಪಾಗಲಾರದು ಎಂದರು.
ಗೌರಿಶಂಕರ ಸ್ವಾಮೀಜಿ ಮಾತನಾಡಿ ತಿಳುವಳಿಕೆಯ ಉತ್ಸಾಹ ಎಲ್ಲಾ ಕಾಲಮಾನಗಳ ಸ್ಥಿತಿಯಲ್ಲಿ ಒಂದೇ ರೀತಿಯಾಗಿರದೆ ಬದಲಾವಣೆಯ ಹಂತಗಳ ಮೂಲಕ ಬೆಳವಣಿಗೆಯನ್ನು ಕಂಡುಕೊಳ್ಳುತ್ತದೆ. ಇಲ್ಲದೆ ಹೋದರೆ ಸ್ಥಾವರದಂತೆ ನಿರ್ಜೀವಾಗಿ ತನ್ನ ತನದ ಜೊತೆಗೆ ನಶಿಸಿ ಹೋಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.
ಅದೇ ರೀತಿ ರಂಗ ಕಲೆ ನಿರಂತರವಾಗಿ ಬದಲಾವಣೆಯ ದಾರಿಯಲ್ಲಿ ಸಾಗಿದಾಗ ಮಾತ್ರ, ಜನತೆಯಲ್ಲಿ ಆರೋಗ್ಯವಂತ ಸಮಾಜದಲ್ಲಿ ತನ್ನ ಪಾತ್ರವನ್ನು ಪರಿಚಯಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ನಯಾಜ್ ಅಹಮದ್ ಮಾತನಾಡಿ ರಂಗಕಲೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ನಾಡಿನಾದ್ಯಂತ ಪ್ರದರ್ಶನ ನೀಡುತ್ತಿರುವ ಕುಸುಮ ಕಲಾ ಸಂಘದ ಕೆಲಸ ಅಮೋಘವಾದುದು. ಇವರ ಈ ಕಲಾ ಸೇವೆ ನಿರಂತವಾಗಿ ಸದಾಕಾಲ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯಲಿ ಎಂದರು.
ಯುವ ಸಂಘಟಕ ಗೋಪಾಲ ಕೃಷ್ಣ, ಮಧುಮತಿ ವಿಜಯಕೃಷ್ಣ ಮುಂತಾದವರಿದ್ದ ಕಾರ್ಯಕ್ರಮವನ್ನು ಮಧುಮತಿ ನಿರೂಪಿಸಿ ರಮೇಶ್ ಮೆಳೇಕಲ್ಲಹಳ್ಳಿ ಸ್ವಾಗತಿಸಿ, ತೀರ್ಥಪ್ರಸಾದ್ ವಂದಿಸಿದರು. ನಂತರ ಕುಸುಮಕಲಾಸಂಘದ ಇವರಿಂದ ವ್ಯವಸ್ಥೆ ನಾಟಕ, ರಂಗ ಪರಂಪರೆ ಟ್ರಸ್ಟ್ ಮುದ್ದಯ್ಯನ ಪಾಳ್ಯ ಇವರಿಂದ ಕವಿಣಕಲಿ ನಾಟಕಗಳು ನೆರೆದಿದ್ದ ಪ್ರೇಕ್ಷಕರನ್ನ ನಗೆಯ ಹೊನಲಿನಲ್ಲಿ ತೇಲಿಸುವಲ್ಲಿ ಯಶಸ್ವಿಯಾದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

