ಇಂದಿನಿಂದ ಕೆಂಪಮ್ಮದೇವಿ ಜಾತ್ರಾ ಮಹೋತ್ಸವ
ತಿಪಟೂರು: ತಾಲೂಕಿನ ಹೊನ್ನವಳ್ಳಿ ಹೋಬಳಿ ಹಾಲ್ಕುರಿಕೆ ಗ್ರಾಮದ ಕೆಂಪಮ್ಮದೇವಿ ಮತ್ತು ಶ್ರೀ ಪ್ಲೇಗಿನಮ್ಮ ದೇವಿ ಜಾತ್ರಾ ಮಹೋತ್ಸವವು ಬುಧವಾರದಿಂದ ಏ.15ರವರೆಗೆ ನಡೆಯಲಿದೆ. ಅಮ್ಮನವರಿಗೆ ಮದವಣಗಿತ್ತಿ ಶಾಸ್ತ್ರ, ಏ.11ರಂದು ಕಂಕಣಧಾರಣೆ, ಏ. 12ರಂದು ಆರತಿಬಾನ, ಗಂಗಾಸ್ನಾನ. ಏ. 13ರಂದು ಕೆಂಪಮ್ಮದೇವಿಗೆ ಮಯೂರ ದರ್ಬಾರ್ ವಾಹನದ ಅಲಂಕಾರೋತ್ಸವ ಹಾಗೂ ಅಮೋಘ ಮದ್ದಿನ ಪ್ರದರ್ಶನ ಏರ್ಪಡಿಸಲಾಗಿದೆ. ಏ. 14ರಂದು ಅಮ್ಮನವರ ರಥೋತ್ಸವ, ಉಯ್ಯಾಲೋತ್ಸವ ಮತ್ತು ಅನ್ನಸಂತರ್ಪಣೆ. ಅಂದೇ ರಾತ್ರಿ 9.30ಕ್ಕೆ ರಾಜಸತ್ಯವ್ರತ ಅಥವಾ ಶನಿಪ್ರಭಾವ ನಾಟಕ ಏರ್ಪಡಿಸಲಾಗಿದೆ.
ರು. ಲಕ್ಷ ವರೆಗೆ ಸಾಲ ಮನ್ನಾ
ತುಮಕೂರು: ತುಮಕೂರು ಗ್ರಾಮಾಂತರದ ಗೂಳೂರಿನಲ್ಲಿ ಕೆಜೆಪಿ ಪ್ರಣಾಳಿಕೆಯ ಕೆಲ ಅಂಶಗಳನ್ನು ಕೆಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ವೈ. ಬಹಿರಂಗಪಡಿಸಿದರು. ತಮ್ಮ ಪಕ್ಷ ಅಧಿಕಾರಕ್ಕೆ ಬಂದ 3 ತಿಂಗಳಲ್ಲೇ ರೈತರ 1 ಲಕ್ಷ ರು. ವರೆಗಿನ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದರು. ಇನ್ನು 5 ವರ್ಷಗಳಲ್ಲಿ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವುದಾಗಿಯೂ, ಭಾಗ್ಯಲಕ್ಷ್ಮಿ ಯೋಜನೆಯನ್ನು ಮಧ್ಯಮವರ್ಗಕ್ಕೆ ವಿಸ್ತರಿಸುವುದಾಗಿಯೂ, ಅಲ್ಪಸಂಖ್ಯಾತರ ಅಭಿವೃದ್ಧಿಗೆ 2000 ಕೋಟಿ ಮೀಸಲಿಡುವುದಾಗಿಯೂ, ಮಹಿಳೆಯರಿಗೆ ವಿಶೇಷ ಬ್ಯಾಂಕ್ ತೆರೆಯುವ ಭರವಸೆಯನ್ನು, ಎಂಜಿನಿಯರಿಂಗ್, ಮೆಡಿಕಲ್ ಶಿಕ್ಷಣವನ್ನು ಉಚಿತವಾಗಿ ನೀಡುವ, ನಂಜುಂಡಪ್ಪ ವರದಿಯಂತೆ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಆದ್ಯತೆ ನೀಡುವ ಭರವಸೆಯನ್ನು ಬಿಎಸ್ವೈ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

