ತುಮಕೂರು

ಪ್ರಸ್ತುತ ಚುನಾವಣೆ ಪ್ರತಿಷ್ಠೆಯ ಕಣ

Published On :

ಕನ್ನಡಪ್ರಭ ವಾರ್ತೆ೤ ಹುಳಿಯಾರು೤ ಏ.7
ಪ್ರಸ್ತುತ ನಡೆಯಲಿರುವ ವಿಧಾನಸಭಾ ಚುನಾವಣೆಯು ಅಭ್ಯರ್ಥಿ ಹಾಗೂ ಪಕ್ಷಗಳ ಪಾಲಿನ ಪ್ರತಿಷ್ಠೆಯ ಕಣವಾಗಿರುವುದರಿಂದ  ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಪರಿಶ್ರಮ ಹಾಕಿ ಮತದಾರರ ಮನಸ್ಸಲ್ಲಿ ಬಿಜೆಪಿಗೆ ತಮ್ಮ ಮತ ಎಂಬ ಮನೋಭಾವ ಮೂಡಿಸಿ  ಪಕ್ಷವನ್ನು ಅಧಿಕಾರಕ್ಕೆ ತರುವ ಕಾರ್ಯದಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು  ಅಭ್ಯರ್ಥಿ ಹಾಗೂ ಮಾಜಿ ಶಾಸಕ ಕೆ.ಎಸ್. ಕಿರಣ್ಕುಮಾರ್ ಕರೆ ನೀಡಿದರು.
  ಹುಳಿಯಾರಿನ ವಸಂತನಗರ ಬಡಾವಣೆಯಲ್ಲಿ ನಡೆದ ಕಾರ್ಯಕರ್ತರ ಸಭೆ ಹಾಗೂ ಬಿಜೆಪಿಗೆ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
 ಒಂದು ರಾಜಕೀಯ ಪಕ್ಷ ಚುನಾವಣೆಯಲ್ಲಿ ವಿಜಯಿಶಾಲಿಯಾಗಿ ಅಧಿಕಾರದ ಗದ್ದುಗೆ ಏರಬೇಕಾದರೆ  ಪಕ್ಷದ ಅಭಿವೃದ್ಧಿ ಕಾರ್ಯಗಳು ಮತ್ತು ಕಾರ್ಯಕರ್ತರ ಉತ್ತಮ ಚಟುವಟಿಕೆಗಳೇ ಅದಕ್ಕೆ ಪ್ರಮುಖ ಕಾರಣವಾಗಲಿದ್ದು,  ಎಲ್ಲಾ ಕಾರ್ಯಕರ್ತರು  ಸಾಧನೆಯನ್ನು ಮತದಾರರಿಗೆ ಮನವರಿಕೆ ಮಾಡಿಕೊಡುವಲ್ಲಿ ಮುಂದಾಗಿ ಬಿಜೆಪಿಗೆ ಮತ ಹಾಕುವಂತೆ ಮಾಡುವ  ಕಾರ್ಯದಲ್ಲಿ ತೊಡಗಬೇಕು ಎಂದರು.
ಕೇಂದ್ರದಿಂದ ಕತ್ತರಿ: ಅಟಲ್ ಬಿಹಾರಿ ವಾಜಪೇಯಿ ಅವರ  ಅವಧಿಯಲ್ಲಿ ದೇಶಾದ್ಯಂತ ಉತ್ತಮ ರಸ್ತೆಗಳು, ಬಡವರಿಗಾಗಿ ಆರೋಗ್ಯಶ್ರೀ ಯೋಜನೆಯಂಹ ಹತ್ತು ಹಲವು ಅಭಿವೃದ್ಧಿ ಕಾರ್ಯಗಳಾಗಿದ್ದವು. ಆದರೆ ಪ್ರಸ್ತುತ ಕಾಂಗ್ರೆಸ್ ಸರಕಾರದ ಅವ್ಯವಸ್ಥಿತ ಆರ್ಥಿಕ ನೀತಿಯಿಂದಾಗಿ ದಿನನಿತ್ಯದ ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿದೆ.
 ಅಲ್ಲದೆ ಕಾಂಗ್ರೆಸ್ ಸರಕಾರವು ಕೈಗೊಳ್ಳುವ ಯೋಜನೆಗಳಿಂದಾಗಿ ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳುತ್ತಿದ್ದು, ಅಭಿವೃದ್ಧಿಯ ನೆಪದಲ್ಲಿ ಜನಸಾಮಾನ್ಯರ ಮೇಲೆ ಭಾರ ಹೇರುವಂತಹ ಹಾಗೂ ಕರ್ನಾಟಕದ ನೆರೆಹೊರೆ ರಾಜ್ಯಗಳಿಗೆ ಹೆಚ್ಚಿನ ಅನುದಾನ ನೀಡುವಂತೆ ನಮ್ಮ ರಾಜ್ಯಕ್ಕೆ  ಅನುದಾನಗಳನ್ನು ನೀಡದಿರುವ ಕಾಂಗ್ರೆಸ್ ಆಡಳಿತ ನಮಗೆ ಬೇಕೆ ಎಂದು ಕಿಡಿಕಾರಿದರು.
ಬಿಜೆಪಿ ಸಾಧನೆ: ಯಡಿಯೂರಪ್ಪನವರು ರೈತನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿ ತಮ್ಮ ಅಧಿಕಾರದ ಅವಧಿಯಲ್ಲಿ ರಾಜ್ಯದ ರೈತರ ಸಾಲಮನ್ನಾ, ಶಾಲಾಮಕ್ಕಳಿಗೆ ಉಚಿತ ಸೈಕಲ್ ವಿತರಣೆ, ಮಹಿಳೆಯರಿಗಾಗಿ ಮಡಿಲು, ಭಾಗ್ಯಲಕ್ಶ್ಮಿ ಯೋಜನೆ, ವೈದ್ಯಕೀಯ ಕ್ಷೇತ್ರದಲ್ಲಿ ಬಡವರಿಗಾಗಿ 108 ಎಂಬ ತುರ್ತುವಾಹನಗಳನ್ನು ಪ್ರತಿಯೊಂದು ಹೋಬಳಿ ಮಟ್ಟದ ಅಸ್ಪತ್ರೆಗಳಿಗೆ ನೀಡಿದ್ದಾರೆ. ಇಂದು ಅವರು ಬಿಜೆಪಿಯನ್ನು ತೊರೆದು ಬೇರೆ ಪಕ್ಷ ಕಟ್ಟಿದ್ದರೂ ಅವರು ಕೈಗೊಂಡಿದ್ದ ಕಾರ್ಯಗಳು ಬಿಜೆಪಿಯ  ಸಾಧನೆ ಎಂದರು.
 ಚಿ.ನಾ.ಹಳ್ಳಿ ಕ್ಷೇತ್ರದಲ್ಲಿ  ತಾವು ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವುದಾಗಿ ಬೀಗುವ ಶಾಸಕ ಸಿ.ಬಿ.ಸುರೇಶ್ ಬಾಬು ಅವರಿಗೆ ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆದ್ದು ಬಿಜೆಪಿ ಸರಕಾರ ಎಂಬುದನ್ನು ಅವರು ಮನದಟ್ಟು ಮಾಡಿಕೊಳ್ಳಬೇಕಿದೆ ಎಂದರು.
 ತಾಲೂಕಿಗೆ ಹೇಮಾವತಿ ನೀರು:  ರಾಜ್ಯ ಬಿಜೆಪಿ ಸರಕಾರವು ಚಿ.ನಾ.ಹಳ್ಳಿ ತಾಲೂಕು ಭಾಗದ ಜನ ನೀರಿನ ಭವಣೆಯನ್ನು ತೊಲಗಿಸುವ ನಿಟ್ಟಿನಲ್ಲಿ ಹಾಗೂ ಜನರ ಸಂಕಷ್ಟವನ್ನು ಅರಿತು ಈ ಭಾಗಕ್ಕೆ 102ಕೋಟಿ ಅನುದಾನ ಬಿಡುಗಡೆ ಮಾಡುವ ಮೂಲಕ ಹೇಮಾವತಿ ನದಿ ನೀರು ಹರಿಸಲು ಶಂಕುಸ್ಥಾಪನೆ ಮಾಡಿರುವುದು ಬಿಜೆಪಿಯ ಮೈಲುಗಲ್ಲಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ಹತ್ತು ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಲಿರುವ ಬಿಜೆಪಿಗೆ ಮತ ನೀಡುವ ಮೂಲಕ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿಗೆ ಅಧಿಕಾರದ ಗದ್ದುಗೆಯನ್ನು ನೀಡುವಂತೆ ಮನವಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.